ಈ ರಾಜ್ಯಗಳಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ!

Share on facebook
Share on google
Share on twitter
Share on linkedin
Share on print

ಅಹಮದಾಬಾದ್‌, ನ. 21: ಕೊರೋನಾದಿಂದಾಗಿ 8 ತಿಂಗಳ ನಂತರ ದೇಶ ಯಥಾವಸ್ಥೆಗೆ ಬರುತ್ತಿದೆ. ಆದರೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಳಿತಗಳು ಅರ್ವೇಸಾಮಾನ್ಯವಾಗಿ ಹೋಗಿದೆ. ಆದರೆ ಇದೀಗ ದೇಶದಲ್ಲಿ ಮತ್ತೊಮ್ಮೆ ಉಲ್ಬಣಿಸುತ್ತಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶ ಹಾಗೂ ಗುಜರಾತ್‌ ಪ್ರಮುಖ ಭಾಗಗಳಲ್ಲಿ ನೈಟ್‌ ಕರ್ಫ್ಯೂ ಜಾರಿಯಾಗಲಿದೆ.

ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್‌ ಕರ್ಫ್ಯೂ ಜಾರಿ ಇರಲಿದೆ. ಗುಜರಾತ್‌ನ ರಾಜ್‌ಕೋಟ್‌, ಸೂರತ್‌ ಮತ್ತು ವಡೋದರಾದಲ್ಲಿ ನೈಟ್‌ ಕರ್ಫ್ಯೂ ಘೋಷಣೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಮಾಹಿತಿ ನೀಡಿದ್ದಾರೆ.

ಇನ್ನು ಮಧ್ಯಪ್ರದೇಶದಲ್ಲಿ ನೈಟ್‌ ಕರ್ಫ್ಯೂ ೧೦ ಗಂಟೆಯಿಂದ ಜಾರಿಯಾಗಿ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಾಗುವ ಸಾಧ್ಯತೆ ಇದೆ. ಪ್ರಮುಖ ಸಿಟಿಗಳಾದ ಇಂದೋರ್‌, ಭೋಪಾಲ್‌, ಗ್ವಾಲಿಯರ್‌, ವಿದಿಶಾ ರತ್ಲಮ್‌ ಸಿಟಿಗಳಲ್ಲಿ ಕರ್ಫ್ಯೂ ಜಾರಿಯಾಗಲಿದೆ. ಮೂಲಗಳ ಪ್ರಕಾರ ಎರಡೂ ರಾಜ್ಯಗಳಲ್ಲಿ ನವೆಂಬರ್‌ 23ರವರೆಗೆ ನೈಟ್‌  ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Submit Your Article