- ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ
- ದೆಹಲಿಯಲ್ಲೂ ಕಂಪನದ (Tremors in Delhi) ಅನುಭವ (Earthquake of magnitude Afghanistan)
- ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6 ರಷ್ಟು ದಾಖಲಾಗಿದ್ದು ಅದರ ಆಳ 121 ಕಿ.ಮೀ ಇದೆ.
New delhi: ಕಳೆದ ಕೆಲ ದಿನಗಳ ಹಿಂದಷ್ಟೇ ಮ್ಯಾನ್ಮಾರ್‌ನಲ್ಲಿ (Myanmar) ಸಂಭವಿಸಿದ ಭೀಕರತೆ ಕಣ್ಣಿಂದ ಮರೆಮಾಚುವ ಮುನ್ನವೇ ಇದೀಗ ಅಪ್ಘಾನಿಸ್ತಾನದಲ್ಲೂ (Afghanistan Earthquake) ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಭಾರತಕ್ಕೂ ತಟ್ಟಿದೆ.ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ ಮಧ್ಯಮ ಭೂಕಂಪ ಸಂಭವಿಸಿದ್ದು, ಭೂಕಂಪನಶೀಲ ಸಕ್ರಿಯ (Seismically active) ವಲಯದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಭೂಕಂಪವು ರಿಕ್ಟರ್ ಮಾಪಕದಲ್ಲಿ 5.6 ರಷ್ಟಿದ್ದು, ಬೆಳಿಗ್ಗೆ 4.43 IST ಕ್ಕೆ ಸಂಭವಿಸಿದೆ, ಇದರ ಕೇಂದ್ರಬಿಂದು 35.83 N ಅಕ್ಷಾಂಶ ಮತ್ತು 70.60 E ರೇಖಾಂಶದಲ್ಲಿದೆ (Latitude and longitude 70.60 E) . ಭೂಮಿಯ ಮೇಲ್ಮೈಯಿಂದ (Earth’s surface) 75 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು NCS ವರದಿ ಮಾಡಿದೆ.

ಈ ಭೂಕಂಪವು 121 ಕಿಮೀ ಅಂದರೆ 75 ಮೈಲುಗಳು ಆಳದಲ್ಲಿ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ (European-Mediterranean) ಭೂಕಂಪನ ಕೇಂದ್ರ (EMSC) ತಿಳಿಸಿದೆ, ಸುಮಾರು 108,000 ಜನಸಂಖ್ಯೆಯನ್ನು ಹೊಂದಿರುವ ಬಾಗ್ಲಾನ್ ನಗರದಿಂದ (Baghlan city) ಪೂರ್ವಕ್ಕೆ 164 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ಹೇಳಿದೆ.
ಆತಂಕದ ಸಂಗತಿ ಎಂದರೆ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ (Afghanistan) ಭೂಕಂಪನದ ಸಮಯದಲ್ಲೇ ದೆಹಲಿಯಲ್ಲಿ ಕೂಡ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ದೆಹಲಿ ಜನತೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.ಈ ಭೂಕಂಪದ ಪರಿಣಾಮ ದೆಹಲಿ-ಎನ್‌ಸಿಆರ್ (Delhi-NCR) , ನೋಯ್ಡಾ, ಗಾಜಿಯಾಬಾದ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಡುಬಂದಿದೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಬಳಕೆದಾರರು ಲಘು ಕಂಪನದ (Light vibration) ಅನುಭವವನ್ನು ವರದಿ ಮಾಡಿದ್ದಾರೆ.
ಕಳೆದ ಎರಡು ದಿನಗಳಲ್ಲಿ ತಜಕಿಸ್ತಾನದಲ್ಲಿ ಮೂರು ಭೂಕಂಪಗಳು (Tajikistan) ಸಂಭವಿಸಿವೆ. ಅಲ್ಲದೆ ವರ್ಷದ ಆರಂಭದಲ್ಲಿ ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ವಿನಾಶಕಾರಿ ಪರಿಸ್ಥಿತಿ ಉದ್ಭವಿಸಿತ್ತು. ಇದರಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ನಂತರ ಮಾರ್ಚ್‌ನಲ್ಲಿ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ (Myanmar and Thailand) ಭೂಕಂಪಗಳು ವಿನಾಶವನ್ನುಂಟುಮಾಡಿದವು.
ಇದನ್ನೂ ಓದಿ: http://ಕುಡಿಯುವ ಬಾಟಲಿ ನೀರು ಶೇಕಡ 50ರಷ್ಟು ಕಳಪೆ: ಆಹಾರ ಇಲಾಖೆ ಮಾಹಿತಿ
ಇನ್ನೂ ಫಿಲಿಪೈನ್ಸ್‌ನಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸುವ ಕೆಲವು ಗಂಟೆಗಳ ಮೊದಲು, ದಕ್ಷಿಣ ಫಿಲಿಪೈನ್ಸ್‌ನ (Southern Philippines) ಮಿಂಡಾನಾವೊ ದ್ವೀಪದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಳ: 30 ಕಿ.ಮೀ. ಸ್ಥಳ: ಮೈತುಮ್ ಪಟ್ಟಣದ ನೈಋತ್ಯಕ್ಕೆ 43 ಕಿ.ಮೀ. ದೂರದಲ್ಲಿ ಭೂಕಂಪನವಾಗಿದೆ. ಸ್ಥಳೀಯ (Earthquake of magnitude Afghanistan) ಅಧಿಕಾರಿಗಳ ಪ್ರಕಾರ, ಯಾವುದೇ ದೊಡ್ಡ ಹಾನಿ (Big damage) ಅಥವಾ ಸಾವುನೋವುಗಳು ಸಂಭವಿಸಿಲ್ಲ.