Tumkur Geared up for Nadahabba Dasara: Surprising but true!
Tumakuru: ಇದೇನಪ್ಪಾ ತುಮಕೂರಲ್ಲಿ (Tumakur) ದಸರಾನ? ಹೌದು ದಸರಾ ಎಂದರೆ ನಮಗೆಲ್ಲಾ ಮೊದಲು ನೆನಪಾಗೋದೇ ಮೈಸೂರು. ಆದರೆ ಸರ್ಕಾರ ಇದೆ ಪ್ರಥಮ ಬಾರಿಗೆ ಕಲ್ಪತರು ನಾಡು ತುಮಕೂರಿನಲ್ಲಿ ಒಂದು ಕೋಟಿ ಅನುದಾನದೊಂದಿಗೆ ತುಮಕೂರು ದಸರಾಕ್ಕೆ ಚಾಲನೆ ನೀಡಲು ಮಾರ್ಗದರ್ಶನಗಳನ್ನ ಅಂತಿಮಗೊಳಿಸಿ ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದೆ.
ಮೈಸೂರು (Mysore) ಮಾದರಿಯಲ್ಲಿ ತುಮಕೂರಿನಲ್ಲೂ ದಸರಾ ಆಚರಣೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ (Dr. G Parameshwar) ಸೋಮವಾರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು. ಸುಮಾರು 36 ವರ್ಷಗಳಿಂದ ದಸರಾ ಸಮಿತಿಯಿಂದ ತುಮಕೂರು ದಸರಾ ನಡೆದಿದ್ದು ಈ ವರ್ಷದಿಂದ ಸರ್ಕಾರದಿಂದಲೇ ನಡೆಸಲಾಗುತ್ತದೆ. ಹಾಗಾಗಿ ತುಮಕೂರು ದಸರಾ ಇನ್ನಷ್ಟು ವಿಜೃಂಭಣೆಯಿಂದ ನಡೆಯುವ ಬಗ್ಗೆ ಡಾಕ್ಟರ್ ಜಿ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ನಾಡ ಹಬ್ಬ ಆಚರಣೆ:
ಅಕ್ಟೋಬರ್ (October) 11 ಹಾಗೂ 12 ರಂದು ಎರಡು ದಿನಗಳಲ್ಲಿ ತುಮಕೂರು ದಸರಾ ಆಚರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಡಳಿತದಿಂದ ಬಾರಿ ಸಿದ್ಧತೆ :
ದಸರಾ (Dussehra) ಉತ್ಸವದ ಮುಖ್ಯ ವೇದಿಕೆಯನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲು ಸಜ್ಜಾಗಿದೆ ಹಾಗೂ ವಿವಿಧ ರೀತಿಯ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣರವರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ ಪರಮೇಶ್ವರ್ ರವರಿಗೆ ಮಾಹಿತಿ ನೀಡಿದರು.
ತುಮಕೂರು ದಸರಾದ ವಿಶೇಷತೆಗಳು:
ಧಾರ್ಮಿಕ ಆಚರಣೆ, ಜಂಬೂಸವಾರಿ, ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ,ಆಹಾರಮೇಳ, ಮೆರವಣಿಗೆ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವಂತಹ ಕಲಾ ಸಂಸ್ಕೃತಿಗಳನ್ನು ನಗರದ ಮುಖ್ಯ ಬೀದಿಗಳಲ್ಲಿ ಪ್ರದರ್ಶನ ಮಾಡಲಾಗುವುದು.
Dussehra Festival in Tumkur 2024 Date Karnataka
ಡಾ ಜಿ ಪರಮೇಶ್ವರ್ ಹೇಳಿದ್ದೇನು?
ಮೈಸೂರು (Mysore) ದಸರಾಕೆ ಹೋಲಿಸಲು ಸಾಧ್ಯವಿಲ್ಲ ತುಮಕೂರು ದಸರವನ್ನಾಗಿ ತುಮಕೂರು ಸಂಸ್ಕೃತಿ ಬಿಂಬಿಸುವಂತೆ ಆಚರಿಸಲಾಗುತ್ತದೆ. ಅಂಬಾರಿ ದೇವರ ಮೆರವಣಿಗೆ ಮೊದಲಾದ ಎಲ್ಲವುಗಳ ಬಗ್ಗೆ ಸಮಿತಿ ರಚನೆ ಬಳಿಕ ಅಂತಿಮ ರೂಪರೇಷೆ ಸಿದ್ದಗೊಳಿಸಿ ತಿಳಿಸಲಾಗುವುದು.
Tumakuru: Is this Dussehra in Tumakuru? Yes, Dussehra means Mysore before all of us remember. But for the first time, the government is preparing to finalize the guidelines to launch Tumkur Dussehra with a grant of one crore in Kalpataru Nadu Tumkur.
District in-charge minister Dr. G. Parameshwar (Dr. G Parameshwar) held a meeting with Zilla Panchayat officials on Monday and gave suggestions. Tumkur Dussehra has been held by the Dussehra Committee for about 36 years and from this year it will be conducted by the government itself. So Dr. G. Parameshwar has expressed confidence that Tumkur Dussehra will be held with more pomp.
A two-day Nada festival celebration:
It has been decided to celebrate Tumkur Dasara in two days on October 11 and 12.
Time Preparation by District Administration:
The main stage of the Dussehra festival is set to be built in the city’s Government Pre-Graduation College and District In-charge Minister Dr. Gave information to G. Parameshwar.
Specialties of Tumkur Dasara:
Religious rituals, jamboosawari, arts, literature and cultural programs, food fairs, parades and art cultures depicting the culture of the district will be displayed on the main streets of the city.
What did Dr G Parameshwar say?
Mysore Dussehra cannot be compared to Tumkur Dussehra which is celebrated as Tumkur culture. After the formation of the committee, the final outline will be prepared and informed about everything including the procession of Ambari God.