Health : ಬೇಸಿಗೆ (Summer) ಎಂದರೆ ದಾಹವಾಗುವುದು ಸಹಜ. ಆದ್ರೆ ಬೇಸಿಗೆಯ ತಾಪವನ್ನು ತಡೆದುಕೊಳ್ಳಲು ನಾವು ಥಟ್ಟನೆ ಸಿಗೋ ಕೃತಕ ಜ್ಯೂಸ್‌ಗಳನ್ನು ಕುಡಿದು ಬಿಡ್ತೇವೆ. ಆದರೆ ಈ ಕೃತಕ ರಾಸಾಯನಿಕ ಪದಾರ್ಥಯುಕ್ತ ಜ್ಯೂಸ್‌ಗಳನ್ನು (Drink five juices in summer) ಕುಡಿಯುತ್ತಾ ಹೋದ್ರೆ ನಾವು ನಮಗೆ ತಿಳಿಯದಂತೆ ನಮ್ಮ ದೇಹವನ್ನು ಅಪಾಯದಂಚಿಗೆ ತಳ್ಳುತ್ತಾ ಹೋಗುತ್ತೇವೆ.

ಅಂಗಡಿಗಳಲ್ಲಿ ಸಿಗುವ ಕೃತಕ ತಂಪು ಪಾನೀಯಗಳು ನಮ್ಮ ಗಂಟಲನ್ನಷ್ಟೇ ತಂಪು ಮಾಡುತ್ತವೆ. ಆದರೆ ನಮ್ಮ ದೇಹವು ತಂಪಾಗಬೇಕಾದರೆ ನೈಸರ್ಗಿಕವಾದಂತಹ ಪಾನೀಯಗಳನ್ನು ಸೇವಿಸುವುದು ಅತ್ಯಗತ್ಯ.
ಅವುಗಳ ಪೈಕಿ ಈ ಐದು ಪಾನೀಯಗಳನ್ನು ಕುಡಿದ್ರೆ ದಾಹವೂ ತೀರುತ್ತೆ, ದೇಹವೂ ತಂಪಾಗಿರುತ್ತೆ. ಆ ಪಾನೀಯಗಳು ಯಾವುವು ಅಂತ ನೋಡೋಣ ಬನ್ನಿ.
ಅಲೋವೆರಾ ರಸ :
ಅಲೋವೆರಾ (Aloe vera juice) ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ಇದನ್ನು ನಾವು ಮುಖಕ್ಕೆ ಹಚ್ಚಿಕೊಳ್ಳುತ್ತೇವೆ. ಆದರೆ ಇದು ದೇಹಕ್ಕೂ ತುಂಬಾ ಒಳ್ಳೆಯದು.
ಇದರಲ್ಲಿ ವಿಟಮಿನ್-ಎ (Vitamins), ವಿಟಮಿನ್-ಸಿ ಸೋಡಿಯಂ, ಐರನ್, ಕ್ಯಾಲಿಸಿಯಂ ಮುತಾಂದ ಅಂಶಗಳು ತುಂಬಾ ಇವೆ.
ಅದಲ್ಲದೆ ದೇಹದ ಕಾಂತಿಯನ್ನು ಬೇಸಿಗೆ ಕಾಲದಲ್ಲಿ ಹೆಚ್ಚಿಸಿಕೊಳ್ಳಲು ಸಹಾಯಕರಿಯಾಗಿದೆ. ಇದನ್ನು ಬೇಸಿಗೆಯಲ್ಲಿ ಜ್ಯೂಸ್ ಮಾಡಿ ಕುಡಿಯುವದರಿಂದ ತಾಜಾತನವನ್ನು ಕಂದುಕೊಳ್ಳಬಹುದು.
ಇದನ್ನೂ ಓದಿ : https://vijayatimes.com/hassan-assembly-constituency/
ಕಬ್ಬಿನ ಹಾಲು : ಕಬ್ಬಿನ ಹಾಲು (Sugarcane milk) ಪೈಬರ್, ಕ್ಯಾಲಿಸಿಯಂ (calcium), ಪೊಟ್ಯಾಸಿಯಂ ಇತ್ಯಾದಿ ಪೋಷಕಾಂಶಗಳನ್ನು ಹೊಂದಿರುವದರಿಂದ ಬೇಸಿಗೆ ಕಾಲದಲ್ಲಿ (Drink five juices in summer) ಎನರ್ಜಿ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.
ಇದು ಕುಡಿಯಲು ಸ್ವಾಧಿಷ್ಟಕರವೂ ಹೌದು. ಇದು ನಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಇದನ್ನು ಬೇಸಿಗೆ ಕಾಲದಲ್ಲಿ ಕುಡಿಯುವದರಿಂದ ಮುಖದ ಮೊಡವೆಗಳ ಕಲೆಗಳನ್ನು ಕಡಿಮೆಯಾಗುತ್ತದೆ. ಚರ್ಮಕ್ಕೆ ವಯಸ್ಸಾಗುವ ಗತಿಯನ್ನು ಕಡಿಮೆ ಮಾಡುತ್ತದೆ.

ಸೋರೆಕಾಯಿ ರಸ : ಸೋರೆಕಾಯಿಯಲ್ಲಿ (Gourd) ವಿಟಮಿನ್ -ಸಿ, ಪಾಸ್ಪರಸ ಕಬ್ಬಿಣದಂತ ಅಂಶಗಳು ಹೇಳಲಾಗಿದೆ.
ಇದನ್ನು ಸ್ವಲ್ಪ ಶುಂಠಿ ಪುದಿನ ಉಪ್ಪು ಮತ್ತು ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೇಸಿಗೆಯಲ್ಲಿ ಬೆಳಿಗ್ಗೆ ಕುಡಿಯುವುದರಿಂದ ದೇಹವನ್ನು ತಂಪಾಗಿಸಬಹುದು.
ಸೋರೆಕಾಯಿ ಅದರ ಹೆಚ್ಚಿನ ನೀರಲ್ಲಿ ಅಂಶ ಮತ್ತು ಪೈಬರ್ ಕಾರಣದಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ : https://vijayatimes.com/shakeelal-out-of-the-tournament/
ಹಾಗಲಕಾಯಿ ರಸ :
ಕಹಿಯಾಗಿರುವ ಹಾಗಲಕಾಯಿ (Bitter gourd juice) ಆರೋಗ್ಯಕ್ಕೆ ಅಷ್ಟೇ ಸಿಹಿಯು ಹೌದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಇದ್ದು ಸಹಕಾರಿ ಯಾಗಿದೆ.
ಹಾಗಲಕಾಯಿ ಅಷ್ಟೇ ಅಲ್ಲ ಇದರ ಗಿಡದ ಎಲೆಗಳು ಕೂಡಾ ರೋಗ ನಿರೋಧಕ ಶಕ್ತಿಗೆ ರಾಮಬಾಣ.
ಇದನ್ನು ದಿನನಿತ್ಯ ಕುಡಿಯುವದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪಿನ ರಸ :
ಪಾಲಕ ಸೊಪ್ಪಿನಲ್ಲಿರುವ (Spinach juice) ವಿಟಮಿನ್ -ಕೆ ಅಂಶವು ಹೇರಲಳವಾಗಿದೆ ಇದರಿಂದ ಪ್ರೊಟೀನ್ ಉತ್ಪತ್ತಿ ಮಾಡಲು ನೇರವಾಗುವುದಲ್ಲದೆ ಮೂಳೆಗಳಲ್ಲಿ ಕ್ಯಾಲಿಸಿಯಂ ಗುಣವನ್ನು ಸ್ಥಿರಮಾಡುತ್ತದೆ ಇದರಲ್ಲಿರುವ ನಾರಿನಾಂಶ ಪೊಟ್ಯಾಶಿಯಂ (Potassium), ಮೆಗ್ನೀಷಿಯಂ (Magnesium) ಮತ್ತು ವಿಟಮಿನ್-ಸಿ ಮೂಳೆಯ ಆರೋಗ್ಯಕ್ಕೆ ತುಂಬಾಸಹಕರಿಯಾಗಿದೆ.
ಇಂತಹ ನೈಸರ್ಗಿಕ ಪಾನೀಯಗಳನ್ನು ಸೇವಿಸುವುದರಿಂದ ಬೇಸಿಗೆಯ ಕಾಲದಲ್ಲಿ ನಮ್ಮ ದೇಹವನ್ನು ತಂಪಾಗಿಸಬಹುದು.