Bengaluru: ಮೊದಲೆಲ್ಲಾ ಒಂದು ವಾಹನಕ್ಕೆ ಎಫ್ಸಿ (FC) ಮಾಡಿಸಬೇಕು ಅಂದರೆ ಬ್ರೋಕರ್ಗೆ, ಆರ್ಟಿಒ (RTO) ಹಿಂದೆಯೇ ಅಲೆಯಬೇಕಿತ್ತು.ಒಂದೆರಡು ಸಲ ಹೋದಾಗ ಕೆಲಸ ಆಗದಿದ್ದಾಗ ಅಲ್ಲಿನ ಅಧಿಕಾರಿಗಳಿಗೆ ದುಡ್ಡು ಕೊಡಬೇಕಿತ್ತು. ಅಷ್ಟಾದರೂ ದಿನವೆಲ್ಲ ಆರ್ಟಿಒ ಕಚೇರಿಗೆ (RTO office) ಅಲೆಯಬೇಕಿತ್ತು. ಆದರೆ ಅದಕ್ಕೆಲ್ಲ ಇನ್ಮುಂದೆ ಬ್ರೇಕ್ ಬೀಳಲಿದೆ. ಆರ್ಟಿಒ ಇನ್ಸ್ಪೆಕ್ಟರ್ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್ಸಿ! ಎಫ್ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ (Bangalore) ಇದೇ ಮೊದಲ ಬಾರಿಗೆ ನೆಲಮಂಗಲ ಆರ್ಟಿಒದಲ್ಲಿ (Nelamangala RTO) ಎಟಿಎಸ್ ಸೆಂಟರ್ಗಳನ್ನು ತೆರೆಯಲಾಗಿದೆ. ಈ ಸೆಂಟರ್ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ.
ಹಿಂದೆ ವಾಹನಗಳಿಗೆ ಎಫ್ಸಿ (FC for vehicles) ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆರ್ಟಿಓ ಅಧಿಕಾರಿಗಳು (RTO office) , ಬ್ರೋಕರ್ ಗಳಿಗೆ ಇಷ್ಟು ಎಂದು ಹಣ ನೀಡಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್ಸಿ (FC) ಆಗುತ್ತದೆ. ಅದು ಲಂಚ (Bribe) ನೀಡದೆ. ಇನ್ನು ನಿಯಮಗಳ ಪ್ರಕಾರ, ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್ಸಿ ಮಾಡಿಸಬೇಕು.
ಇನ್ನು ಕೆಲವು ಸಲ ಈ ಎಫ್ಸಿಗೆ ಹೋಗುವ ವಾಹನಗಳಲ್ಲಿ (Vehicals) ಎಲ್ಲಾ ಸರಿ ಇದ್ದರೂ ಆರ್ಟಿಒ (RTO) ಇನ್ಸ್ಪೆಕ್ಟರ್ಗಳು ಏನಾದರೂ ಕಾರಣ ಹೇಳಿ ಎಫ್ಸಿ ಫೇಲ್ (FC fail) ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್ಗಳಿಂದ (ATS) ಆ ರೀತಿ ಮಾಡಲು ಆಗುವುದಿಲ್ಲ. ಪ್ರತಿಯೊಂದನ್ನೂ ಈ ಮಷಿನ್ಗಳು ಪರಿಶೀಲನೆ ಮಾಡಲಿವೆ. ಈ ಮಷಿನ್ ಮೂಲಕ ಸ್ಥಳದಲ್ಲೇ ವಾಹನ ಮಾಲೀಕರಿಗೆ ಎಫ್ಸಿ ಸರ್ಟಿಫಿಕೇಟ್ (FC Certificate) ದೊರೆಯುತ್ತದೆ. ಲಂಚಗುಳಿ ತನವನ್ನು ಮಾಡುವಂತಿಲ್ಲ.ಹಾಗಾಗಿ ಈ ಬಗ್ಗೆ ವಾಹನ ಮಾಲೀಕರು (Vehicle owner) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿಗೆ ಹೊಸದಾಗಿ ಓಪನ್ ಆಗಿರುವ ಎಟಿಎಸ್ ಸೆಂಟರ್ಗಳಿಂದ ವಾಹನ ಮಾಲೀಕರಿಗೆ ಕಿರಿಕಿರಿ ತಪ್ಪುವುದರ ಜತೆಗೆ ಹಣ ಉಳಿಯುತ್ತದೆ.