Dry Nuts and Fruits Health Benefits : ಆಹಾರ, ದೇಹ ಹಾಗೂ ಮನಸ್ಸಿಗೆ ಪೂರಕವಾಗಿದ್ದರೆ ಅದು ಜಿವ ಶಕ್ತಿಯ ಸಾರವಾಗಿ ಕೆಲಸ ಮಾಡುತ್ತದೆ, ಏನಾದರೂ ತಿನ್ನಲೇಬೇಕು ಎಂದು ಆಹಾರ

ಸೇವಿಸಿದರೆ ಅದು ದೇಹಕ್ಕೆ ಪೂರಕವಲ್ಲದಿದ್ದರೆ ಅಜೀರ್ಣವಾಗುತ್ತದೆ. ಆರೋಗ್ಯವೇ ಭಾಗ್ಯ (Health is wealth) ಎಂದು ತಿಳಿದವರು ತಿಳಿಯಾಗಿ ಬೇಕಾದ್ದನ್ನೇ ತಿಂದು ಸುಖಿಯಾಗಿರುತ್ತಾರೆ.
ಬೆಳಗ್ಗಿನ ಆಹಾರ ಸೇವನೆ ಬಹಳ ಮುಖ್ಯ, ಮೆದುಳು, ದೇಹದ ಶಕ್ತಿಗೆ ಇಂಬು ನೀಡುವ ಒಂದೊಳ್ಳೆ ಆಹಾರ ಸಲಹೆ ಇಲ್ಲಿದೆ. ಡ್ರೈ ಫ್ರೂಟ್ಸ್, ಡ್ರೈ ನಟ್ಸ್ ನಿಮ್ಮ ಬೆಳಗಿನ ಉತ್ತಮ ಆಹಾರವಾಗಬಲ್ಲದು, ಸರಳವಾಗಿಯೂ ತಯಾರು ಮಾಡಿಕೊಳ್ಳಬಹುದು. ಡ್ರೈ ಫ್ರೂಟ್ಸ್ ಸ್ಮೂಥಿ (Smoothie) ಹೀಗೆ ಮಾಡಿನೋಡಿ ಮತ್ತೆ ಬೇಕು ಎನ್ನಿಸುವಷ್ಟು ಖುಷಿ ನೀಡುತ್ತೆ.
ರಾತ್ರಿಯೇ ನೆನಸಿಟ್ಟ ಡ್ರೈ ಫ್ರೂಟ್ಸ್ಗಳನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ, ಬಾಳೆಹಣ್ಣು, ಪಾಲಕ್ (Banana and Spinach) ಎಲೆ ಜೊತೆ ಗ್ರೈಂಡ್ ಮಾಡಿ, ಬಳಿಕ ಸ್ವಲ್ಪ ಮೊಸರು ಹಾಕಿ ಇನ್ನೊಮ್ಮೆ ಗ್ರೈಂಡ್ ಮಾಡಿ, ನೀರಿನಲ್ಲಿ ನೆನೆಸಿಟ್ಟ ಕಾಮ ಕಸ್ತೂರಿ ಬೀಜವನ್ನು ಸೇರಿಸಿ, ಅಗತ್ಯವಾದರೆ ಒಂದು ಚಮಚ ಜೇನುತುಪ್ಪ ಸೇರಿಸಿದರೆ ಆರೋಗ್ಯಕರವಾದ ಸ್ಮೂಥಿ ಸಿದ್ಧವಾಯಿತು.
ಈ ಸ್ಮೂಥಿಗೆ ಅಗತ್ಯವಿರುವ ಪದಾರ್ಥಗಳು ಒಂದು ಬಾಳೆಹಣ್ಣು, ನಾಲ್ಕು ಖರ್ಜೂರ, ಹತ್ತು ಬಾದಾಮಿ-ಗೋಡಂಬಿ, 15 ದ್ರಾಕ್ಷಿ, ಒಂದೆರೆಡು ಎಲೆ ಪಾಲಕ್, ಜೊತೆಗೆ ಒಂದು ಬಟ್ಟಲು ಮೊಸರು, ಸ್ವಲ್ಪ ಕಾಮ ಕಸ್ತೂರಿ ಬೀಜ. ಇಷ್ಟು ಸೇರಿಸಿ ಆರೋಗ್ಯಕಾರಕ ಸ್ಮೂಥಿ ಮಾಡಿಕೊಳ್ಳಬಹುದು. ಮಕ್ಕಳಿಂದ ವೃದ್ಧರವರೆಗೂ ಸ್ಮೂಥಿ ಸೇವಿಸಬಹುದು, ಕೆಲವರಿಗೆ ಡ್ರೈ ಫ್ರೂಟ್ಸ್ ತಿನ್ನಲು ಆಗೋದಿಲ್ಲ ಅಂತಹವರು ಕೂಡ ಈ ಸ್ಮೂಥಿ ಸುಲಭವಾಗಿ ಬಳಸಬಹುದು.
ಒಟ್ಟಾರೆಯಾಗಿ ಆರೋಗ್ಯಯುತ ಜೀವನಕ್ಕಾಗಿ ನಮ್ಮ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು. ಇದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪಾರಾಗಬಹುದು. ಉತ್ತಮ ಆಹಾರಕ್ರಮ ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ.