Visit Channel

ಸೌಂದರ್ಯ ಉತ್ತಮವಾಗಿರಬೇಕಾದರೆ ಈ ವಿಟಮಿನ್ ಗಳನ್ನು ಆಹಾರದಲ್ಲಿ ಸೇವಿಸಿ

pic

ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಕೂಡ ವಿಟಮಿನ್ಸ್ ಗಳು ಅತ್ಯವಶ್ಯಕ. ವಿಟಮಿನ್ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರ ಜೊತೆಗೆ ವಿಟಮಿನ್ ಕೊರತೆಯಿಂದ ತ್ವಚೆ ಮತ್ತು ಕೂದಲು ಚೈತನ್ಯ ಕಳೆದುಕೊಳ್ಳುತ್ತವೆ. ವಿಶೇಷವಾಗಿ ಮಹಿಳೆಯರ ಜೀವನದ ಕೆಲವು ಹಂತಗಳಲ್ಲಿ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಗಳಿವೆ. ಅವುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.

ವಿಟಮಿನ್ ಸಿ:
ರೋಗನಿರೋಧಕ ವ್ಯವಸ್ಥೆಗೆ ವಿಟಮಿನ್ ಸಿ ಅತ್ಯಂತ ಅವಶ್ಯಕವಾಗಿದ್ದು, ನಮ್ಮನ್ನು ರೋಗದಿಂದ ಮುಕ್ತವಾಗಿರಿಸುತ್ತದೆ. ಈ ಸಾಂಕ್ರಾಮಿಕ ಸಮಯದಲ್ಲಿ ಇದರ ಅಗತ್ಯ ಹೆಚ್ಚಿದೆ. ಚರ್ಮದ ಆರೋಗ್ಯಕ್ಕೂ ಇದು ಅತ್ಯಂತ ಅವಶ್ಯಕವಾಗಿದೆ. ವಿಟಮಿನ್ ಸಿ ಯೌವ್ವನದ ಗುಣಗಳನ್ನು ಸಂರಕ್ಷಿಸುವದಲ್ಲದೇ, ಸುಕ್ಕುಗಳಾಗುವದನ್ನು ವಿಳಂಬಗೊಳಿಸುತ್ತದೆ.
ಆಹಾರ ಮೂಲಗಳು : ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿಹಣ್ಣು, ನೆಲ್ಲಿ, ಟೊಮೆಟೊ, ಮೊಳಕೆಯೊಡೆದ ಧಾನ್ಯಗಳು ಮತ್ತು ಹಸಿರು ಎಲೆಗಳ ತರಕಾರಿಗಳಂತಹ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವಿಟಮಿನ್ ಎ:
ಈ ವಿಟಮಿನ್ ಚರ್ಮದ ಯೌವ್ವನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಇದು ಜೀವಕೋಶಗಳ ಪುನರುತ್ಪಾದನೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿ, ನಯವಾಗಿ ಮತ್ತು ತಾರುಣ್ಯದಿಂದ ಇಡುತ್ತದೆ. ವಿಟಮಿನ್ ಎ ಸಹ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ನಮ್ಮ ದೃಷ್ಟಿಗೆ ಅತ್ಯಂತ ಅವಶ್ಯಕವಾಗಿದೆ ಮತ್ತು ಕೂದಲಿನ ವಿನ್ಯಾಸವನ್ನು ರಕ್ಷಿಸುತ್ತದೆ.
ಆಹಾರ ಮೂಲಗಳು : ಹಾಲು, ಮೀನು, ಕ್ಯಾರೆಟ್, ಪಪ್ಪಾಯಿ, ಮಾವು ಮತ್ತು ಎಲೆಕೋಸುಗಳಿಂದ ವಿಟಮಿನ್ ಎ ಪಡೆಯಬಹುದು.

ಬಿ-ಕಾಂಪ್ಲೆಕ್ಸ್ ವಿಟಮಿನ್ಗಳು:
ಇವು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತವೆ ಮತ್ತು ರಕ್ಷಿಸುತ್ತವೆ. ಕೂದಲು ಬಿಳಿಯಾಗುವುದನ್ನು ತಡೆಯಲು ಮತ್ತು ಕೂದಲು ಹುಟ್ಟಲು ಸಹಾಯ ಮಾಡುತ್ತದೆ. ಬಿ-ಕಾಂಪ್ಲೆಕ್ಸ್ ವಿಟಮಿನ್‌ ಸಮೃದ್ಧವಾಗಿರುವ ಆಹಾರವು ತಲೆಹೊಟ್ಟು ಮತ್ತು ಕೂದುಲುದುರಿವಿಕೆ ಸಮಸ್ಯೆಗಳನ್ನು ಗುಣಪಡಿಸಿ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಆಹಾರ ಮೂಲಗಳು : ಬಿ-ಕಾಂಪ್ಲೆಕ್ಸ್ ವಿಟಮಿನ್ಗಳು ಧಾನ್ಯಗಳಲ್ಲಿ ಲಭ್ಯವಿದ್ದು, ವಿವಿಧ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಮತ್ತು ಮೊಸರಲ್ಲೂ ಕಂಡುಬುರುವುದು.

ವಿಟಮಿನ್ ಡಿ:
ಇದು ಮತ್ತೊಂದು ಅಗತ್ಯವಾದ ವಿಟಮಿನ್ ಆಗಿದ್ದು, ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಹೆಚ್ಚು ಅವಶ್ಯಕವಾಗಿದೆ. ನೈಸರ್ಗಿಕ ವಿಟಮಿನ್ ಡಿ ಸೂರ್ಯನಿಂದ ಲಭ್ಯವಾಗುತ್ತದೆ. ಕ್ಯಾಲ್ಸಿಯಂ ಸೇರಿದಂತೆ ನಮ್ಮ ರಕ್ತದಲ್ಲಿನ ಖನಿಜಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯು ಬೇಗ ವಯಸ್ಸಾಗುವಿಕೆಯ ಲಕ್ಷಣಗಳನ್ನು ನೀಡುವುದು:
ಆಹಾರ ಮೂಲಗಳು : ಮೀನು, ಮೊಟ್ಟೆ ಮತ್ತು ಯಕೃತ್ತಿನಲ್ಲಿ ವಿಟಮಿನ್ ಡಿ ಲಭ್ಯವಿದೆ.

ವಿಟಮಿನ್ ಇ:
ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಯೌವ್ವನದ ಗುಣಗಳನ್ನು ಕಾಪಾಡಲು ಸಹಾಯ ಮಾಡುತ್ತದೆ. ಅನೇಕರು ಇದನ್ನು “ಚೈತನ್ಯದ ವಿಟಮಿನ್” ಎಂದು ಕರೆಯುತ್ತಾರೆ ಏಕೆಂದರೆ ಇದು ಯೌವ್ವನದ ಗುಣಗಳನ್ನು ರಕ್ಷಿಸುತ್ತದೆ, ಜೊತೆಗೆ ವೃದ್ಧಾಪ್ಯದಲ್ಲೂ ಸಹಾಯ ಮಾಡುತ್ತದೆ. ಇತರ ವಿಷಯಗಳ ಜೊತೆಗೆ, ಇದು ಚರ್ಮವನ್ನು ಮೃದುವಾಗಿ, ನಯವಾಗಿ ಮತ್ತು ದೃಢವಾಗಿರಿಸುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ಕ್ರೀಮ್‌ಗಳು ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆಹಾರ ಮೂಲಗಳು : ಮೊಟ್ಟೆ, ಯಕೃತ್ತು, ಸೂರ್ಯಕಾಂತಿ ಎಣ್ಣೆ, ಬಾದಾಮಿ, ಬಟಾಣಿ ಮತ್ತು ಹಸಿರು ತರಕಾರಿಗಳು ವಿಟಮಿನ್ ಇ ಯ ಸಮೃದ್ಧ ಮೂಲಗಳು.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.