Bengaluru: ಬೆಂಗಳೂರಿನಲ್ಲಿ (Dubble Decker Bus in BLR) ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಪ್ರಸ್ತುತ ಬಸ್ಗಳು ತುಂಬಿ
ತುಳುಕುತ್ತಿದೆ. ಈ ನಡುವೆ ಸಾಮಾನ್ಯ ಪ್ರಯಾಣಿಕರು ಕೇಳುವ ಪ್ರಶ್ನೆ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಈ ಟ್ವಿನ್ಡೆಕ್ ಬಸ್ಗಳು ಏಕೆ ಆರಂಭಿಸಲು ಸಾಧ್ಯವಿಲ್ಲ?
ಎಂಬುವುದಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಟೆಂಡರ್ ಕರೆಯುವ ಮೂಲಕ ಡಬಲ್ ಡೆಕ್ಕರ್ ಬಸ್ಗಳನ್ನು ಮರು ಪರಿಚಯಿಸಲು ಸಜ್ಜಾಗುತ್ತಿದೆ.

ಯಾವ್ಯಾವ ಮಾರ್ಗಗಳಲ್ಲಿ ಸಂಚರಿಸಲಿದೆ ಡಬಲ್ ಡೆಕ್ಕರ್ ಬಸ್ ಗಳು?
ಕಳೆದ 25 ವರ್ಷಗಳಲ್ಲಿ ಡಬಲ್ ಡೆಕ್ಕರ್ ಬಸ್ (Dubble Decker Bus) ಮತ್ತೆ ಆರಂಭಿಸುವ ಪ್ರಸ್ತಾಪ ಬಂದಿರಲಿಲ್ಲ . ಮುಂದೆಯೂ ಬರದಿರಬಹುದು ಎಂದು 42 ಮೇಲ್ಸೇತುವೆ,
28 ಅಂಡರ್ಪಾಸ್ಗಳನ್ನು ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಜನನಿಬಿಡ ರಸ್ತೆಗಳಲ್ಲಿ ನೂರಾರು ಸ್ಕೈವಾಕ್ಗಳಿವೆ (Sky Walk). ಸಾಮಾನ್ಯ ಟ್ರಕ್ಗಳು ಮತ್ತು ಸಾಮಾನ್ಯ
ಬಸ್ಗಳು ಅಂಡರ್ಪಾಸ್ಗಳಲ್ಲಿ ಸಿಲುಕಿಕೊಳ್ಳುವ ಸ್ಥಿತಿ ಇದೆ. ಹೀಗಾಗಿ ಎಲ್ಲ ರಸ್ತೆಗಳಲ್ಲಿ ಡಬಲ್ ಡೆಕ್ಕರ್ಬಸ್ಗಳನ್ನು ನಿಯೋಜಿಸಲು ಸಾಧ್ಯವಾಗದು.ಟ್ರಾಫಿಕ್ ದಟ್ಟಣೆ ತಪ್ಪಿಸಲು
ಡಬಲ್ ಡೆಕ್ಕರ್ ಬಸ್ ಪೂರಕವಾದರೂ ನಗರದ ಎಲ್ಲೆಡೆ ಕಾರ್ಯಾಚರಣೆ ಸಾಧ್ಯವಾಗದು. ಮೂರು ಮಾರ್ಗಗಳಿಗೆ ಮಾತ್ರ ಈ ಬಸ್ ಸೀಮಿತವಾಗಿ ಕಾರ್ಯಾಚರಿಸುವ ಸಾಧ್ಯತೆ ಇದೆ.
ಮೆಜೆಸ್ಟಿಕ್ (Kempegowda Bus Stand ) ನಿಂದ ಶಿವಾಜಿನಗರ, ಮೆಜೆಸ್ಟಿಕ್ನಿಂದ ಅತ್ತಿಬೆಲೆ ಮತ್ತು ವಿಜಯನಗರದಿಂದ ಕಲಾಸಿಪಾಳ್ಯ ಮಾರ್ಗಗಳನ್ನು ಡಬಲ್ ಡೆಕ್ಕರ್ ಬಸ್ಗಳ
ಕಾರ್ಯಾಚರಣೆಗೆ ಬಿಎಂಟಿಸಿ ಗುರುತಿಸಿದೆ.ದಟ್ಟಣೆ ತಪ್ಪಿಸಲು ಡಬ್ಬಲ್ ಡೆಕ್ಕರ್ ಬಸ್ಗಳ ಸಂಖ್ಯೆ ಹೆಚ್ಚಿಸುವುದು ಪರಿಹಾರವಾದರೂ ಇದು ಪ್ರಸ್ತುತ ಕಾರ್ಯಸಾಧುವಲ್ಲ ಎಂಬುದು ಹಿರಿಯ
ಅಧಿಕಾರಿಗಳ (Dubble Decker Bus in BLR) ಅಭಿಪ್ರಾಯವಾಗಿದೆ.

ಕೊನೆಯ ಬಾರಿಗೆ 1997 ರಲ್ಲಿ ನಗರದ ರಸ್ತೆಗಳಲ್ಲಿ ಡಬಲ್ ಡೆಕ್ಕರ್ಬಸ್ಗಳು ಸಂಚರಿಸುತ್ತಿದ್ದವು. ಅದಾದ ಬಳಿಕ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳ ಕಾರಣದಿಂದ ಅವುಗಳನ್ನು
ಹಂತಹಂತವಾಗಿ ಸ್ಥಗಿತಗೊಳಿಸಲಾಗಿದೆ.ಸಾಮಾನ್ಯ ಬಸ್ಗಳು 33-40 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ, ಪ್ರತಿ ಡಬಲ್ ಡೆಕ್ಕರ್ ಬಸ್ ಸುಮಾರು 65
ಪ್ರಯಾಣಿಕರನ್ನು ಹೊತ್ತೊಯ್ಯಬಹುದಾಗಿದೆ.
ಜಿಸಿಸಿ ಮಾದರಿಯಲ್ಲಿ ಗುತ್ತಿಗೆ
ಬಿಎಂಟಿಸಿಗೆ (BMTC) ಹೊಸದಾಗಿ ನೇಮಕಗೊಂಡ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್. ಈ ಬಗ್ಗೆ ಪ್ರತಿಕ್ರಿಯಿಸಿ, ” ಗ್ರಾಸ್ ಕಾಸ್ಟ್ ಕಂಟ್ರಾಕ್ಟ್ (Gross Cost Contract )
ಮಾದರಿಯಲ್ಲಿ 10 ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆಗೆ ಪಡೆಯಲು ಟೆಂಡರ್ ಕರೆಯಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.