ಬೆಂಗಳೂರು : ಚಾಮರಾಜಪೇಟೆಯ(Chamrajpet) ಕಾಂಗ್ರೆಸ್ ಶಾಸಕ(Congress MLA) ಜಮೀರ್ ಅಹಮ್ಮದ್ ಖಾನ್(Zameer Ahmed Khan) ಅವರು ತಮ್ಮ ಆದಾಯಕ್ಕಿಂತ ಶೇಕಡಾ 2031 ರಷ್ಟು ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ED) ಇಲಾಖೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ(NCB) ವರದಿ ನೀಡಿದೆ.

ನಿನ್ನೆ ಶಾಸಕ ಜಮೀರ್ ಅಹಮ್ಮದ್ ಖಾನ್‌ನಿವಾಸ ಮತ್ತು ಅವರಿಗೆ ಸೇರಿರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಈ ವೇಳೆ ಸಿಕ್ಕಿರುವ ದಾಖಲೆಗಳ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಶಾಸಕ ಜಮೀರ್ ಅಹಮ್ಮದ್ ಖಾನ್‌ಅವರಿಗೆ ಕಳೆದ ೧೭ ವರ್ಷಗಳಲ್ಲಿ 4.30 ಕೋಟಿ ರೂ. ಮಾತ್ರ ಆದಾಯ ಬಂದಿದೆ. ಆದರೆ ಅವರು ಅಕ್ರಮವಾಗಿ 87 ಕೋಟಿ 44 ಲಕ್ಷ ರೂ. ಸಂಪಾದಿಸಿದ್ದಾರೆ ಎನ್ನಲಾಗಿದೆ.
ಅವರ ಆದಾಯಕ್ಕಿಂತ ಸುಮಾರು 2031 ರಷ್ಟು ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ಇನ್ನು ಕೌಟುಂಬಿಕ ನಿರ್ವಹಣೆ, ಮಗಳ ಮದುವೆ, ಮಗನ ಸಿನಿಮಾ ನಿರ್ಮಾಣಕ್ಕೆ ೧೭.೮೦ ಕೋಟಿ ರೂ. ಖರ್ಚು ಮಾಡಿದ್ದೇನೆ ಎಂದು ಈ ಹಿಂದೆ ಐಟಿ ಇಲಾಖೆಗೆ ಮಾಹಿತಿ ನೀಡಿದ್ದರು. ಇನ್ನು ಶಾಸಕ ಜಮೀರ್ ಅವರಿಗೆ ಸೇರಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಜಿ ಕೆ ಅಸೋಸಿಯೇಟ್ಸ್ ಕಚೇರಿ, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್, ರೈಲ್ವೆ ಕಂಟೋನ್ಮೆಂಟ್ ಬಳಿಯಿರುವ ಭವ್ಯ ಬಂಗಲೆ ಮೇಲೆ ಎಸಿಬಿ ದಾಳಿ ನಡೆಸಿದೆ.

ಇನ್ನು ಶಾಸಕ ಜಮೀರ್ ಅಹಮ್ಮದ್ ದುಬೈನಲ್ಲಿ(Dubai) ಅಕ್ರಮವಾಗಿ ಆಸ್ತಿ ಹೊಂದಿದ್ದಾರೆ ಮತ್ತು ಐಎಂಎ ಹಗರಣದ ಆರೋಪಿ ಮನ್ಸೂರ್ ಖಾನ್ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.