• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಹದಿಹರೆಯದವರಲ್ಲಿ ಹೆಚ್ಚಾಗ್ತಿದೆ ಇ-ಸಿಗರೇಟ್‌ ಕ್ರೇಜ್‌ : ವಿಶ್ವ ಆರೋಗ್ಯ ಸಂಸ್ಥೆಯಿಂದ ಆತಂಕಕಾರಿ ವರದಿ ಬಹಿರಂಗ

Shwetha Mohan by Shwetha Mohan
in ಆರೋಗ್ಯ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಹದಿಹರೆಯದವರಲ್ಲಿ ಹೆಚ್ಚಾಗ್ತಿದೆ ಇ-ಸಿಗರೇಟ್‌ ಕ್ರೇಜ್‌ : ವಿಶ್ವ ಆರೋಗ್ಯ ಸಂಸ್ಥೆಯಿಂದ ಆತಂಕಕಾರಿ ವರದಿ ಬಹಿರಂಗ
0
SHARES
10
VIEWS
Share on FacebookShare on Twitter
  • ಹದಿಹರೆಯದವರಲ್ಲಿ ಇ-ಸಿಗರೇಟ್‌ ವ್ಯಸನದ ಕಿಡಿ WHO ವರದಿ ಬಹಿರಂಗ
  • ಆನ್‌ಲೈನ್‌ ಮಾರಾಟದಿಂದ ಚಟ ವ್ಯಾಪಕ : ಸರ್ಕಾರ ಕ್ರಮಕೈಗೊಳ್ಳಲು ಮುಂದಿದೆ ಹಲವು ಸವಾಲು
  • ಡೊಪಮಿನ್‌ ಸುಖದ ಭ್ರಮೆಯಲ್ಲಿ ಬೀಳುತ್ತಿರುವ ಹದಿಹರೆಯದ ಮನಗಳು

New delhi: ಮೊದಲೊಂದು ಕಾಲವಿತ್ತು ಬೀಡಿ, ಸಿಗರೇಟ್ ಗೆ (Cigarette) ಯುವ ಜನತೆ ಅಂಟಿಕೊಂಡಿತ್ತು. (E-cigarette craze in teenagers)

ಆದರೆ ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಇ-ಸಿಗರೇಟ್‌ಗಳ ಕ್ರೇಜ್ ಗೆ ಮಾರು ಹೋಗಿದೆ .

ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದ ಹೊಸ ವರದಿ ಪ್ರಕಾರ, ಇ-ಸಿಗರೇಟ್‌ (E-Cigarette) ಸೇವನೆ ಹದಿಹರೆಯದವರಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಸಿಗರೇಟ್ ಗೆ ಯುವ ಜನತೆ ಅಂಟಿಕೊಂಡಿತ್ತು ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಇ-ಸಿಗರೇಟ್‌ಗಳ ಕ್ರೇಜ್ ಗೆ ಮಾರು ಹೋಗಿದೆ

ಇ-ಸಿಗರೇಟ್‌ಗಳು ಹಾನಿಯಿಲ್ಲದ ಪರ್ಯಾಯ ಎಂದೆಂದು ತಪ್ಪಾಗಿ ನಂಬಿರುವ ಯುವಜನತೆ, ಈ ಚಟಕ್ಕೆ ತೀವ್ರವಾಗಿ ಸೆಳೆಯಲ್ಪಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ ಕಿ ಬಾತ್ (Maan Ki Baat) ಕಾರ್ಯಕ್ರಮದಲ್ಲಿಯೇ ಇ-ಸಿಗರೇಟ್‌ ಸೇವನೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.

ಸುವಾಸನೆಯ ರಾಸಾಯನಿಕ ಮಿಶ್ರಣಗಳಿಂದ ದುರ್ವಾಸನೆ ಇಲ್ಲದ ಕಾರಣ ಇದು ಸುರಕ್ಷಿತ ಎಂಬ ಭಾವನೆ ಮೂಡಿದರೂ, ವಾಸ್ತವದಲ್ಲಿ ನಿಕೋಟಿನ್‌ ಅಂಶದಿಂದಾಗಿ ಇವು ಅತ್ಯಂತ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ.

ಅಷ್ಟಕ್ಕೂ ಇ-ಸಿಗರೇಟ್‌ಗಳು ಅಥವಾ “ವೇಪ್‌ಗಳು” ಎಲೆಕ್ಟ್ರಾನಿಕ್‌ ಸಾಧನಗಳು, ಇವುಗಳಲ್ಲಿ “E-liquid” ಅಥವಾ “E-ದ್ರವ” ಎಂದು ಕರೆಯಲ್ಪಡುವ ದ್ರವವನ್ನು ಬಿಸಿ ಮಾಡುವ ಮೂಲಕ ಏರಸಾಲ್‌ (aerosol) ಉಂಟಾಗುತ್ತದೆ.

ಈ ದ್ರವದಲ್ಲಿ ಸಾಮಾನ್ಯವಾಗಿ ನಿಕೋಟಿನ್‌ (Nicotine) , ಗ್ಲಿಸರೀನ್‌, ಪ್ರೊಪಿಲೀನ್‌ ಗ್ಲೈಕಾಲ್‌ (Propylene glycol) , ಹಾಗೂ ವಿವಿಧ ಪರಿಮಳದ ವಸ್ತುಗಳು ಸೇರಿರುತ್ತವೆ.

ಈ ಬಿಸಿ ಪ್ರಕ್ರಿಯೆಯಿಂದ ಉಂಟಾಗುವ ಧೂಮವನ್ನು ಶ್ವಾಸಕೋಶಕ್ಕೆ ಎಳೆದುಕೊಳ್ಳಲಾಗುತ್ತದೆ.(E-cigarette craze in teenagers)

ಇದನ್ನೇ “ಎಲೆಕ್ಟ್ರಾನಿಕ್‌ ನಿಕೋಟಿನ್‌ ಡೆಲಿವರಿ ಸಿಸ್ಟಂ (ENDS)” ಎಂದು ಕರೆಯಲಾಗುತ್ತದೆ.

ಸಾಮಾನ್ಯ ಸಿಗರೇಟ್‌ಗಳಲ್ಲಿ ತಂಬಾಕು ಸುಡುವಾಗ ಹೊರಹೊಮ್ಮುವ ಹೊಗೆ ಇದ್ದರೂ, ಇ-ಸಿಗರೇಟ್‌ಗಳಲ್ಲಿ ಹೊಗೆ ಬರುವುದಿಲ್ಲ.

ಆದಾಗ್ಯೂ, ನಿಕೋಟಿನ್‌ ಅಂಶ ಇರುವುದರಿಂದ ಇದು ಸಹ ಚಟ ಹಾಗೂ ವ್ಯಸನಕ್ಕೆ ಕಾರಣವಾಗುತ್ತದೆ.

ತಜ್ಞರ ಪ್ರಕಾರ, ಇವು ಶ್ವಾಸಕೋಶದ ದೋಷಗಳು, ನರಮಂಡಲದ ದುರ್ಬಲತೆ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಇನ್ನು ಭಾರತ ಸರ್ಕಾರವು 2019ರಲ್ಲಿ ಇ-ಸಿಗರೇಟ್‌ಗಳ ಮಾರಾಟ, ಉತ್ಪಾದನೆ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಿತ್ತು.

ಆದರೂ ಆನ್‌ಲೈನ್‌ ಮಾರಾಟ ಹಾಗೂ ಅಕ್ರಮ ಮಾರ್ಗಗಳ ಮೂಲಕ ಯುವಜನರು ಇವುಗಳನ್ನು ಸುಲಭವಾಗಿ ಪಡೆಯುತ್ತಿದ್ದಾರೆ.

2022ರ ಸಮೀಕ್ಷೆಯ ಪ್ರಕಾರ, 18 ರಿಂದ 30 ವರ್ಷದ ಯುವಕರಲ್ಲಿ ಸುಮಾರು 23% ಜನರು ಇ-ಸಿಗರೇಟ್‌ ಪ್ರಯೋಗ ಮಾಡಿದ್ದಾರೆ.

ದಿನನಿತ್ಯ ಬಳಕೆದಾರರ ಪ್ರಮಾಣ ಸುಮಾರು 8% ಆಗಿದ್ದು, ಇತ್ತೀಚಿನ ವರದಿಗಳ ಪ್ರಕಾರ ಈ ಪ್ರಮಾಣ 2025ರಲ್ಲಿ ಮತ್ತಷ್ಟು ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ, 13 ರಿಂದ 15 ವರ್ಷ ವಯಸ್ಸಿನ ಸುಮಾರು 15 ಲಕ್ಷ ಕಿಶೋರರು ಇ-ಸಿಗರೇಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

ವಯಸ್ಕರಿಗಿಂತ ಈ ವಯಸ್ಸಿನ ಗುಂಪಿನಲ್ಲಿ ಬಳಕೆ ಶೇ.9 ರಷ್ಟು ಹೆಚ್ಚಾಗಿದೆ.

ವಿಶ್ವದಾದ್ಯಂತ 91 ಲಕ್ಷ ಗಂಡು ಮಕ್ಕಳು ಮತ್ತು 56 ಲಕ್ಷ ಹೆಣ್ಣು ಮಕ್ಕಳು ವೇಪಿಂಗ್‌ ಚಟಕ್ಕೆ ಒಳಗಾಗಿದ್ದಾರೆ.

ಅಮೆರಿಕಾದಲ್ಲಿ ಮಾತ್ರವೇ 40% ಜನರು ತಿಂಗಳಲ್ಲಿ ಕನಿಷ್ಠ 20 ದಿನಗಳ ಕಾಲ ಇ-ಸಿಗರೇಟ್‌ಗಳನ್ನು ಬಳಸುತ್ತಿರುವುದು ವರದಿ ಹೇಳುತ್ತದೆ.

ಸಾಂಪ್ರದಾಯಿಕ ಸಿಗರೇಟ್‌ ಹಾನಿಯ ಬಗ್ಗೆ ಪೋಷಕರಿಗೆ ಅರಿವಿದ್ದರೂ, ಇ-ಸಿಗರೇಟ್‌ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದಿರುವುದರಿಂದ ಮಕ್ಕಳಲ್ಲಿ ಈ ಚಟ ಆರಂಭವಾದರೂ ತಕ್ಷಣ ಗಮನಕ್ಕೆ ಬರುವುದಿಲ್ಲ.

ಸಿಹಿ, ಹಣ್ಣು, ಕ್ಯಾಂಡಿ ಹಾಗೂ ಕೂಲ್‌ ಡ್ರಿಂಕ್ಸ್‌ ಪರಿಮಳದ ನಿಕೋಟಿನ್‌ ದ್ರವಗಳು ಹೊಸಬರನ್ನು ವೇಗವಾಗಿ ಚಟಕ್ಕೆ ತಳ್ಳುತ್ತಿವೆ.

ಜೊತೆಗೆ ಸಾಮಾಜಿಕ ಮಾಧ್ಯಮದ ಪ್ರಭಾವ, ಸಿನೆಮಾ ಹಾಗೂ ಸೆಲೆಬ್ರಿಟಿಗಳ ಪ್ರಚಾರದಿಂದ “ವೇಪಿಂಗ್‌ ಫ್ಯಾಷನ್‌” (Vaping Fashion) ಆಗಿ ಪರಿಣಮಿಸಿದೆ.

Tags: cigarettese-cigaretteNewdelhiWHO

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.