ಬೆಂಗಳೂರು,ಫೆ.19: ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗ್ಗೆ 7ಗಂಟೆಗೆ ಫಸ್ಟ್ ಡೇ ಫಸ್ಟ್ ಶೋಗೆ ಅಭಿನಿಗಳ ಜನಸಾಗರ. 3 ವರ್ಷಗಳ ನಂತರ ಬೆಳ್ಳಿ ಪರದೆ ಮೇಲೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೋಡಲು ಮುಗಿಬಿದ್ದ ಫ್ಯಾನ್ಸ್ , ತೆರೆಮೇಲೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರಿಸಂ
ಮೊಮ್ಮಗನ ಸಿನಿಮಾ ನೋಡಲು ಪ್ರಸನ್ನ ಥಿಯೇಟರ್ ಗೆ ಅಜ್ಜಿ ಲಕ್ಷ್ಮಿ ದೇವಮ್ಮ ಆಗಮನ. ಮೇನ್ ಥಿಯೇಟರ್ ಗೆ ಆಗಮಿಸಿಲಿರೋ ದ್ರುವ ಸರ್ಜಾ ಹಾಗು ಪೊಗರು ತಂಡ, ರಶ್ಮಿಕ ಸೇರಿದಂತೆ ಕಲಾವಿದರ ದಂಡು ಸಿನಿಮಾದಲ್ಲಿದೆ
ಸುಮಾರು 1200ಕ್ಕು ಹೆಚ್ಚು ಥಿಯೇಟರ್ ಗಳಲ್ಲಿ ಪೊಗರು ರಿಲೀಸ್.ಕರ್ನಾಟಕದಲ್ಲಿ ಸುಮಾರು 450ಕು ಹೆಚ್ಚು ಥೇಟರ್ ಗಳಲ್ಲಿ ಸಿನಿಮಾ ಬಿಡುಗಡೆ ಬೆಳಗ್ಗೆಯಿಂದಲೇ ಎಲ್ಲಾ ಕಡೆ ಪೊಗರು ಅಬ್ಬರ ಶುರುವಾಗಿದೆ. ಇಂದು ಬೆಳಗ್ಗೆ 10 ಗೆ ನರ್ತಕಿ ಚಿತ್ರಮಂದಿರದಲ್ಲಿ ಧ್ರುವ ಸರ್ಜಾ ಹಾಗೂ ಚಿತ್ರ ತಂಡ ಸಿನಿಮಾ ವೀಕ್ಷಣೆ ನಂದ ಕಿಶೋರ್ ನಿರ್ದೇಶನದ ಸಿನಿಮಾ
ಕೊರೋನ ನಂತರ ರಿಲೀಸ್ ಆಗ್ತಿರೋ ಬಿಗ್ ಬಜೆಟ್ ಸಿನಿಮಾ ಪೊಗರು ಈಗಾಗಲೇ ಎಲ್ಲ ಕಡೆ ಶುರುವಾದ ಪೊಗರು ಅಬ್ಬರದಲ್ಲಿ ಕೋವಿಡ್ ನಿಯಮ ಗಳನ್ನ ಬ್ರೇಕ್ ಮಾಡಿದ ಸಿನಿ ಪ್ರಿಯರು ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲ, ಮೈ ಮರೆತ ಅಭಿಮಾನಿಗಳು. ಹನುಮನ ವೇಷ ತೊಟ್ಟು ಚಿತ್ರಮಂದಿರಕ್ಕೆ ಆಗಮಿಸಿದ ಅಭಿಮಾನಿಗಳು.