ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಹಾರ್ಮೋನ್ ಇನ್‌ಬ್ಯಾಲೆನ್ಸ್ (Hormonal imbalance) ಸಮಸ್ಯೆಗಳು ಕಾಡುತ್ತಿವೆ. ಕೆಲಸದ ಒತ್ತಡ, ನೈಟ್ ಶಿಫ್ಟ್ ಎಫೆಕ್ಟ್‌ನಿಂದ ಹೆಚ್ಚಾಗಿ ಮಹಿಳೆಯಲ್ಲಿ ಹಾರ್ಮೋನ್ ಇನ್‌ಬ್ಯಾಲೆನ್ಸ್ ಸಮಸ್ಯೆ ಕಾಡುತ್ತಿದೆ. ಇದ್ರಿಂದ ಆಚೆ ಬರಲು ಆಸ್ಪತ್ರೆ, ನಾಟಿ ಔಷಧಿ (Graft medicine) ಎಲ್ಲಾ ತೆಗೆದುಕೊಳ್ತಾರೆ. ಆದ್ರೂ ಕೂಡ ಕೆಲವರಲ್ಲಿ ಸಮಸ್ಯೆ ಪರಿಹಾರ ಆಗೋದಿಲ್ಲ. ಹಾರ್ಮೋನ್ ಇನ್‌ಬ್ಯಾಲೆನ್ಸ್ ಆದಾಗ ಮುಟ್ಟಿನ ಸಮಸ್ಯೆ ಕಾಡಲಿದೆ.
ಬೀಜಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿದ್ದು, ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ (Fiber),ಪ್ರೋಟೀನ್ಗಳು (Proteins), ಜೀವಸತ್ವಗಳು (Vitamins) ಮತ್ತು ಖನಿಜಗಳು (Minerals) ಸಮೃದ್ಧವಾಗಿರುತ್ತದೆ. ಇದನ್ನ ಸೇವನೆ ಮಾಡೋದ್ರಿಂದ ದೇಹಕ್ಕೆ ಅನೇಕ ಆರೋಗ್ಯ ಲಾಭಗಳಿವೆ. ರಕ್ತದೊತ್ತಡ (Blood pressure), ಕೊಲೆಸ್ಟ್ರಾಲ್ (Cholesterol), ಹೃದ್ರೋಗದ ಸಮಸ್ಯೆಗಳು (Cardiovascular problems) ನಿವಾರಣೆ ಆಗಲಿದೆ. ಹಾರ್ಮೋನ್ ಇನ್‌ಬ್ಯಾಲೆನ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಕೆಳಕಂಡ ಬೀಜಗಳನ್ನ ಸೇವನೆ ಮಾಡಿ.
ಅಗಸೆ ಬೀಜ: ಅಗಸೆ ಬೀಜಗಳಲ್ಲಿ (Flax seeds) ಫೈಬರ್ ಅಂಶ ಹೆಚ್ಚಾಗಿರೋದ್ರಿಂದ ಜೀರ್ಣಕ್ರಿಯೆ ಸುಲಭ ಆಗುತ್ತೆ. ಹಾಗೂ ಮಲಬದ್ಧತೆಯಂಥಾ (Constipation) ಸಮಸ್ಯೆ ನಿವಾರಣೆ ಆಗುತ್ತದೆ. ಈ ಸಮಸ್ಯೆಗಳು ಕಾಡದಿದ್ದರೆ ಹಾರ್ಮೋನ್ ಇನ್‌ಬ್ಯಾಲೆನ್ಸ್ ಆಗೋದಿಲ್ಲ.ಅಗಸೆ ಬೀಜಗಳ ನಿಯಮಿತ ಸೇವನೆಯು ಮಹಿಳೆಯರಲ್ಲಿ ಹಾರ್ಮೋನುಗಳ ಸಮತೋಲನವನ್ನು (Hormonal balance) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಋತುಚಕ್ರದ ಸಮಸ್ಯೆಗಳನ್ನು (Menstrual problems) ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

ಚಿಯಾ ಬೀಜಗಳು: ಚೀಯಾ ಬೀಜಗಳನ್ನ (Chia seeds) ಸೇವನೆ ಮಾಡೋದ್ರಿಂದ ದೇಹ ತಂಪಾಗಿರುತ್ತದೆ. ಇದರಲ್ಲಿ ಫೈಬರ್ (Fiber), ಪ್ರೋಟೀನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿದ್ದು, ಇದನ್ನ ನಿಯಮಿತವಾಗಿ ಸೇವನೆ ಮಾಡೋದ್ರಿಂದ ಹಾರ್ಮೋನ್ ಸಮಸ್ಯೆಯಿಂದ ಮುಕ್ತಿ ಪಡಿಯಬಹುದು.

ಜೀರಿಗೆ ನೀರು: ಜೀರಿಗೆ (Cumin) ಕೂಡ ದೇಹಕ್ಕೆ ತಂಪಾಗಿದ್ದು, ಇದನ್ನ ಸೇವಿಸೋದ್ರಿಂದ ಹೆಣ್ಣುಮಕ್ಕಳ ದೇಹ ಕೂಲ್ ಆಗಿರುತ್ತೆ. ಜೀರಿಗೆ ಕುದಿಸಿದ ನೀರು ಕುಡಿದ್ರೆ ಮುಟ್ಟಿನ ಸಮಸ್ಯೆಗಳು ನಿವಾರಣೆ ಆಗಲಿದೆ. ಜೀರಿಗೆಯನ್ನ ಹಾಗೆ ಸೇವಿಸೋದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು (Gastric problems) ನಿವಾರಣೆ ಆಗಲಿದೆ.