Bengaluru : ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾನಿಲಯದ (Jananbharathi University) ಬಳಿ ಸೋಮವಾರ ಬೆಳಗ್ಗೆ ಬಸ್ ಹತ್ತುವಾಗ ಯುವತಿ ಕೆಳಗೆ ಬಿದ್ದ ವೇಳೆ ಬಸ್ಸು ಆಕೆಯ ಮೇಲೆ ಹರಿದು ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ.

ವಿದ್ಯಾರ್ಥಿನಿಯ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆ ಚಾಲಕರ ಅಡ್ಡಾದಿಡ್ಡಿ ಚಾಲನೆಯನ್ನು ಖಂಡಿಸಿ (Driver Detained By Bengaluru Police) ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಗಾಯಾಳು ವಿದ್ಯಾರ್ಥಿನಿಯನ್ನು ಜ್ಞಾನಭಾರತಿ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಎಂಎಸ್ಸಿ ಗಣಿತ ವಿಭಾಗದ ವಿದ್ಯಾರ್ಥಿನಿ ಶಿಲ್ಪಾ ಶ್ರೀ ಎಂದು ಗುರುತಿಸಲಾಗಿದ್ದು, ಸೋಮವಾರ ಬೆಳಗ್ಗೆ ಬಿಎಂಟಿಸಿ ಬಸ್ ಹತ್ತಲು ಯತ್ನಿಸಿದ್ದಾರೆ.
https://fb.watch/g3KgC9a-_Y/ ಅವ್ಯವಹಾರದಿಂದ ಕೂಡಿದೆ ಬನಶಂಕರಿ ದೇವಾಲಯ.
ಆದರೆ, ಬಸ್ ಚಾಲಕ ವಾಹನ ನಿಲ್ಲಿಸಲಿಲ್ಲ. ಇದರಿಂದ ಆಕೆ ಹತ್ತಲು ಹೋಗಿ ಜಾರಿ ಬಸ್ಸಿನ ಚಕ್ರದ ಕೆಳಗೆ ಬಿದ್ದಿದ್ದಾಳೆ. ಆಕೆಗೆ ಗಂಭೀರ ಗಾಯಗಳಾಗಿದ್ದು,
ಹೆಚ್ಚಿನ ಚಿಕಿತ್ಸೆಗಾಗಿ ನಾಗರಭಾವಿಯ (Nagarbhavi) ಫೋರ್ಟಿಸ್ ಆಸ್ಪತ್ರೆಗೆ (Fortis Hospital) ರವಾನಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಹೀಗಾಗಿ ಆಕೆಯನ್ನು (Driver Detained By Bengaluru Police) ನಾಗರಭಾವಿ ಆಸ್ಪತ್ರೆಯಿಂದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : https://vijayatimes.com/voilence-erupted-says-suvendhu-adikari/