Pakistan : ಈ ಹಿಂದೆಯೇ ಪಾಕಿಸ್ಥಾನದಲ್ಲಿ(Pakistan) ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಸದ್ಯ ಈ ಮಧ್ಯೆ ಇದೀಗ ಪೆಟ್ರೋಲ್-ಡೀಸೆಲ್ ಬೆಲೆ ದಿಢೀರ್ ಗಗನಕ್ಕೇರಿದೆ! ಏರಿಕೆಯಾಗಿರುವ ಪೆಟ್ರೋಲ್- ಡೀಸೆಲ್ ಬೆಲೆ (Economic crisis in Pakistan) ಎಷ್ಟು ಗೊತ್ತಾ?
ಆರ್ಥಿಕ ಸಂಕಷ್ಟದಲ್ಲಿ ನಲುಗಿರುವ ಪಾಕಿಸ್ತಾನ ರಾಷ್ಟ್ರದಲ್ಲಿ ಇದೀಗ ಪೆಟ್ರೋಲ್-ಡೀಸೆಲ್(Petrol-Diesel) ಬೆಲೆ ಗಗನಕ್ಕೇರಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 272 ಪಾಕಿಸ್ತಾನಿ ರೂಪಾಯಿ ಆಗಿದೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 280 ಪಾಕಿಸ್ತಾನಿ ರೂ. ಆಗಿದೆ.
ಇತಿಹಾಸದಲ್ಲೇ ಭಾರಿ ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನದ ನಾಗರಿಕರಿಗೆ ಇಂಧನ ದರಗಳ ಏರಿಕೆಯು ಭಾರಿ ಹೊರೆಯಾಗಿದೆ.
ಪಾಕಿಸ್ತಾನ ಸಿಎಂ ಶೆಹಬಾಜ್ ಷರೀಫ್(Shehabaz Shareef) ನೇತೃತ್ವದ ಸರ್ಕಾರವು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪೂರಕ ಹಣಕಾಸು ಮಸೂದೆಯನ್ನು ಮಂಡಿಸಿದ ಕೆಲವೇ ನಿಮಿಷಗಳ ಬೆನ್ನಲ್ಲೇ ಈ ಇಂಧನ ಬೆಲೆ ಏರಿಕೆಯಾಗಿದೆ.

ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು 120 ಶತಕೋಟಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿರುವ ಪಾಕಿಸ್ತಾನ ಸರ್ಕಾರವು (Economic crisis in Pakistan) ಸರಕು ಹಾಗೂ ಸೇವಾ ತೆರಿಗೆಯನ್ನು ಶೇಕಡಾ 18% ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ.
ಸ್ಥಳೀಯ ಸುದ್ದಿ ಪತ್ರಿಕೆಯ ವರದಿಯ ಅನುಸಾರ ತಿಳಿಯುವುದಾದರೆ,
ಸದ್ಯ ಹೆಚ್ಚಾಗಿರುವ ಪೆಟ್ರೋಲ್ ಬೆಲೆ 22.20 ರೂ, ಆಗಿದೆ!
ಡೀಸೆಲ್ ಬೆಲೆಯಲ್ಲಿ 17 ರೂ ಹೆಚ್ಚಾಗಿದೆ.
ಪ್ರತಿ ಲೀಟರ್ ಹಾಲಿನ ದರ 210
ಒಂದು ಕೆ.ಜಿ ಕೋಳಿ ಮಾಂಸದ ಬೆಲೆ 700 ರೂ.

ಪ್ರತಿ ಲೀಟರ್ ಸೀಮೆ ಎಣ್ಣೆಗೆ 202.73 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನಿಗದಿಪಡಿಸಲಾಗಿರುವ ಹೊಸ ದರಗಳು ಗುರುವಾರ ಮಧ್ಯರಾತ್ರಿ 12 ಗಂಟೆ ಸಮಯ ಕಳೆಯುತ್ತಿದ್ದಂತೆ ಜಾರಿಯಾಗಲಿದೆ.
ಕೇವಲ ಇಂಧನ ಬೆಲೆಯಲ್ಲಿ ಮಾತ್ರ ಏರಿಕೆಯ ಹೊಡೆತವನ್ನು ಪಾಕಿಸ್ತಾನ ಕಾಣುತ್ತಿಲ್ಲ! ದಿನನಿತ್ಯ ವಸ್ತುಗಳು ಹಾಗೂ ಅಡುಗೆ ಎಣ್ಣೆ ಬೆಲೆಯಲ್ಲೂ ಕೂಡ ಭಾರಿ ಏರಿಕೆ ಕಂಡಿದೆ ಎನ್ನಲಾಗಿದೆ.
ಪ್ರತಿ ಲೀಟರ್ ಹಾಲಿನ ದರ ೨೧೦ ರೂ.ಗೆ ಹೆಚ್ಚಳವಾಗಿದ್ದು, ಮಾಂಸದ ಬೆಲೆಯಲ್ಲಿ ಸಹ ಏರಿಕೆಯಾಗಿದೆ. ಒಂದು ಕೆ.ಜಿ ಕೋಳಿ ಮಾಂಸದ ಬೆಲೆ ೭೦೦ ರೂ.ಗೆ ಏರಿಕೆಯಾಗಿದ್ದು,
ಅಗತ್ಯ ದಿನಸಿ ವಸ್ತುಗಳಾದ ಅಕ್ಕಿ, ಗೋಧಿ, ದವಸ-ಧಾನ್ಯ ಬೆಲೆಗಳು ಸಹ ಗಗನಕ್ಕೇರಿದೆ! ಇದೀಗ ಪಾಕಿಸ್ತಾನ ರಾಷ್ಟ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದು ರಾಷ್ಟ್ರ ಸುದ್ದಿಯಾಗಿ ವರದಿಯಾಗಿದೆ.