Bengaluru : ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(IAS Rohini Sindhuri) ಮತ್ತು ಐಪಿಎಸ್ಅಧಿಕಾರಿ ಡಿ.ರೂಪಾ(IPS D Roopa) ಅವರ ನಡುವಿನ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವ (DRupa Rohini Sindhuri Transferred) ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಖಡಕ್ಸೂಚನೆ ನೀಡಿದೆ.

ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ನಡುವಿನ ಬೀದಿ ರಂಪಾಟ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜ್ಯ ಸರ್ಕಾರ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ.
ನೀವಿಬ್ಬರೂ ಅಖಿಲ ಭಾರತೀಯ ಸೇವಾ ನಿಯಮಗಳ ಉಲ್ಲಂಘನೆ ಮಾಡಿದ್ದೀರಿ. ನಿಮಗೆ ಆರೋಪಗಳನ್ನು ಮಾಡಲು, ನಿಮ್ಮ ಸಮಸ್ಯೆಗಳನ್ನು ಹೇಳಲು ಸೂಕ್ತ ವೇದಿಕೆ ಇದೆ.
ನೀವು ಇಬ್ಬರೂ ಹಿರಿಯ ಅಧಿಕಾರಿಗಳಾಗಿದ್ದು, ನೀವು ಸರ್ಕಾರಕ್ಕೆ ಅಥವಾ ಸಂಬಂಧಿತ ಸಂಸ್ಥೆಗೆ ದೂರು ನೀಡದೇ ನೇರವಾಗಿ
ಮಾದ್ಯಮಗಳ ಮುಂದೆ ಮತ್ತು ಸಾಮಾಜಿಕ ಮಾದ್ಯಮಗಳಲ್ಲಿ(Social Media) ಆರೋಪಗಳನ್ನು ಮಾಡಿದ್ದೀರಿ. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.

ಹೀಗಾಗಿ ಇನ್ನೂ ಮುಂದೆ ನೀವು ಇಬ್ಬರೂ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ರಾಜ್ಯ ಸರ್ಕಾರದಿಂದ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ಸಿಬ್ಬಂದಿ ಮತ್ತು ಆಡಳಿತ (DRupa Rohini Sindhuri Transferred) ಇಲಾಖೆಯಿಂದ ನೋಟಿಸ್ ಜಾರಿ ಮಾಡಿದೆ.
ಸಿಎಂ(CM) ಸೂಚನೆ ಬಳಿಕ ಮಹಿಳಾ ಅಧಿಕಾರಿಗಳಿಗೆ ನೊಟೀಸ್ ಜಾರಿಯಾಗಿದ್ದು ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್(James Tharakan) ಈ ಆದೇಶ ಹೊರಡಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಡಿ.ರೂಪಾ, ರೋಹಿಣಿ ಸಿಂಧೂರಿ ಮತ್ತು ಐಎಎಸ್ ಅಧಿಕಾರಿಯಾಗಿರುವ ಡಿ.ರೂಪಾ
ಅವರ ಪತಿ ಮುನೀಶ್ ಮೌದ್ಗಿಲ್(Munish Moudgil) ಸೇರಿ ಮೂವರಿಗೆ ಕಡ್ಡಾಯ ರಜೆ ನೀಡಿದೆ.

ಇನ್ನು ರಾಜ್ಯದ ಹಿರಿಯ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಅವರಿಬ್ಬರ ನಡುವಿನ ಆರೋಪ-ಪ್ರತ್ಯಾರೋಪಗಳಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.
ಸಾಮಾಜಿಕ ಮಾದ್ಯಮಗಳಲ್ಲಿ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಇದೀಗ ಇಬ್ಬರೂ ಕೂಡಾ ಕಾನೂನು ಸಮರಕ್ಕೆ ಸಿದ್ದತೆ ನಡೆಸಿದ್ದಾರೆ.
ರೋಹಿಣಿ ಸಿಂಧೂರಿ ಅವರು ಡಿ.ರೂಪಾ ಅವರ ಮೇಲೆ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ದಾಖಲಿಸಲು ಸಿದ್ದತೆ ನಡೆಸಿದ್ದರೆ, ಡಿ.ರೂಪಾ
ಅವರು ರೋಹಿಣಿ ಸಿಂಧೂರಿ ಅವರ ಮೇಲಿನ ಆರೋಪಗಳ ಕುರಿತು ಲೋಕಾಯುಕ್ತದ ಮೂಲಕ ತನಿಖೆ ನಡೆಸುವಂತೆ ದೂರು ನೀಡಲು ಸಿದ್ದತೆ ನಡೆಸಿದ್ದಾರೆ.