London : “ನೀನು ನನ್ನ ರಾಜನಲ್ಲ” ಎಂದು ಘೋಷಣೆ ಕೂಗಿ ಬ್ರಿಟನ್ ದೊರೆ(Egg throws to King Charles) ಕಿಂಗ್ ಚಾರ್ಲ್ಸ್(King Charles) ಮತ್ತು ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಮೇಲೆ ಮೊಟ್ಟೆಗಳನ್ನು ಎಸೆದಿದ್ದಕ್ಕಾಗಿ 23 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕ ಸುವ್ಯವಸ್ಥೆಗೆ(Egg throws to King Charles) ಧಕ್ಕೆ ತಂದ ಆರೋಪದಡಿ ಅವನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಯಾರ್ಕ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, “ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಲಾಗಿದೆ. ಹೀಗಾಗಿ ನೀನು ನನ್ನ ರಾಜನಲ್ಲ” ಎಂದು ಕೂಗುತ್ತಾ ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಮತ್ತು ಕ್ವೀನ್ ಕಾನ್ಸಾರ್ಟ್ ಕ್ಯಾಮಿಲ್ಲಾ ಅವರನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಸ್ವಾಗತಿಸುತ್ತಿದ್ದಾಗ ಮೊಟ್ಟೆಗಳನ್ನು ಎಸೆದಿದ್ದಾನೆ.
ಇದನ್ನೂ ಓದಿ : https://vijayatimes.com/chetan-over-hindu-controversy/
ಇದೇ ವೇಳೆ ಗುಂಪಿನಲ್ಲಿದ್ದ ಕೆಲ ಜನರು ದೇವರನ್ನು ಪ್ರಾರ್ಥಿಸಿದ್ದಾರೆ, ಪರಿಸ್ಥಿತಿಯನ್ನು ನೆನದು ಕೆಲವರು ಗಾಬರಿಗೊಂಡರು. ಆದರೆ ಇತರರು ಪ್ರತಿಭಟನಾಕಾರನ ಮೇಲೆ ಆಕ್ರೋಶ ಹೊರಹಾಕಿದರು. ಇನ್ನು ವಿಶ್ವವಿದ್ಯಾನಿಲಯವು ಈ ರೀತಿಯ ಘಟನೆಯನ್ನು ಖಂಡಿಸಿದೆ.
ವಿದ್ಯಾರ್ಥಿಯ ದುರ್ವರ್ತನೆಯ ಕಾರ್ಯವಿಧಾನಗಳಿಗೆ ಅನುಗುಣವಾಗಿ ಘಟನೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ. ಈ ಮಧ್ಯೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಉಳಿದಿದ್ದಾನೆ.
ಇನ್ನು ಕಿಂಗ್ ಚಾರ್ಲ್ಸ್ III ಔಪಚಾರಿಕವಾಗಿ ತನ್ನ ತಾಯಿ, ರಾಣಿ ಎಲಿಜಬೆತ್ II ರ ನಿಧನದ ನಂತರ ಸೆಪ್ಟೆಂಬರ್ 10 ರಂದು ಲಂಡನ್ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ಮೊದಲ ದೂರದರ್ಶನದ ಪ್ರವೇಶ ಕೌನ್ಸಿಲ್ನಲ್ಲಿ ಬ್ರಿಟನ್ನ ರಾಜ ಎಂದು ಘೋಷಿಸಲಾಯಿತು.
ತಪ್ಪದೇ ನೋಡಿ : https://youtu.be/-I-tDriCCcg ಕಾಪಾಡಿ ಕಂದಮ್ಮಗಳನ್ನ! Killer commission!
ಬ್ರಿಟನ್ನ ಸುದೀರ್ಘ ಸೇವೆ ಸಲ್ಲಿಸಿದ ದೊರೆ ಎಂಬ ಹೆಗ್ಗಳಿಕೆಗೆ ಕಿಂಗ್ ಚಾರ್ಲ್ಸ್ III ಪಾತ್ರರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬ್ರಿಟನ್ನಲ್ಲಿರುವ ರಾಜಪ್ರಭುತ್ವದ ವಿರುದ್ದ ಅನೇಕರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಬ್ರಿಟನ್ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದು, ರಾಜಪ್ರಭುತ್ವಕ್ಕೆ ಮನ್ನಣೆ ನೀಡುತ್ತಿರುವುದನ್ನು ಅನೇಕರು ಟೀಕಿಸುತ್ತಿದ್ದಾರೆ.