• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ವಾಹನ ದಾಖಲೆ ಅವಧಿ ಅಕ್ಟೋಬರ್ 31, 2021ರವರೆಗೂ ವಿಸ್ತರಿಸಿದ ಕೇಂದ್ರ ಸರ್ಕಾರ

Preetham Kumar P by Preetham Kumar P
in ದೇಶ-ವಿದೇಶ
ವಾಹನ ದಾಖಲೆ ಅವಧಿ ಅಕ್ಟೋಬರ್ 31, 2021ರವರೆಗೂ ವಿಸ್ತರಿಸಿದ ಕೇಂದ್ರ ಸರ್ಕಾರ
0
SHARES
0
VIEWS
Share on FacebookShare on Twitter

ನವದೆಹಲಿ ಅ 1 : ನವದೆಹಲಿ, ಅಕ್ಟೋಬರ್ 01: ಕೇಂದ್ರ ಸರ್ಕಾರ ವಾಹನ ದಾಖಲೆಗಳ ಅವಧಿಯನ್ನು ಗುರುವಾರ ವಿಸ್ತರಿಸಿದ್ದು, ಅಕ್ಟೋಬರ್ 31, 2021ರವರೆಗೂ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ.

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೋಟಾರ್ ವಾಹನಗಳ (ಎಂವಿ) ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ (ಸಿಎಮ್‌ವಿ) ನಿಯಮಗಳಿಗೆ ಸಂಬಂಧಿಸಿದ ದಾಖಲೆಗಳ  ಸಿಂಧುತ್ವವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ. ಕಳೆದ ವರ್ಷ ಮಾರ್ಚ್ 30, ಜೂನ್ 9 ಜೂನ್ , ಆಗಸ್ಟ್ 24, 27 ಡಿಸೆಂಬರ್ 2020, ಮತ್ತು 26 ಮಾರ್ಚ್ 2021 ಮತ್ತು 17 ಜೂನ್ 2021 ರಂದು ಸಚಿವಾಲಯವು ಇದೇ ರೀತಿಯಾದ ನಿರ್ಧಾರ ತೆಗೆದುಕೊಂಡಿತ್ತು.

ಕೋವಿಡ್ -19 ಹರಡುವುದನ್ನು ತಡೆಗಟ್ಟುವ ಅಗತ್ಯವನ್ನು ಪರಿಗಣಿಸಿ, ಫಿಟ್ನೆಸ್, ಅನುಮತಿ (ಎಲ್ಲಾ ವಿಧಗಳು), ಪರವಾನಗಿ, ನೋಂದಣಿ ಅಥವಾ ಯಾವುದೇ ಇತರ ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು ಅಕ್ಟೋಬರ್ 31 ರವರೆಗೆ ಮಾನ್ಯವೆಂದು ಪರಿಗಣಿಸಬಹುದು ಎಂದು ಸೂಚಿಸಲಾಗಿದೆ. ಇದು ಫೆಬ್ರವರಿ 1, 2020 ರಲ್ಲಿ ಅವಧಿ ಮುಗಿದ ಅಥವಾ ಅಕ್ಟೋಬರ್ 31, 2021 ಕ್ಕೆ ಮುಕ್ತಾಯಗೊಳ್ಳುವ ಎಲ್ಲ ದಾಖಲೆಗಳನ್ನು ಒಳಗೊಂಡಿದೆ. ಅಕ್ಟೋಬರ್ 31, 2021 ರವರೆಗೆ ಮಾನ್ಯವಾಗಿರುವಂತೆ ದಾಖಲೆಗಳನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ರಸ್ತೆ ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ದಾಖಲೆಗಳ ಅವಧಿಯನ್ನು ಕಳೆದ ಮಾರ್ಚ್, ಜೂನ್, ಆಗಸ್ಟ್, ಡಿಸೆಂಬರ್ ಹಾಗೂ ಈ ವರ್ಷದ ಮಾರ್ಚ್, ಜೂನ್‌ನಲ್ಲಿ ವಿಸ್ತರಣೆ ಮಾಡಿತ್ತು. ಈ ವರ್ಷ ಜೂನ್‌ ತಿಂಗಳಿನಲ್ಲಿ ಕೊನೆಯದಾಗಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಮೋಟಾರು ವಾಹನ ನಿಯಮ 1988 ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ 1989ರಡಿಯಲ್ಲಿ ವಿಸ್ತರಣೆ ಮಾಡಲಾಗಿದೆ.

ಮಾರ್ಚ್ 24, 2020ರ ಬಳಿಕ ಕೊರೊನಾ ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದು, ಅತ್ಯವಶ್ಯಕ ಸರಕು ಹಾಗೂ ಸೇವೆ ಒದಗಿಸುವ ಉದ್ದೇಶದಿಂದ ರಸ್ತೆ ಮತ್ತು ಸಾರಿಗೆ ಸಚಿವಾಲಯ ಹಲವು ಬಾರಿ ನಿರ್ದೇಶನಗಳನ್ನು ಜಾರಿಗೊಳಿಸಿತ್ತು. ಆ ಅವಧಿಯಲ್ಲಿ ಸಂಚಾರ ಇಲಾಖೆಯೂ ಸಂಪೂರ್ಣ ಬಂದ್ ಆಗಿದ್ದು, ಡಿಎಲ್, ಎಲ್‌ಎಲ್‌ ಪ್ರಕ್ರಿಯೆ ಮಾಡದಿರಲು ನಿರ್ಧರಿಸಲಾಗಿತ್ತು. ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ಸಂಬಂಧಿಸಿದ ನಾಗರಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು, ಸಚಿವಾಲಯವು ಎಲ್ಲಾ MVA ಮತ್ತು CMV ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಿತ್ತು. ಸರ್ಕಾರದ ಈ ಕ್ರಮವು ನಾಗರಿಕರಿಗೆ ಸಾಮಾಜಿಕ-ಅಂತರವನ್ನು ಕಾಯ್ದುಕೊಂಡು ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯ ಮಾಡುವ ನಿರೀಕ್ಷೆಯಿದೆ.

Tags: Automobile NewsCovid 19covid 19 lockdowndriving licenceregistration certificates

Related News

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 31, 2023
ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !
ದೇಶ-ವಿದೇಶ

ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !

March 28, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023
ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?
ದೇಶ-ವಿದೇಶ

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.