New Delhi : ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ(Air India International Airline) ಬ್ಯುಸಿನೆಸ್ ಕ್ಲಾಸ್(drunk man urinated female passenger) ನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರ(ಹಿರಿಯ ನಾಗರಿಕರು) ಮೇಲೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ಏರ್ ಇಂಡಿಯಾ ಕೂಡ ದೃಢಪಡಿಸಿದೆ.

ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನ ಎಐ 102(AI 102) ನ್ಯೂಯಾರ್ಕ್‌ನಿಂದ(New york) ದೆಹಲಿಗೆ(Delhi) ಹೋಗುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮದ್ಯಾಹ್ನದ ಊಟದ ನಂತರ ಲೈಟ್ಸ್‌ಗಳನ್ನು ಆಫ್ ಮಾಡಿದ ಬಳಿಕ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ,
ತನ್ನ ಸಹ ಪ್ರಯಾಣಿಕರಾದ ಹಿರಿಯ ಮಹಿಳಾ ಪ್ರಯಾಣಿಕರ ಸೀಟಿನ ಬಳಿ ಹೋಗಿ, ತನ್ನ ಪ್ಯಾಂಟ್ ಜಿಪ್ ಅನ್ನು ಬಿಚ್ಚಿ, ಮೂತ್ರ ವಿಸರ್ಜಸಿದ್ದಾನೆ.
https://vijayatimes.com/nalinkumar-love-jihad-statement/
ಆತ ಮೂತ್ರ ವಿಸರ್ಜಿಸುತ್ತಿದ್ದಂತೆ ಕಿರುಚಾಡಿದ ಮಹಿಳೆ, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳಾ ಪ್ರಯಾಣಿಕರ ಜೊತೆ ಸೇರಿದ ಅನ್ಯ ಪ್ರಯಾಣಿಕರು ಕುಡಿದ ವ್ಯಕ್ತಿಗೆ ಮನಬಂದಂತೆ ಬೈದಿದ್ದಾರೆ.
ಈ ಘಟನೆಯನ್ನು ಖಂಡಿಸಿದ ಮಹಿಳಾ ಪ್ರಯಾಣಿಕರು ಏರ್ ಇಂಡಿಯಾ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಅವರಿಗೆ ಯಾವುದೇ ರೀತಿಯ ಕಾಳಜಿ ಇಲ್ಲ! ತಮ್ಮ ಪ್ರಯಾಣಿಕರ ಸುರಕ್ಷತೆ ಬಗ್ಗೆ ಅರಿವಿಲ್ಲ ಎಂದು ಹೇಳುವ ಮುಖೇನ ತಮ್ಮ ಬೇಸರ ಹೊರಹಾಕಿದ್ದಾರೆ.
ಈ ಬಗ್ಗೆ ಮಹಿಳಾ ಪ್ರಯಾಣಿಕರು ಟಾಟಾ ಗ್ರೂಪ್(drunkman urinated female passenger) ಅಧ್ಯಕ್ಷ ಎನ್. ಚಂದ್ರಶೇಖರನ್(N Chandrashekharan) ಅವರಿಗೆ ಪತ್ರ ಬರೆದಿದ್ದು, ಕ್ಯಾಬಿನ್ ಸಿಬ್ಬಂದಿ ಪರಿಸ್ಥಿತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಸೂಕ್ಷ್ಮರಾಗಿರಬೇಕು!

ಎಂದು ಹೇಳುವ ಮೂಲಕ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದಾಗ ಈ ಘಟನೆ ಮುಂಚೂಣಿಗೆ ಬಂದಿದೆ ಎನ್ನಲಾಗಿದೆ.
ಮೇಲ್ನೋಟಕ್ಕೆ ಅವರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಪ್ರಯಾಣಿಕನೊಬ್ಬ ಮತ್ತೊಬ್ಬರ ಮೇಲೆ ತೋರಿದ ಅನುಚಿತ ವರ್ತನೆಯ ಬಗ್ಗೆ ನಮಗೆ ತಿಳಿದಿದೆ.
ನಾವು ಘಟನೆಯನ್ನು ಪೊಲೀಸ್ ಮತ್ತು ನಿಯಂತ್ರಣ ಅಧಿಕಾರಿಗಳಿಗೆ ವರದಿ ಮಾಡಿದ್ದೇವೆ,
ಇದನ್ನೂ ಓದಿ: https://vijayatimes.com/congress-retaliated-nalinkumar-statement/
ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಮತ್ತು ಆ ವ್ಯಕ್ತಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ.
ತನಿಖೆ ಮತ್ತು ವರದಿ ಪ್ರಕ್ರಿಯೆಯ ಉದ್ದಕ್ಕೂ, ನಾವು ನೊಂದ ಪ್ರಯಾಣಿಕರು ಮತ್ತು ಅವರ ಕುಟುಂಬದೊಂದಿಗೆ ಇಂದಿಗೂ ಸಂಪರ್ಕದಲ್ಲಿರುತ್ತೇವೆ ಎಂದು ಏರ್ ಇಂಡಿಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.