ಅಫ್ಘಾನಿಸ್ತಾನದಲ್ಲಿ(Afghansithan) 6.1 ತೀವ್ರತೆಯ ಭೂಕಂಪ(Earth Quake) ಸಂಭವಿಸಿದ್ದು, ಸಾವಿನ(Death) ಸಂಖ್ಯೆ 280ಕ್ಕೆ ಏರಿಕೆಯಾಗಿದೆ. ವಿವರಗಳು ಹೀಗಿವೆ. ಬುಧವಾರ ಮುಂಜಾನೆ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ(Pakistan) ಕೆಲವು ಭಾಗಗಳಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 155 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. USGS ಪ್ರಕಾರ, ಜನನಿಬಿಡ ಆಗ್ನೇಯ ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ ಸುಮಾರು 44 ಕಿಮೀ ದೂರದಲ್ಲಿ 51 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎನ್ನಲಾಗಿದೆ.

ನಾಶವಾದ ಕಲ್ಲಿನ ಮನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿವೆ, ನಿವಾಸಿಗಳು ಮಣ್ಣಿನ ಇಟ್ಟಿಗೆಗಳು ಮತ್ತು ಇತರ ಅವಶೇಷಗಳ ಮದ್ಯೆ ಸಿಲುಕಿಕೊಂಡಿದ್ದಾರೆ. ಗಾಯಗೊಂಡ ಸಂತ್ರಸ್ತರನ್ನು ಹೆಲಿಕಾಪ್ಟರ್ಗಳ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ. ಪಕ್ಟಿಕಾ ಪ್ರಾಂತ್ಯದಲ್ಲಿ 100 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ಮಾಹಿತಿ ನೀಡಿದ್ದಾರೆ. ಪೂರ್ವ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್ನಲ್ಲಿಯೂ ಸಹ ಸಾವುಗಳು ವರದಿಯಾಗಿವೆ.
ದೇಶದ ಪೂರ್ವ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 155 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಪ್ರಕಟವಾಗಿವೆ. ರಕ್ಷಣೆ ಮಾಡಲು ಹೆಲಿಕಾಪ್ಟರ್(Helicopter) ಮೂಲಕ ಆಗಮಿಸುತ್ತಿದ್ದಾರೆ ಎಂದು ಬಖ್ತರ್ ಸುದ್ದಿ ಸಂಸ್ಥೆ ಪ್ರತ್ಯೇಕವಾಗಿ ವರದಿ ಮಾಡಿದೆ. ಸುದ್ದಿ ಸಂಸ್ಥೆಯ ಮಹಾನಿರ್ದೇಶಕ ಅಬ್ದುಲ್ ವಾಹಿದ್ ರಾಯನ್ ಅವರು ಟ್ವಿಟ್ಟರ್ನಲ್ಲಿ ಪಕ್ಟಿಕಾದಲ್ಲಿ 90 ಮನೆಗಳು ಈಗಾಗಲೇ ನಾಶವಾಗಿವೆ ಮತ್ತು ಲೆಕ್ಕವಿಲ್ಲದಷ್ಟು ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಗಡಿಯ ಸಮೀಪವಿರುವ ಪಕ್ಟಿಕಾ ಪ್ರಾಂತ್ಯದ ದೃಶ್ಯಾವಳಿಗಳು ಸಂತ್ರಸ್ತರನ್ನು ಪ್ರದೇಶದಿಂದ ಹೆಲಿಕಾಪ್ಟರ್ಗಳಲ್ಲಿ ನೆರೆಪ್ರದೇಶಕ್ಕೆ ಸಾಗಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.