ಹಿಂದೂ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ ವಿಶೇಷ ಮಹತ್ವವಿದೆ. ಯಾವುದೇ ಶುಭಕಾರ್ಯಗಳಾಗಲಿ ಅಲ್ಲಿ ವೀಳ್ಯದೆಲೆ ಇರಲೇ ಬೇಕು. ವಿಶೇಷಣ ಜೀವಸತ್ವಯುತ ವೀಳ್ಯದೆಲೆ ಆರೋಗ್ಯದಲ್ಲೂ ವಿಶೇಷ ಸ್ಥಾನವನ್ನು ಪಡೆದಿದೆ.
- ಒಂದು ಚಮಚ ವೀಳ್ಯದೆಲೆ ರಸವನ್ನು ಪ್ರತಿದಿನ ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆ ನಿವಾರಣೆಯಾಗುವುದು.
- ಕಫ ಹೆಚ್ಚಾದರೆ ಎದೆ ಕಟ್ಟಿಕೊಂಡಂತಿದ್ದರೆ ಎರಡು ದೊಡ್ಡ ವೀಳ್ಯದೆಲೆಗಳನ್ನು ತೆಗೆದುಕೊಂಡು ಅದರಲ್ಲಿ ಎಳ್ಳೆಣ್ಣೆಯನ್ನು ಹಚ್ಚಿ ಬಿಸಿ ಮಾಡಿಕೊಂಡು ಎದೆಗೆ ಶಾಖ ನೀಡುವುದರಿಂದ ಕಟ್ಟಿಕೊಂಡಂತಹ ಎದೆ ನಿರಾಳವಾಗುವುದು.
- ದೇಹದಲ್ಲಿ ಯಾವುದೇ ಗಾಯವಾದಾಗ ವೀಳ್ಯದೆಲೆಗಳ ರಸವನ್ನು ತೆಗೆದು ಗಾಯಕ್ಕೆ ಹಚ್ಚಿದಾಗ ಗಾಯ ಗುಣವಾಗುವುದು.
- ವಿಪರೀತ ಉಸಿರಾಟದ ತೊಂದರೆಯಾಗಿದ್ದರೆ ವೀಳ್ಯದೆಲೆ ರಸಕ್ಕೆ ಶುಂಠಿ ಹಾಗೂ ತುಳಸಿ ರಸವನ್ನು ಮಿಕ್ಸ್ ಮಾಡಿ ಕುಡಿದರೆ ಉಸಿರಾಟ ನಿರಾಳವಾಗುತ್ತದೆ.
- ರಸಕ್ಕೆ ಜೇನು ತುಪ್ಪವನ್ನು ಸೇರಿಸಿ ಕುಡಿಯುವುದರಿಂದಲೂ ಉಸಿರಾಟದ ತೊಂದರೆಗೆ ನಿವಾರಣೆಯಾಗುವುದು. ಹೀಗೆ ಒಂದೆರಡು ತಿಂಗಳು ತಪ್ಪದೆ ತೆಗೆದುಕೊಳ್ಳಬೇಕು.
- ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಗಂಡು ನೋವು ಸಂದಿಗಳಲ್ಲಿ ನೋವು ಕಾಣಿಸಿಕೊಂಡಾಗ ವೀಳ್ಯದೆಲೆಯನ್ನು ಜಜ್ಜಿ ಸಾಸಿವೆ ಎಣ್ಣೆಯೊಂದಿಗೆ ಅದನ್ನು ಕುದಿಸಿ ಆ ಎಣ್ಣೆಯನ್ನು ತಣ್ಣಗಾದ ಬಳಿಕ ನಿತ್ಯ ಹಚ್ಚಿಕೊಂಡಾಗ ನೋವು ನಿವಾರಣೆಯಾಗುವುದು ಇನ್ನೂ ಹಲವಾರು ತೊಂದರೆಗಳಿಗೆ ವೀಳ್ಯದೆಲೆಯಿಂದ ಉಪಯೋಗವಿದ್ದು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ