- ಸೆಲೆಬ್ರಿಟಿಗಳ ಬೆಟ್ಟಿಂಗ್ (ED raid on illegal betting apps) ಪ್ರಚಾರಕ್ಕೆ ಇಡಿ ಬ್ರೇಕ್
- ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳ ಕೋಟಿ ಕೋಟಿ ಮೌಲ್ಯದ ಆಸ್ತಿ ಜಪ್ತಿ
- ಕ್ರಿಕೆಟಿಗರು–ನಟರಿಗೆ ಇಡಿ ಸಮನ್ಸ್, ಅಕ್ರಮ ಹಣ ವರ್ಗಾವಣೆ ತನಿಖೆ ಮುಂದುವರಿಕೆ
New delhi: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ (Online) ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ (Betting App) ವಿರುದ್ಧ ದೇಶದಾದ್ಯಂತ (ED raid on illegal betting apps) ಕ್ರಮಗಳು ಹೆಚ್ಚಾಗುತ್ತಿದ್ದು, ಈ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ED) ಭಾರೀ ಕಾರ್ಯಾಚರಣೆ ನಡೆಸಿದೆ.
ನಿಷೇಧಿತ ಆಫ್‌ಶೋರ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ (Offshore betting platform) ಪ್ರಚಾರದಲ್ಲಿ ತೊಡಗಿದ್ದ ಆರೋಪದ ಮೇಲೆ, ಮಾಜಿ ಕ್ರಿಕೆಟಿಗರು
ಹಾಗೂ ಚಿತ್ರರಂಗದ ಖ್ಯಾತ ವ್ಯಕ್ತಿಗಳಿಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಈ ಬೆಳವಣಿಗೆ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ದಂಧೆಯ ವಿರುದ್ಧ ಸರ್ಕಾರದ ಕಠಿಣ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಮಾಜಿ ಭಾರತೀಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ (Yuvraj Singh) , ರಾಬಿನ್ ಉತ್ತಪ್ಪ ಹಾಗೂ ಬಾಲಿವುಡ್
ನಟ ಸೋನು ಸೂದ್ (Sonu Sood) ಸೇರಿದಂತೆ ಹಲವು ಪ್ರಸಿದ್ಧ ಸೆಲೆಬ್ರಿಟಿಗಳು ಈ ಪ್ರಕರಣದ ಕೇಂದ್ರಬಿಂದುವಾಗಿದ್ದಾರೆ.
ಇಡಿ ಅಧಿಕಾರಿಗಳ ಪ್ರಕಾರ, ಇವರು ನಿಷೇಧಿತ ‘1xBet’ ಸೇರಿದಂತೆ ಕೆಲವು ಆಫ್‌ಶೋರ್ ಬೆಟ್ಟಿಂಗ್ (ED raid on illegal betting apps)
ಆ್ಯಪ್‌ಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಜಾಹೀರಾತುಗಳ ಮೂಲಕ ಪ್ರಚಾರ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಬಿನ್ ಉತ್ತಪ್ಪ (Robin Uthappa) ಅವರನ್ನು ಡಿಸೆಂಬರ್ 22ರಂದು, ಯುವರಾಜ್ ಸಿಂಗ್ ಅವರನ್ನು
ಡಿಸೆಂಬರ್ 23ರಂದು ಹಾಗೂ ಸೋನು ಸೂದ್ ಅವರನ್ನು ಡಿಸೆಂಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಈ ಸಮನ್ಸ್‌ಗಳು ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ.
ತನಿಖೆಯ ಭಾಗವಾಗಿ ಇಡಿ ಈಗಾಗಲೇ ಹಲವಾರು ಸೆಲೆಬ್ರಿಟಿಗಳಿಗೆ ಸೇರಿದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಲಭ್ಯ ಮಾಹಿತಿಯಂತೆ, ಯುವರಾಜ್ ಸಿಂಗ್ ಅವರ ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ, ರಾಬಿನ್ ಉತ್ತಪ್ಪ ಅವರ
8.26 ಲಕ್ಷ ರೂಪಾಯಿ, ನಟ ಸೋನು ಸೂದ್ ಅವರ 1 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಯಾಗಿದೆ.
ಇದಲ್ಲದೆ, ನಟಿ ಮಿಮಿ ಚಕ್ರವರ್ತಿ (59 ಲಕ್ಷ), ನೇಹಾ ಶರ್ಮಾ (1.26 ಕೋಟಿ), ಬಂಗಾಳಿ ನಟ ಅಂಕುಶ್ ಹಜ್ರಾ (47 ಲಕ್ಷ) ಹಾಗೂ
ಮಾಡೆಲ್ ಉರ್ವಶಿ ರೌಟೇಲಾ (Model Urvashi Rautela) (2.02 ಕೋಟಿ ರೂಪಾಯಿ) ಸೇರಿದಂತೆ ಹಲವರ ಆಸ್ತಿಗಳನ್ನೂ ಇಡಿ ವಶಪಡಿಸಿಕೊಂಡಿದೆ.
ಈ ಹಣಗಳು ಬೆಟ್ಟಿಂಗ್ ದಂಧೆಯಿಂದ ಬಂದ ಸಂಭಾವನೆಗಳಾಗಿವೆ ಎಂಬ ಶಂಕೆಯ ಮೇರೆಗೆ ತನಿಖೆ ಮುಂದುವರಿದಿದೆ.
ಇದಕ್ಕೂ ಮುನ್ನ ಇದೇ ರೀತಿಯ ಪ್ರಕರಣಗಳಲ್ಲಿ ಕ್ರಿಕೆಟಿಗರಾದ ಸುರೇಶ್ ರೈನಾ (Suresh Raina) ಮತ್ತು ಶಿಖರ್ ಧವನ್ (Shikhar Dhawan) ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೂ ಇಡಿ ಕ್ರಮ ಕೈಗೊಂಡಿತ್ತು.
ಪ್ರಸ್ತುತ ತನಿಖೆ ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದ್ದು, ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ತೊಡಗಿದ್ದ ಇತರೆ ನಟ-ನಟಿಯರು ಹಾಗೂ ಕ್ರೀಡಾಪಟುಗಳಿಗೂ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ.
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಯುವಜನತೆಗೆ ಹಾನಿಕಾರಕವಾಗಿದ್ದು, ಹಣಕಾಸು ಅಪರಾಧಗಳಿಗೆ ದಾರಿ ಮಾಡಿಕೊಡುತ್ತದೆ ಎಂಬ ಕಾರಣದಿಂದ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಈ ಜಾಲವನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತುಹಾಕಲು ಮುಂದಾಗಿವೆ.
ಈ ಪ್ರಕರಣವು ಸೆಲೆಬ್ರಿಟಿಗಳ ಜವಾಬ್ದಾರಿಯುತ ವರ್ತನೆ ಕುರಿತು ಸಹ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇದನ್ನು ಓದಿ : https://vijayatimes.com/new-rules-for-government-employees/