ಮಾ. 27:ಇಂದು ಜಗತ್ತಿನಾದ್ಯಂತ ಅರ್ಥ್ ಅವರ್ ಎಂಬ ಪರಿಕಲ್ಪನೆಯನ್ನು ಆಚರಿಸಲಾಗುತ್ತಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಹವಾಮಾನ ವೈಪರೀತ್ಯ್, ಜಾಗತಿಕ ತಾಪಮಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಇದನ್ನು ಆಚರಣೆ ಮಾಡಲಾಗುತ್ತದೆ. ಈ ಪ್ರಯುಕ್ತ ರಾತ್ರಿ 8:30ರಿಂದ 9:30ರವರೆಗೆ ಒಂದು ಗಂಟೆಗಳ ಕಾಲ ಸಾರ್ವಜನಿಕರಲ್ಲಿ ಸ್ವಯಂ ಪ್ರೇರಿತವಾಗಿ ಮನೆಯ ದೀಪಗಳನ್ನು ಆರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಒಂದು ಗಂಟೆಗಳ ಕಾಲ ಮನೆಯ ದೀಪಗಳನ್ನು ಆರಿಸಿ ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ವಿಶ್ವದ 190 ದೇಶಗಳ ನಾಗರಿಕರು ಅರ್ಥ್ ಅವರ್ ಆಚರಿಸುತ್ತಾರೆ.
ಈ ವಿಶಿಷ್ಟ ಪರಿಕಲ್ಪನೆ 2007ರಲ್ಲಿ ಆರಂಭವಾಯಿತು. ಸಾಮಾಜಿಕ ಜಾಲತಾಣಗಳ ಮೂಲಕವೇ ವಿಶ್ವದ ಎಲ್ಲ ದೇಶಗಳ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಅರ್ಥ್ ಅವರ್ ಯೊಜನೆಯಡಿ ಮಾಡಲಾಗುತ್ತದೆ. ಅರ್ಥ್ ಅವರ್ ಎಂಬುದು ಮೊದಲು ಆರಂಭವಾದದ್ದು ಆಸ್ಟ್ರೇಲಿಯಾದಲ್ಲಿ. ವರ್ಡ್ ವೈಲ್ಡ್ಲೈಫ್ ಫಂಡ್ ಎಂಬ ಸಂಸ್ಥೆ ಒಂದು ಗಂಟೆಗಳ ಕಾಲ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ದೀಪ ಆರಿಸುವ ಹೊಸ ಕಲ್ಪನೆಯನ್ನು ಹುಟ್ಟುಹಾಕಿತು. 2007ರಿಂದ ಇಲ್ಲಿಯವರೆಗೂ ಸತತವಾಗಿ ಈ ಜಾಗೃತಿ ಕಾರ್ಯಕ್ರಮ ಮುಂದುವರೆದಿದೆ.
ಅರ್ಥ್ ಅವರ್ ಪ್ರಯುಕ್ತ ಜಾಗತಿಕವಾಗಿ ಸುಮಾರು 2.2 ಮಿಲಿಯನ್ ಸಾರ್ವಜನಿಕರು ಒಂದು ಗಂಟೆಗಳ ಕಾಲ ದೀಪ ಆರಿಸುತ್ತಾರೆ ಎಂದು ಹೇಳಲಾಗುತ್ತದೆ. ವಿಶ್ವವಿಖ್ಯಾತ ಐಫೆಲ್ ಟವರ್ನಂತ ಸ್ಥಳಗಳಲ್ಲಿಯೂ ಒಂದು ಗಂಟೆಗಳ ಕಾಲ ದೀಪ ಆರಿಸಲಾಗುತ್ತದೆ.