download app

FOLLOW US ON >

Tuesday, August 9, 2022
Breaking News
ಸಿದ್ದರಾಮಯ್ಯ-ಖರ್ಗೆಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ : ನಟ ಚೇತನ್ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ  : ಬಿಜೆಪಿನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್
English English Kannada Kannada

ಈ ಹಿಂದೆ ಹೇಳಿದಂತೆಯೇ ಮೇ 16 ರಿಂದಲೇ ಶಾಲೆಗಳು ಪ್ರಾರಂಭವಾಗಲಿದೆ : ಬಿ.ಸಿ ನಾಗೇಶ್!

ಶಿಕ್ಷಣ ಸಚಿವರಾದ(Education Sister) ಬಿ.ಸಿ ನಾಗೇಶ್(BC Nagesh) ಅವರು ಮೇ.16 ರಿಂದ ಶಾಲೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದರು.
schools

ರಾಜ್ಯದಲ್ಲಿ ಮಕ್ಕಳಿಗೆ ಶಾಲೆಗಳು(Schools) ಯಾವಾಗ ಪ್ರಾರಂಭವಾಗಲಿದೆ ಎಂಬ ಪ್ರಶ್ನೆಗಳು ಚೆರ್ಚೆಯಾಗುತ್ತಲೇ ಇತ್ತು. ಈ ಹಿಂದೆಯೇ ಶಿಕ್ಷಣ ಸಚಿವರಾದ(Education Sister) ಬಿ.ಸಿ ನಾಗೇಶ್(BC Nagesh) ಅವರು ಮೇ.16 ರಿಂದ ಶಾಲೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದರು.

karnataka

ಆದ್ರೆ, ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಬೇಸಿಗೆಯ ತಾಪಮಾನ(Temperature) ತೀವ್ರ ಏರಿಕೆಯಾಗಿರುವ ಪರಿಣಾಮ ಶಾಲಾ-ಕಾಲೇಜುಗಳ(School-Collages) ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುತ್ತಾರೋ? ಅಥವಾ ತರಗತಿಗಳನ್ನು ಆಫ್‍ಲೈನ್ ಮಾಡುತ್ತಾರೋ? ಎಂಬ ಪ್ರಶ್ನೆಗಳು ಪೋಷಕರಲ್ಲಿ ಕಾಡುತ್ತಿತ್ತು. ಈ ಪ್ರಶ್ನೆ ಯಾಕೆ ಕಾಡಿದೆ ಎಂದು ಹೇಳುವುದಾದರೇ, ಒಡಿಶಾ ಸೇರಿದಂತೆ ಕೆಲ ರಾಜ್ಯಗಳು ಏರುತ್ತಿರುವ ಬಿಸಿಲ ತಾಪಮಾನದಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ತರಗತಿಗಳನ್ನು ನಡೆಸುವಂತೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿತು.

ಇದೇ ಮಾರ್ಗದಲ್ಲಿ ಕರ್ನಾಟಕದ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲೂ ಬದಲಾವಣೆ ಕಂಡುಬರಬಹುದಾ? ಎಂಬ ಗೊಂದಲಗಳು ಹರಿದಾಡಿದವು. ಈ ಗೊಂದಲಗಳಿಗೆ ಸಚಿವ ಬಿ.ಸಿ ನಾಗೇಶ್ ಅವರು ಸ್ಪಷ್ಟನೆ ಕೊಟ್ಟಿದ್ದು, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ! ಅದರಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ.

bc nagesh

ಮಾಧ್ಯಮದವರೊಡನೆ ಮಾತನಾಡಿದ ಅವರು, 2022-23 ಸಾಲಿನ ತರಗತಿಗಳು ಮೇ 16 ರಂದು ನಿಗದಿತ ವೇಳಾಪಟ್ಟಿಯಂತೆ ಪ್ರಾರಂಭವಾಗಲಿವೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಈಗಾಗಲೇ ಕೊರೊನಾ ವೈರಸ್ ಕಾರಣದಿಂದ ಎರಡು ವರ್ಷಗಳಿಂದ ಕಲಿಕಾ ಮಟ್ಟದಲ್ಲಿ ಭಾರಿ ವ್ಯತ್ಯಾಸವಾಗಿದೆ. ಹೀಗಾಗಿ ಆ ನಷ್ಟವನ್ನು ಸರಿದೂಗಿಸಲು ಇಲಾಖೆ ವಿದ್ಯಾರ್ಥಿಗಳಿಗೆ ನೀಡುವ 30 ದಿನಗಳ ಬೇಸಿಗೆ ಕಾಲ ರಜೆಯನ್ನು 15 ದಿನಗಳಿಗೆ ಕಡಿತಗೊಳಿಸಿದೆ ಎಂದು ತಿಳಿಸಿದರು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article