vijaya times advertisements
Visit Channel

ವಿಜಯ ಟೈಮ್ಸ್ ಇಂಪ್ಯಾಕ್ಟ್ ಅಪರೇಷನ್ ಖೋಟಾ ನೋಟು ! ಬಯಲಾಯ್ತು ಕೋಟೆ ನಾಡಿನ ರಾಜಕಾರಣಿಯ ದಂಧೆಯ ಪ್ರಮುಖ ಆರೋಪಿ ಚಂದ್ರಶೇಖರನ ಬಂಧನ

vijaya times impact

ಕಳೆದ ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಶಿಬರೂರು ನೇತೃತ್ವದ ವಿಜಯ ಟೈಮ್ಸ್‌ ಕವರ್‌ ಸ್ಟೋರಿ ತಂಡ ಚಿತ್ರದುರ್ಗದಲ್ಲಿರು ಖೋಟಾ ನೋಟು ಅಡ್ಡೆಯಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಿತ್ತು. ಈ ಕಾರ್ಯಚರಣೆಯು ರಾಜ್ಯಾದ್ಯಂತ ಸಾಕಷ್ಟು ಸಂಚಲನವನ್ನು ಮೂಡಿಸಿತ್ತು. ಈ ದಂಧೆಯನ್ನು ವಿಜಯ ಟೈಮ್ಸ್‌ ತಂಡ ಬಯಲು ಮಾಡಿದ ಬೆನ್ನಲ್ಲೇ ಚಿತ್ರದುರ್ಗ ಪೊಲೀಸರು ಖೋಟಾ ನೋಟು ದಂಧೆಯ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗ ನಗರಸಭೆಯ  ಸದಸ್ಯನಾಗಿರುವ ಚಂದ್ರಶೇಖರ್‌ ಅಲಿಯಾಸ್‌ ಖೋಟಾ ನೋಟು ಚಂದ್ರು  ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯ ಟೈಮ್ಸ್  ಕವರ್‌ ಸ್ಟೋರಿ ಕಾರ್ಯಚರಣೆ :   ಬ್ಲ್ಯಾಕ್ ಮನಿ ವೈಟ್‌ ಮಾಡಿ ಕೊಡ್ತೀವಿ ಅಂತ ಹೇಳೋದು ಇವರ ಮೈನ್‌ ಟ್ರಿಕ್‌. ಇದೇ ಕತೆ ಹೇಳಿ ಅನೇಕರಿಗೆ ಮೋಸ ಮಾಡಿ ಅವರಿಂದ ಕೋಟ್ಯಾಂತರ ಲೂಟಿ ಮಾಡಿದೆ ಈ ಗ್ಯಾಂಗ್. ಈ ಗ್ಯಾಂಗ್‌ನ ಮೋಸಕ್ಕೆ ಬಲಿಯಾದ ಅಮಾಯಕ ನಾಗರಾಜ್ ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡವನ್ನು ಭೇಟಿ ಮಾಡಿದ್ರು. ಅವರು ಈ ಗ್ಯಾಂಗ್‌ ಮಾಡೋ ಮೋಸದ ಕತೆಯನ್ನು ವಿವರಿಸಿದ್ರು.

ಮನೆಯಲ್ಲಿ ಈ ಗ್ಯಾಂಗ್‌ ನಡೆಸುತ್ತಿದ್ದ ಕಳ್ಳ ದಂಧೆಗೆ ಪೂರಕವಾದ ದಾಖಲೆಗಳು ಸಿಕ್ಕಿದವು. ಇಷ್ಟಕ್ಕೆ ನಿಲ್ಲದ ಚಿತ್ರದುರ್ಗ ಪೊಲೀಸರು ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದರು, ಗ್ಯಾಂಗ್‌ನ ಪ್ರಮುಖ ಆರೋಪಿ ಮೂರ್ತಿ ಹಾಗೂ ನವೀನನ್ನು ಬಂಧಿಸಿ ಜೈಲಿಗೆ ಅಟ್ಟಿದರು.ಇನ್ನು ಹಲವರಿಗೆ ಬಲೆ ಬೀಸಿದ್ದರು.

ಆದ್ರೆ ವಿಜಯ ಟೈಮ್ಸ್‌ನ ಕವರ್‌ ಸ್ಟೋರಿ ತಂಡದ ಆಗಮನದ ಮಾಹಿತಿ ಗೊತ್ತಾದ ಖದೀಮರು ಅಲ್ಲಿಂದ ಕಾಲ್ಕಿತ್ತರು. ಆದ್ರೆ ಇಷ್ಟಕ್ಕೆ ಆ ಗ್ಯಾಂಗನ್ನು ಬಿಡದ ಪೊಲೀಸರ ತಂಡ ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಿದ್ರು. ನ್ಯಾಯಾಲಯದ ಆದೇಶ ಪಡೆದು ಮೋಸ ಮಾಡಲು ಬಳಸುತ್ತಿದ್ದ ಮನೆಗೆ ನುಗ್ಗಿಯೇ ಬಿಟ್ರು.ಬೀಗ ಒಡೆದು ಚಂದ್ರು ಗ್ಯಾಂಗ್‌ನ ಹೆಡೆ ಮುರಿ ಕಟ್ಟಲು ಸಿದ್ಧರಾಗಿದ್ದರು. ವಿಜಯ ಟೈಮ್ಸ್‌ ದಾಳಿ ನಡೆಸಿದ 2 ವಾರದ ಒಳಗೆ ಚಿತ್ರದುರ್ಗ ಪೊಲೀಸರು ಪ್ರಮುಖ ಆರೋಪಿಯಾದ ಚಂದ್ರಶೇಖರ್‌ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest News

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.

ದೇಶ-ವಿದೇಶ

ಪಾಕಿಸ್ತಾನಕ್ಕೆ ಎಫ್-16 : ಜೈಶಂಕರ್ ಹೇಳಿಕೆಗೆ ಅಮೇರಿಕಾ  ಪ್ರತಿಕ್ರಿಯೆ

ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್  ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು  ತೀವ್ರವಾಗಿ ಟೀಕಿಸಿದ್ದರು.

ಲೈಫ್ ಸ್ಟೈಲ್

ಇಲ್ಲಿವೆ ನೋಡಿ ವಿಚಿತ್ರ ಸಾಕುಪ್ರಾಣಿಗಳು: ಇವುಗಳ ಬಗ್ಗೆ ಕೇಳಿದರೆ ಅಚ್ಚರಿಯಾಗುವುದು ಖಂಡಿತ!

ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ

Priyank
ರಾಜಕೀಯ

‘ಲಂಚ ಕೊಡಬೇಕಾಗಿಲ್ಲ’ ಅಭಿಯಾನವನ್ನು ವಿಧಾನಸೌಧದಲ್ಲೂ ಮಾಡಿ – ಪ್ರಿಯಾಂಕ್ ಖರ್ಗೆ ಆಗ್ರಹ

ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ತಮ್ಮ ಮೇಲಿನ ಹಗರಣ ಆರೋಪಗಳನ್ನು ನ್ಯಾಯಾಂಗ (No bribe campaign) ತನಿಖೆಗೆ ವಹಿಸುತ್ತಿದ್ದರು.