• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಹಡಗಿನಲ್ಲಿ ರೇವ್ ಪಾರ್ಟಿ ಶಾರುಕ್ ಪುತ್ರನ ಬಂಧನ

Preetham Kumar P by Preetham Kumar P
in ಪ್ರಮುಖ ಸುದ್ದಿ
ಹಡಗಿನಲ್ಲಿ ರೇವ್ ಪಾರ್ಟಿ ಶಾರುಕ್ ಪುತ್ರನ ಬಂಧನ
1
SHARES
5
VIEWS
Share on FacebookShare on Twitter

ಮುಂಬೈ ಅ 4: ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೂ  ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.  ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ (23) ಅವರನ್ನು ಬಂಧಿಸಲಾಗಿದೆ.

ಮುಂಬಯಿ-ಗೋವಾ ನಡುವೆ ಸಮುದ್ರದ ಮಧ್ಯೆ ಐಷಾರಾಮಿ ಕ್ರೂಸ್‌ ಶಿಪ್‌ನಲ್ಲಿನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.

ಎಫ್‍ಟಿವಿ ಸಂಸ್ಥೆ ಕ್ರೈ ಆರ್ಕ್ ಹೆಸರಿನ ಮೂರು ದಿನಗಳ ಮ್ಯೂಜಿಕಲ್ ಪಾರ್ಟಿಯನ್ನು ಸಮುದ್ರಯಾನದೊಂದಿಗೆ ಆಯೋಜನೆ ಮಾಡಿತ್ತು. ಪಾರ್ಟಿ ಆಯೋಜಿಸಿದ್ದ ಕಾಡೇಲಿಯಾ ಹಡಗು ಶನಿವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮುಂಬೈನಿಂದ ಸಮುದ್ರಯಾನ ಆರಂಭಿಸಿತ್ತು. ಮೂರು ದಿನಗಳ ಪ್ರವಾಸದ ಬಳಿಕ ಅಕ್ಟೋಬರ್ 4ರಂದು ರಾತ್ರಿ 10 ಗಂಟೆಗೆ ಹಡಗು ಮರಳಲಿತ್ತು.

ಈ ಪ್ರಕರಣದಲ್ಲಿ ಸಿಲುಕಿರುವವರನ್ನು ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್‌ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ.

ಬಂಧಿತರಿಂದ ಅಧಿಕಾರಿಗಳು 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್‌ ಮತ್ತು 22 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾದಕವಸ್ತುಗಳ ಮಾರುಕಟ್ಟೆ ಮೌಲ್ಯ ಸುಮಾರು 1:33 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: ARYAN KHAN"DRUGSSHIP

Related News

ಹುಲಿ ಸಫಾರಿಗೆ ಹೋಗುವ ಮುನ್ನ ಎಚ್ಚರಿಕೆ: ಮೊಬೈಲ್ ಬಳಕೆಗೆ ನಿರ್ಬಂಧ, ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ
ಪ್ರಮುಖ ಸುದ್ದಿ

ಹುಲಿ ಸಫಾರಿಗೆ ಹೋಗುವ ಮುನ್ನ ಎಚ್ಚರಿಕೆ: ಮೊಬೈಲ್ ಬಳಕೆಗೆ ನಿರ್ಬಂಧ, ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ

October 12, 2026
ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ : ಕಾರ್ಯಾಚರಣೆಯ ಹಿಂದಿನ ಸತ್ಯ ಬಹಿರಂಗವಾಗಬೇಕಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ : ಕಾರ್ಯಾಚರಣೆಯ ಹಿಂದಿನ ಸತ್ಯ ಬಹಿರಂಗವಾಗಬೇಕಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

October 12, 2026
ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ

October 12, 2026
ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ
ದೇಶ-ವಿದೇಶ

ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ

October 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.