
ಈ ಜಗತ್ತೇ ಒಂದು ವಿಸ್ಮಯಗಳ ಆಗರ. ಪ್ರತೀ ದಿನ ಪ್ರಪಂಚದಲ್ಲಿ ಏನೇನೋ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವೆ. ಅದೇ ರೀತಿ, ಕೆಲವು ವಿಚಿತ್ರ ವ್ಯಕ್ತಿಗಳು ಚಿತ್ರ ವಿಚಿತ್ರವಾಗಿ ಆಡುತ್ತಾ, ಇಡೀ ಜಗತ್ತನ್ನೇ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಾರೆ.
ಅದರಲ್ಲೂ ಕೆಲವೊಮ್ಮೆ ಇಂತಹ ವಿಚಿತ್ರ ವ್ಯಕ್ತಿಗಳೂ ಕೂಡಾ ಮಹಾನ್ ದಾಖಲೆಗೆ (Record) ಪಾತ್ರರಾಗಿಬಿಡುತ್ತಾರೆ. ಇಂತಹ ವಿಚಿತ್ರ ವ್ಯಕ್ತಿಗಳ ಸಾಲಿಗೆ ಸೇರುವ ವ್ಯಕ್ತಿಯೊಬ್ಬ ಅಮೆರಿಕದ (America) ವಾಷಿಂಗ್ಟನ್‍ನಲ್ಲಿದ್ದಾನೆ,
ಈತನ ಹೆಸರು ಎಡ್ವರ್ಡ್ ಸ್ಮಿತ್(Edward Smith). ಈ ಮಹಾಪುರುಷನಿಗೆ ರಾಸಲೀಲೆಯಾಡಲು ಮಹಿಳೆಯರ ಅವಶ್ಯಕತೆಯಿಲ್ಲ, ಏಕೆಂದರೆ ಕಾರುಗಳೇ (Car) ಈತನ ಗೆಳತಿಯರು! ಹೌದು, ಕಾರೇ ಪಲ್ಲಂಗ, ಕಾರೇ ಈತನ ರಾಸಲೀಲೆಗೆ ಸಂಗಾತಿ.
https://vijayatimes.com/gautham-adani-richest-man/
ಪ್ರಸ್ತುತ ಎಡ್ವರ್ಡ್ ಸ್ಮಿತ್, ವನಿಲಾ (Vanilla) ಎಂಬ ಗೆಳತಿಯೊಂದಿಗೆ ಮಧುಚಂದ್ರ ನಡೆಸುತ್ತಿದ್ದಾನೆ. ಅಷ್ಟಕ್ಕೂ ವನಿಲಾ ಎಂದರೆ ಆತನ ‘ಫೋಕ್ಸ್ ವ್ಯಾಗನ್ ಬೀಟಲ್’ ಕಾರಿನ ಹೆಸರು.

ಇನ್ನೊಂದು ವಿಚಿತ್ರ ಎಂದರೆ, ಈ ವ್ಯಕ್ತಿ ತನ್ನ ಕಾರ್ “ಸಂಸಾರ”ದ ಗುಟ್ಟುರಟ್ಟು ಮಾಡಿದ್ದು ತೀರಾ ಇತ್ತೀಚೆಗೆ. ಈತ ಮೆಕಾಫಿಲಿಯಾ ಎಂಬ ಡಾಕ್ಯುಮೆಂಟರಿಗೆ ನೀಡಿದ ಸಂದರ್ಶನದಲ್ಲಿ ಕಾರುಗಳೊಂದಿಗಿನ ತನ್ನ ರಾಸಲೀಲೆಯನ್ನು ಬಿಚ್ಚಿಟ್ಟಾಗ ಜಗತ್ತೇ ಬೆಚ್ಚಿಬಿದ್ದಿದೆ.
`ಮೆಕಾಫಿಲಿಯಾ’ (Megaphilia) ಎಂದರೆ ಯಂತ್ರದೊಂದಿಗೆ ಲೈಂಗಿಕ ಆಸಕ್ತಿ ಹೊಂದಿರುವುದು. ಎಂದರೆ, ಬೈಸಿಕಲ್, ಮೋಟರ್ ವಾಹನ, ಹೆಲಿಕಾಪ್ಟರ್ ಮತ್ತು ವಿಮಾನಗಳೊಂದಿಗೆ ಲೈಂಗಿಕ ಸಂಬಂಧ ಹೊಂದುವುದು!
ಈ ಎಡ್ವರ್ಡ್ ಸ್ಮಿತ್, ತನ್ನ ಕಾರುಗಳ ಬಗ್ಗೆ ಇರುವ ಪ್ರೀತಿಯನ್ನು ನಾಚಿಕೊಳ್ಳುತ್ತಲೇ ಈ ರೀತಿ ಹೇಳಿಕೊಂಡಿದ್ದಾನೆ. ‘ನಾನು ಕಾರುಗಳನ್ನು ಪ್ರೀತಿಸುತ್ತೇನೆ. ನನಗದು ರೊಮಾಂಟಿಕ್ ಅನುಭವ ನೀಡುತ್ತದೆ. ಕಾರುಗಳ ಬಗ್ಗೆ ಕವಿತೆ ಬರೆಯುತ್ತೇನೆ.
ಕಾರುಗಳಿಗಾಗಿಯೇ ಹಾಡುತ್ತೇನೆ. ಅದರೊಂದಿಗೆ ಮಾತನಾಡುತ್ತೇನೆ. ಕಾರೇ ನನ್ನ ಸರ್ವಸ್ವ. ನನಗೆ ಬೇರೆ ಮಹಿಳೆಯರು ಬೇಕಿಲ್ಲ. ನನಗಿದು ರೋಗವಲ್ಲ. ನಾನು ಯಾರಿಗೂ ನೋವುಂಟು ಮಾಡಲು ಇಷ್ಟಪಡುವುದಿಲ್ಲ.
https://vijayatimes.com/gautham-adani-richest-man/
ಕಾರು ಕೇವಲ ನನ್ನ ಪ್ರೀತಿಯ ಆಯ್ಕೆ’ ಎಂದು ಎಡ್ವರ್ಡ್ ಸ್ಮಿತ್ ಹೇಳಿದ್ದಾನೆ. ನಂಬಿಕೆ ದ್ರೋಹ ಮಾಡುವ ಮನುಷ್ಯರ ನಡುವೆ, ಈತನ ಆಯ್ಕೆಯೇ ಒಮ್ಮೊಮ್ಮೆ ಸರಿ ಎನಿಸುತ್ತದೆ.
ಏನೇ ಇರಲಿ, ಇವನ ರೊಮ್ಯಾಂಟಿಕ್ ಮಾತುಗಳನ್ನು ಕೇಳಿ ಕಾರುಗಳು ನಾಚಿ ನೀರಾಗುವುದೊಂದೇ ಬಾಕಿ ಅಲ್ಲವೇ.?
ಪವಿತ್ರ