- ದ್ವಿಭಾಷಾ ನೀತಿಗೆ ಶಿಫಾರಸು – ಹಿಂದಿಗೆ ಕೊಕ್, ಕನ್ನಡ-ಇಂಗ್ಲಿಷ್‌ಗೆ ಒತ್ತು
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2,197 ಪುಟಗಳ ವರದಿ ಸಲ್ಲಿಕೆ
- ಕನ್ನಡ ಅಥವಾ ಮಾತೃಭಾಷೆಯನ್ನೇ ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವಂತೆ ಶಿಫಾರಸು
Bengaluru: ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಕುರಿತ ಅಂತಿಮ ವರದಿಯನ್ನು (Education Policy Report by karnataka) ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಲ್ಲಿಸಲಾಗಿದೆ.
ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ (Prof. Sukhdev Thorat) , ಉಪಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ (D.K.Shivakumar) , ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr. M.C. Sudhakar), ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಒಟ್ಟು 2,197 ಪುಟಗಳ ಈ ವರದಿ ಮೂರು ಪ್ರಮುಖ ಭಾಗಗಳನ್ನು ಒಳಗೊಂಡಿದೆ — ಶಾಲಾ ಶಿಕ್ಷಣ (580 ಪುಟ), ಉನ್ನತ ಶಿಕ್ಷಣ (455 ಪುಟ) ಹಾಗೂ ವೃತ್ತಿಪರ ಶಿಕ್ಷಣ (ಸುಮಾರು 450 ಪುಟ).
ಜೊತೆಗೆ 617 ಕೋಷ್ಟಕಗಳು, 47 ಚಿತ್ರಗಳು, 16 ಗ್ರಾಫ್‌ಗಳು ಮತ್ತು 619 ಪುಟಗಳ ಅನುಬಂಧಗಳಿವೆ.
ಇನ್ನು ವರದಿಯಲ್ಲಿ 2+8+4 ಶೈಕ್ಷಣಿಕ ರಚನೆ ಶಿಫಾರಸು ಮಾಡಲಾಗಿದ್ದು, 2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣವನ್ನು ಒಳಗೊಂಡಿದೆ.
ಎಲ್ಲ ಬೋರ್ಡ್‌ಗಳ (Board) ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು
ಮತ್ತು ದ್ವಿಭಾಷಾ ನೀತಿಯನ್ನು (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಜಾರಿಗೆ ತರಲು ಸಲಹೆ ನೀಡಲಾಗಿದೆ.
ಇದರಿಂದ ಹಾಲಿ ಜಾರಿಯಲ್ಲಿರುವ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಬೋಧನೆ (Education Policy Report by karnataka) ಕೊನೆಯಾಗಬಹುದು.
ಶಾಲಾ ಶಿಕ್ಷಣಕ್ಕೆ ಪ್ರಮುಖ ಶಿಫಾರಸುಗಳು
ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರ ವಿದ್ಯಾಲಯ ಮಟ್ಟಕ್ಕೆ ಏರಿಕೆ
RTE ವ್ಯಾಪ್ತಿಯನ್ನು ಹಂತ ಹಂತವಾಗಿ 4ರಿಂದ 18 ವಯಸ್ಸಿನವರೆಗೆ ವಿಸ್ತರಣೆ
NCERT ಪಾಠಪುಸ್ತಕಗಳ ಅವಲಂಬನೆ ಕಡಿತ, ಸ್ಥಳೀಯೀಕೃತ ವಿಷಯಗಳು
ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿ ಸ್ಥಗಿತ
ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆ
ಶಿಕ್ಷಣಕ್ಕೆ ರಾಜ್ಯ ವೆಚ್ಚದ ಪಾಲನ್ನು 30%ಕ್ಕೆ ಏರಿಕೆ
ಉನ್ನತ ಶಿಕ್ಷಣ ಶಿಫಾರಸುಗಳು:
- GSDPಯ 4% ಅನ್ನು ಶಿಕ್ಷಣಕ್ಕೆ ಮೀಸಲು, 2034-35ರ ವೇಳೆಗೆ ಉನ್ನತ ಶಿಕ್ಷಣಕ್ಕೆ 1%
- 3+2 ಪದವಿ-ಸ್ನಾತಕೋತ್ತರ ಮಾದರಿ, ವೃತ್ತಿಪರ ಕೋರ್ಸ್‌ಗಳಿಗೆ 4+2 ಮಾದರಿ
- ದ್ವಿಭಾಷಾ ಬೋಧನೆ ಹಾಗೂ ಪಠ್ಯಪುಸ್ತಕಗಳ ದ್ವಿಭಾಷಾ ಆವೃತ್ತಿ
- SC/ST/OBC ಮೀಸಲಾತಿ ನಿಯಮಗಳನ್ನು ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಜಾರಿಗೆ ತರುವುದು
- ಕಡಿಮೆ ಆದಾಯದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ನೆರವು
- ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಬಾಲ್ಯವಿವಾಹ ತಡೆಗೆ ಪ್ರೋತ್ಸಾಹಕ ಯೋಜನೆಗಳು
ವೃತ್ತಿಪರ ಶಿಕ್ಷಣ ಶಿಫಾರಸುಗಳು:
ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್‌ಗಳ ವಿಸ್ತರಣೆ
- ಗ್ರಾಮೀಣ ಮತ್ತು ಕೃಷಿ ಕ್ಷೇತ್ರದಲ್ಲಿ ಅಲ್ಪಾವಧಿ ಡಿಪ್ಲೊಮಾ (Diploma) /ಪ್ರಮಾಣಪತ್ರ ಕೋರ್ಸ್‌ಗಳ ಪ್ರೋತ್ಸಾಹ
- ಇಂಟರ್ನ್‌ಶಿಪ್ ವ್ಯವಸ್ಥೆ, ಉದ್ಯಮ-ಶೈಕ್ಷಣಿಕ ಸಹಯೋಗ
- AI, ML, ಕ್ವಾಂಟಮ್ ಕಂಪ್ಯೂಟಿಂಗ್ (Quantum Computing) , ನ್ಯಾನೋ ಸೈನ್ಸ್ (Nanoscience) ಮುಂತಾದ ತಂತ್ರಜ್ಞಾನಗಳ ಕುರಿತು ಹೆಚ್ಚಿನ ಮಾಹಿತಿ
- ಕೃಷಿ ಶಿಕ್ಷಣಕ್ಕೆ ಕನ್ನಡ ಪಠ್ಯಪುಸ್ತಕಗಳ ಅಭಿವೃದ್ಧಿ
- ಈ ಶಿಫಾರಸುಗಳು ಜಾರಿಗೆ ಬಂದರೆ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಹಿಂದಿ ಬೋಧನೆ ಕಡ್ಡಾಯವಲ್ಲದ ದ್ವಿಭಾಷಾ ಮಾದರಿ, ಪ್ರಾದೇಶಿಕ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಗ್ರಾಮೀಣ-ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಬಲವಾದ ಬೆಂಬಲ ನೀಡುವುದು ಈ ನೀತಿಯ ಪ್ರಮುಖ ಅಂಶಗಳಾಗಿವೆ.
ಇದನ್ನು ಓದಿ: ಸ್ಮಾರ್ಟ್ ಮೀಟರ್ ಟೆಂಡರ್ ಅಕ್ರಮ : ಕೆಜೆ ಜಾರ್ಜ್ ವಿರುದ್ಧ ಪಿಸಿಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ