vijaya times advertisements
Visit Channel

ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದ್ದ ಡ್ರೋನ್ ಕುಖ್ಯಾತಿಯ ಪ್ರತಾಪ್ ಪೊಲೀಸ್ ವಶಕ್ಕೆ

Drone-Prathap

ಕ್ವಾರಂಟೈನ್‌ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದಿದ್ದ ಡ್ರೋನ್‌ ಕುಖ್ಯಾತಿಯ ಪ್ರತಾಪ್‌ ನನ್ನು ಮೈಸೂರಿನಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಪ್ರತಾಪ್‌ ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೊರ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಪ್ರತಾಪ್‌ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ. ಅಂಜನಾಪುರದ ಎಸ್.ಎಫ್-ಎಂ.ಐ.ಎಂ.ಜಿ ವಿಂಡ್ ಪಾಲ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ. ಇಲ್ಲೇ ಕ್ವಾರಂಟೈನ್‌ ನಲ್ಲಿರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ಕೈಗೆ ಸೀಲ್‌ ಕೂಡಾ ಹಾಕಿದ್ದರು. ಆದರೆ, ಪ್ರತಾಪ್‌ ಪ್ಲಾಟ್‌ ನಿಂದ ಹೊರಬಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ. ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ.


ಈ ಹಿನ್ನೆಲೆಯಲ್ಲಿ ಹೋಂ ಕ್ವಾರೆಂಟೈನ್ ನಿಯಮ ಉಲ್ಲಂ‍ಘನೆ ಮಾಡಿದ ಕಾರಣಕ್ಕೆ ಡಾ. ಪ್ರಯಾಗ್ ಎಂಬುವವರು ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸೋಮವಾರ ಪ್ರತಾಪ್‌ ನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.