- ಹೆಚ್ಚುತ್ತಿರುವ ಭಾರತದ ಸಾಲದ ಭಾರ
- ಕರ್ನಾಟಕದ ಪಾಲು ₹7.6 ಲಕ್ಷ ಕೋಟಿ
- ₹188 ಲಕ್ಷ ಕೋಟಿಗೆ ಏರಿದ ಭಾರತದ ಸಾಲ ಆರ್ಥಿಕತೆಗೆ ಎಚ್ಚರಿಕೆ ಗಂಟೆ
ಭಾರತದ ಆರ್ಥಿಕತೆಯ(Economy of India) ಪ್ರಸ್ತುತ ಸ್ಥಿತಿ ಬಗ್ಗೆ ಆಳವಾದ ಚಿಂತನೆಯನ್ನು ಕೇಳಿಸುವ ಅಂಕಿಅಂಶಗಳು ಹೊರಬಿದ್ದಿವೆ.
2014ರಲ್ಲಿ ದೇಶದ ಒಟ್ಟು ಸಾಲ ₹55 ಲಕ್ಷ ಕೋಟಿ ಇದ್ದರೆ, 2025ರ ವೇಳೆಗೆ ಇದು ₹188 ಲಕ್ಷ ಕೋಟಿಗೆ ಏರಲಿದೆ. ಅಂದರೆ 10 ವರ್ಷಗಳಲ್ಲಿ ಮೂರುಪಟ್ಟುಗಿಂತ ಹೆಚ್ಚು ಏರಿಕೆಯಾಗಿರುವುದು ಸ್ಪಷ್ಟ.
ಭಾರತ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಬೆಳೆದರೂ, ಈ ಬೆಳವಣಿಗೆಯ ಬೆನ್ನಿಗೆ ಸಾಗುತ್ತಿರುವ ಸಾಲದ ಭಾರ(Debt burden) ಆತಂಕಕಾರಿಯಾಗಿದೆ.
ಇನ್ನು ದೇಶದ ಸಾಲದಲ್ಲಿ ಅಂತರಿಕ (Internal) ಮತ್ತು ಬಾಹ್ಯ (External) ಸಾಲ ಎರಡೂ ಮುಖ್ಯ ಪಾತ್ರ ವಹಿಸುತ್ತಿವೆ. ಮುಂದಿನ 5-6 ವರ್ಷಗಳಲ್ಲಿ, 2026 ರಿಂದ 2031ರ ನಡುವೆ ಭಾರತದಲ್ಲಿ INTERNAL DEBT ಮತ್ತು EXTERNAL DEBT ಎರಡೂ ₹200 ಲಕ್ಷ ಕೋಟಿಯ ಮಟ್ಟವನ್ನು ತಲುಪಲಿವೆ ಎಂಬ ನಿರೀಕ್ಷೆ ಇದೆ.
ಇದು ಭಾರತೀಯ ಹಣಕಾಸು ವ್ಯವಸ್ಥೆಯ ಮೇಲೆ ಉಂಟುಮಾಡಬಹುದಾದ ಒತ್ತಡಕ್ಕೆ ಸ್ಪಷ್ಟ ಸೂಚನೆಯಾಗಿದೆ.
ಈ ಸಾಲದ ಏರಿಕೆ ನಿಜಕ್ಕೂ ಚಿಂತೆಗೆ ಕಾರಣವಾಗಿದೆ, ದೇಶದ ಹಣಕಾಸು ಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯಮಟ್ಟದಲ್ಲಿಯೂ ಸಾಲದ ಮಟ್ಟ ತೀವ್ರವಾಗಿದೆ.
ಮಹಾರಾಷ್ಟ್ರ (₹8.33 ಲಕ್ಷ ಕೋಟಿ), ಉತ್ತರ ಪ್ರದೇಶ (₹8.16 ಲಕ್ಷ ಕೋಟಿ), ತಮಿಳುನಾಡು (₹7.83 ಲಕ್ಷ ಕೋಟಿ), ಆಂಧ್ರಪ್ರದೇಶ (₹7.64 ಲಕ್ಷ ಕೋಟಿ) ಮೊದಲಾದ ರಾಜ್ಯಗಳು ಭಾರಿ ಸಾಲದಲ್ಲಿವೆ.

ಕರ್ನಾಟಕವೂ ಈ ಪಟ್ಟಿಯಲ್ಲಿ ಇದ್ದು, ಇದರ ಒಟ್ಟು ಸಾಲ ₹7.64 ಲಕ್ಷ ಕೋಟಿ. ರಾಜ್ಯಗಳು ವಲಯ ಯೋಜನೆಗಳು, ಉಚಿತ ಸೌಲಭ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಹೊಸ ಸಾಲಗಳನ್ನು ಮಾಡುತ್ತಿವೆ.
ಇದು ತಾತ್ಕಾಲಿಕ ಉಪಯೋಗ ನೀಡಿದರೂ, ದೀರ್ಘಾವಧಿಯಲ್ಲಿ ಬಡ್ಡಿ ಪಾವತಿಗೆ ರಾಜ್ಯದ ಬಜೆಟ್‌ನ ಬಹುಪಾಲು ಬಳಸಲ್ಪಡುವ ಸಾಧ್ಯತೆ ಇದೆ. ಇನ್ನು 2024ರ ಹಣಕಾಸು ವರ್ಷದ ಕರ್ನಾಟಕ ಮುಕ್ತ ಸಾಲ ಭಾರ ₹2.52 ಲಕ್ಷ ಕೋಟಿ.
ಈ ಪೈಕಿ:
ಬಡ್ಡಿ ಪಾವತಿ: ₹33,880 ಕೋಟಿ
ಉದ್ಯೋಗ ವೇತನ ಮತ್ತು ನಿವೃತ್ತಿ: ₹60,007 ಕೋಟಿ
ಉಚಿತ ಯೋಜನೆಗಳಿಗೆ ವೆಚ್ಚ: ₹50,776 ಕೋಟಿ
ಈ ಅಂಕಿಅಂಶಗಳು ಸ್ಪಷ್ಟವಾಗಿ ಏನು ಹೇಳುತ್ತವೆ ಎಂದರೆ, ರಾಜ್ಯ ಸರ್ಕಾರದ(State Govt) ಬಹುಪಾಲು ವೆಚ್ಚಗಳು ಬಡ್ಡಿ, ವೇತನ ಮತ್ತು ಉಚಿತ ಸೌಲಭ್ಯಗಳಲ್ಲಿ ಖರ್ಚು ಹೆಚ್ಚಾಗುತ್ತಿದೆ.
ಶೈಕ್ಷಣಿಕ ಮತ್ತು ಆರೋಗ್ಯ ವಿಭಾಗಗಳಿಗೆ ಕಡಿಮೆ ಆದ್ಯತೆ ಸಿಗುತ್ತಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.
ಇಂತಹ ಭಾರೀ ಸಾಲದ ಪರಿಣಾಮವಾಗಿ ಸರ್ಕಾರಗಳು ಸಾಮಾಜಿಕ ಹಾಗೂ ಮೂಲಭೂತ ಯೋಜನೆಗಳಿಗೆ ನಿಜವಾದ ಅರ್ಥದ ಸಂಪತ್ತನ್ನು ಹಂಚಲಾಗದ ಸ್ಥಿತಿಗೆ ಹೋಗುತ್ತವೆ.
ಶಿಕ್ಷಣ, ಆರೋಗ್ಯ, ಕೃಷಿ, ನಿರುದ್ಯೋಗ ಶಮನ ಕಾರ್ಯಕ್ರಮಗಳಿಗೆ ನೀಡಬೇಕಾದ ಅನುದಾನ ಕಡಿಮೆಯಾಗುತ್ತಿದೆ. ಜೊತೆಗೆ ಹೂಡಿಕೆದಾರರಲ್ಲಿ ಭದ್ರತೆಯ ಕೊರತೆ ಕಾಣಿಸುತ್ತಿದ್ದು,
ಬಂಡವಾಳ ಮಾರುಕಟ್ಟೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮುಂದಿನ ಪೀಳಿಗೆ ಈ ಸಾಲ ತೀರಿಸಬೇಕಾದ ಹೊರೆ ಹೊರುತ್ತದೆ ಎಂಬುದು ಅತ್ಯಂತ ಗಂಭೀರವಾದ ಅಂಶವಾಗಿದೆ.
ಸಾಲಗಳು ಹೆಚ್ಚಿದಂತೆ ಭಾರಿ ಸಾಲವನ್ನು ನಿಭಾಯಿಸಲು ಸರ್ಕಾರಕ್ಕೆ ಆದಾಯದ ಹೊಸ ಮೂಲಗಳು ಬೇಕಾಗುತ್ತದೆ. ಏನೇ ಆದರೂ ಈ ಸಾಲದ ವೃದ್ಧಿಯು ಭವಿಷ್ಯದ ಪೀಳಿಗೆಗಳ ಮೇಲೆ ಹೊರೆ ಬೀರುವ ಸಾಧ್ಯತೆ ಉಂಟುಮಾಡುತ್ತದೆ.
ಸಾಲದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುವುದು ತಪ್ಪಲ್ಲದಾದರೂ, ಇದು ದೀರ್ಘಕಾಲಿಕ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗದಂತೆ ಸಮತೋಲನ ಸಾಧಿಸುವುದು ಸರ್ಕಾರದ ಹೊಣೆಯಾಗಿರುತ್ತದೆ.
ಸಾಲ ಮಾಡುವುದರಲ್ಲಿ ತಪ್ಪಿಲ್ಲ. ಯಾವುದೇ ದೇಶ ತನ್ನ ಅಭಿವೃದ್ಧಿಗೆ ಸಾಲವನ್ನು ಉಪಯೋಗಿಸುತ್ತದೆ.
ಆದರೆ, ಅವಿಭಜಿತವಾಗಿ ಹಾಗೂ ಉದ್ದೇಶವಿಲ್ಲದ ಸಾಲ ನಿರ್ವಹಣೆ ದೀರ್ಘಾವಧಿಯಲ್ಲಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು.
ಬಡ್ಡಿ ಪಾವತಿಗೆ ಮಾತ್ರವೇ ಬಹುಪಾಲು ಬಜೆಟ್ ಮೀಸಲಾದರೆ, ಸಾಮಾಜಿಕ ಅಭಿವೃದ್ಧಿಗೆ ಹಾನಿಯಾಗುತ್ತದೆ. ಸರ್ಕಾರಗಳು ನೀತಿಯ ಸ್ವಚ್ಚತೆ,
ಇದನ್ನು ಓದಿ : ಸ್ಮಾರ್ಟ್ ಮೀಟರ್ ಟೆಂಡರ್ ಅಕ್ರಮ : ಕೆಜೆ ಜಾರ್ಜ್ ವಿರುದ್ಧ ಪಿಸಿಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ
ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಮತ್ತು ಖರ್ಚಿನ ಉಳಿತಾಯದ ಬಗ್ಗೆ ಗಂಭೀರವಾಗಿರಬೇಕಾಗಿದೆ.