ಸಾಕಷ್ಟು ಜನರು ಕುಂಬಳಕಾಯಿಯನ್ನು (Pumpkin) ಸೇವನೆ ಮಾಡುತ್ತಾರೆ ಆದರೆ ಅದರಲ್ಲಿರುವ ಬೀಜಗಳನ್ನು ಎಸೆದುಬಿಡುತ್ತಾರೆ.ಕುಂಬಳಕಾಯಿ ಗಿಂತಲೂ ಅದರ ಬೀಜವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳು ಆಗುತ್ತದೆ.ಕುಂಬಳಕಾಯಿ ಬೀಜದಲ್ಲಿ (pumpkin seeds) ಮೆಗ್ನೀಸಿಯಮ್ (Magnesium) ಸಮೃದ್ಧವಾಗಿದೆ.ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಬಿ 2, ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ.ಇದು ದೇಹದಲ್ಲಿ ವಿಟಮಿನ್ ಆಗಿ ಬದಲಾವಣೆ ಆಗುತ್ತದೆ.

ಕುಂಬಳಕಾಯಿ ಬೀಜದಲ್ಲಿರುವ ಕೊಬ್ಬಿನಾಮ್ಲಗಳು (Fatty acids) ಆರೋಗ್ಯಕರ ರಕ್ತನಾಳಗಳನ್ನು ಕಾಪಾಡಿಕೊಳ್ಳುವಂತೆ ಮಾಡುತ್ತದೆ.ಇನ್ನು ಹೃದಯದ ಆರೋಗ್ಯವನ್ನ ಕಾಪಾಡುತ್ತದೆ.ಕುಂಬಳಕಾಯಿ ಬೀಜ ಸೇವನೆ ಮಾಡುವುದರಿಂದ ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (Bad cholesterol) ಅನ್ನು ತೆಗೆದುಹಾಕುತ್ತದೆ.ಉತ್ತಮ ಕೊಬ್ಬುಗಳನ್ನು ದೇಹದಲ್ಲಿ ಉತ್ಪಾದನೆ ಮಾಡುತ್ತದೆ.ಕುಂಬಳಕಾಯಿ ಬೀಜಗಳು ಟ್ರಿಪ್ಟೊಫಾನ್
(Tryptophan) ಅನ್ನು ಹೊಂದಿರುತ್ತವೆ ಮೆಲಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುವ ಅಮೈನೋ ಆಮ್ಲವಾಗಿದೆ.

ಕುಂಬಳಕಾಯಿ ಬೀಜದಲ್ಲಿ ಸತು ಮತ್ತು ವಿಟಮಿನ್ ಇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ವಿಟಮಿನ್ ಇ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ.ಆರೋಗ್ಯದ ಅಡಿಪಾಯವೇ ಜೀರ್ಣಕ್ರಿಯೆ ಕುಂಬಳಕಾಯಿ ಬೀಜವು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ದತೆಯನ್ನು (Constipation) ತಡೆಯುತ್ತದೆ.