ಹಲವರಿಗೆ ಆನ್ಲೈನ್ನಲ್ಲಿ ಮೊಬೈಲ್ ನಂಬರ್ ಇಲ್ಲದೇ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಕಷ್ಟ ಎಂಬ ಅನಿಸಕೆ ಇದೆ. ಆದರೆ ನಾವು ಹೇಳುವ ಈ ವಿಧಾನಗಳನ್ನು ಅನುಸರಿಸಿದರೆ ಸುಲಭವಾಗಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ನಂಬರ್ ಇಲ್ಲದೆ ಹೇಗೆ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ.

ಇದಕ್ಕಾಗಿ ನೀವು ಮೊದಲು UIDAI ನ ಅಧಿಕೃತ ವೆಬ್ಸೈಟ್ಗೆ ಹೋಗಿ ಮತ್ತು ‘My Aadhaar’ ಅನ್ನು ಟ್ಯಾಪ್ ಮಾಡಿ. ಈಗ ‘ಆರ್ಡರ್ ಆಧಾರ್ ಪಿವಿಸಿ ಕಾರ್ಡ್’ ಮೇಲೆ ಕ್ಲಿಕ್ ಮಾಡಿ. ಈಗ ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇಲ್ಲಿ ನೀವು ಆಧಾರ್ ಸಂಖ್ಯೆಯ ಬದಲಿಗೆ 16 ಅಂಕಿಗಳ ವರ್ಚುವಲ್ ಐಡೆಂಟಿಫಿಕೇಶನ್ ಸಂಖ್ಯೆ (VID) ಅನ್ನು ಸಹ ನಮೂದಿಸಬಹುದು.
ಈ ಪ್ರಕ್ರಿಯೆಯ ನಂತರ, ನಿಮಗೆ ನೀಡಲಾದ ಸೆಕ್ಯೂರಿಟಿ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಅನ್ನು ಡೌನ್ಲೋಡ್ ಮಾಡಬೇಕಾದರೆ ‘ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಪರ್ಯಾಯ ಸಂಖ್ಯೆ ಅಥವಾ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಈಗ ‘Send OTP’ ಮೇಲೆ ಕ್ಲಿಕ್ ಮಾಡಿ :

ಈಗ ನೀವು ನಮೂದಿಸಿದ ಪರ್ಯಾಯ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್ (OTP) ಕಳುಹಿಸಲಾಗುತ್ತದೆ. ಮುಂದೆ, ನೀವು ‘ನಿಯಮ ಮತ್ತು ಷರತ್ತುಗಳು’ ಚೆಕ್ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ಅಂತಿಮವಾಗಿ ‘ಸಬ್ಮಿಟ್’ ಬಟನ್ ಒತ್ತಿ. ಈಗ ನಿಮ್ಮನ್ನು ಹೊಸ ಪುಟಕ್ಕೆ ರಿಡೈರೆಕ್ಟ್ ಮಾಡಲಾಗುತ್ತದೆ. ಮರುಮುದ್ರಣದ ಪರಿಶೀಲನೆಗಾಗಿ, ನೀವು ಪ್ರೀವ್ಯು ಆಧಾರ್ ಲೆಟರ್ ಆಯ್ಕೆಯನ್ನು ಬಳಸಬಹುದು. ಇದರ ನಂತರ ‘ಮೇಕ್ ಪೇಮೆಂಟ್’ ಆಯ್ಕೆಯನ್ನು ಆರಿಸಿಕೊಳ್ಳಿ.
UIDAI ನಿಂದ ಅಧಿಕೃತ ಮಾಹಿತಿ :

ಮೊಬೈಲ್ ಸಂಖ್ಯೆ ನೋಂದಾಯಿಸದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ (Aadhaar card download) ಮಾಡಲು ಆಧಾರ್ಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿತ್ತು. ಆದರೆ ಈಗ ಮೊಬೈಲ್ ಸಂಖ್ಯೆ ಇಲ್ಲದೆ ಕೂಡಾ, ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು ಎಂದು ಆಧಾರ್ ನೀಡುವ (UIDAI) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಈ ಮಾಹಿತಿಯನ್ನು ಪ್ರಕಟಿಸಿದೆ.