ಆಯುರ್ವೇದ (Ayurveda) ಗುಣಗಳಿಂದ ತುಂಬಿರುವ ತುಳಸಿ ಗಿಡಗಳು (Basil plants) ಭಾರತದ ಬಹುತೇಕ ಮನೆಗಳಲ್ಲಿ ಕಂಡುಬರುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು (Medicinal properties) ಹೊಂದಿದ್ದು ಶೀತ ಮತ್ತು ಕೆಮ್ಮಿನಿಂದ ಹಿಡಿದು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ. (Eat basil seeds) ಆದರೆ ತುಳಸಿ ಮಾತ್ರವಲ್ಲ ಅದರ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ತುಳಸಿ ಬೀಜಗಳು ಪ್ರೋಟೀನ್ (protein), ಫೈಬರ್ (Fiber) ಮತ್ತು ಕಬ್ಬಿಣದಿಂದ ಸಮೃದ್ಧವಾಗಿವೆ. ಇದು ಅನೇಕ ರೋಗಗಳಿಂದ ಪರಿಹಾರವನ್ನು ನೀಡುತ್ತದೆ. ಇದು ಉದ್ವೇಗವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಆತಂಕ ಅಥವಾ ಮಾನಸಿಕ ಒತ್ತಡದಿಂದ (Mental stress) ದಣಿದ ಅಥವಾ ತೊಂದರೆಗೊಳಗಾದವರಿಗೆ ತುಳಸಿ ಬೀಜಗಳು ತುಂಬಾ ಪ್ರಯೋಜನಕಾರಿ.
ಖಿನ್ನತೆ (Depression) ಅಥವಾ ಒತ್ತಡದಿಂದ (Stress) ಹೊರಬರಲು ಬಯಸುವವರಿಗೆ ತುಳಸಿ ಬೀಜಗಳು ಉತ್ತಮ ಆಯ್ಕೆಯಾಗಿದೆ.ಇನ್ನು ಕೆಲವು ಜನರು ಸಾಮಾನ್ಯವಾಗಿ ಕೆಟ್ಟ ಆಹಾರ ಪದ್ಧತಿಗಳಿಂದ (Dietary habits) ತೂಕವನ್ನು ಹೆಚ್ಚಿಸಿಕೊಂಡಿರುತ್ತಾರೆ. ಇದರಿಂದಾಗಿ ಅವರಲ್ಲಿ ತುಂಬಾ ಅಸಮಾಧಾನವಿರುತ್ತದೆ.
ತುಳಸಿ ಬೀಜಗಳು ಇದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಇದರಲ್ಲಿರುವ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳು (Low calories) ತೂಕವನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿದಂತೆ ಮಾಡುತ್ತವೆ. ಬೇಸಿಗೆ ಕಾಲದಲ್ಲಿ ಕೆಲವರಿಗೆ ಮಲಬದ್ಧತೆ (Constipation), ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ (Gas problem) ಇರುತ್ತದೆ.

ನೀವು ಅದನ್ನು ತೊಡೆದುಹಾಕಲು ಬಯಸಿದರೆ, ತುಳಸಿ ಬೀಜಗಳನ್ನು ಸೇವಿಸಬಹುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ. ತುಳಸಿ ಬೀಜಗಳು ಜೀರ್ಣಕ್ರಿಯೆಯನ್ನು (Digestion) ಸುಧಾರಿಸಲು ಸಹಾಯ ಮಾಡುತ್ತದೆ.ನೆಗಡಿ, ಅಸ್ತಮಾ ಮತ್ತು ಕೆಮ್ಮಿದ್ದಾಗ ತುಳಸಿ ಬೀಜಗಳನ್ನು ಮನೆಮದ್ದಾಗಿ ನೀಡುವುದು ಹಿಂದಿನಿಂದಲೂ ರೂಢಿಯಲ್ಲಿದೆ.
ಅವು ಆಂಟಿಸ್ಪಾಸ್ಮೋಡಿಕ್ (Antispasmodic) ಗುಣಗಳನ್ನು ಹೊಂದಿದ್ದು, ನೆಗಡಿ ಮತ್ತು ಕೆಮ್ಮನ್ನು ಸುಧಾರಣೆಗೆ ತರಲು ಸಹಾಯ ಮಾಡುತ್ತದೆ. ಜ್ವರವನ್ನು ತಗ್ಗಿಸಲು ನೀವು ತುಳಸಿ ಬೀಜಗಳನ್ನು ಬಳಸಬಹುದು.ವಿವಿಧ ಅಧ್ಯಯನಗಳ ಪ್ರಕಾರ, ತುಳಸಿ ಬೀಜಗಳಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar levels) ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು; ಹಸಿರು ಬಟಾಣಿ
ಒಂದು ಟೀಸ್ಪೂನ್ ತುಳಸಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ನೆನೆಸಿದ ಬೀಜಗಳನ್ನು ಬೆಳಿಗ್ಗೆ ಒಂದು ಲೋಟ ಹಾಲಿಗೆ ಸೇರಿಸಿ ಕುಡಿದರಿ. ಇದನ್ನು ಪ್ರತಿದಿನ ಕುಡಿಯುವುದರಿಂದ ನಿಮ್ಮ ಇನ್ಸುಲಿನ್ (Insulin) ಸೂಕ್ಷ್ಮತೆ ಸುಧಾರಿಸುತ್ತದೆ.ತುಳಸಿ ಬೀಜಗಳು ಉರಿಯೂತದ ಗುಣಗಳನ್ನು (Eat basil seeds) ಹೊಂದಿದ್ದು, ಬಾಯಿ ಹುಣ್ಣಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ.
ಇವು ಆಂಟಿಮೈಕ್ರೊಬಿಯಲ್, ಆಂಟಿವೈರಲ್ (Antiviral), ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ (Anti-fungal) ಗುಣಗಳನ್ನು ಹೊಂದಿದ್ದು, ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ತುಳಸಿ ಬೀಜಗಳಲ್ಲಿ ಒಲೀಕ್ ಆಮ್ಲ ಮತ್ತು ಲಿನೋಲೆನಿಕ್ ಆಮ್ಲಗಳಂತಹ ಫೈಟೊಕೆಮಿಕಲ್ಸ್’ಗಳು ಹೆಚ್ಚಾಗಿವೆ.
ತುಳಸಿ ಬೀಜದ ಎಣ್ಣೆಯು ಕೊಬ್ಬಿನಾಮ್ಲಗಳ (Fatty acids) ಉತ್ತಮ ಮೂಲವೂ ಆಗಿದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಹೃದಯರಕ್ತನಾಳದ (Cardiovascular) ಆರೋಗ್ಯಕ್ಕೂ ಇದು ಒಳ್ಳೆಯದು.