ಇಂದು ಮಹಾರಾಷ್ಟ್ರ(Maharashtra) ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ(Eknath Shinde) ಪ್ರಮಾಣ ವಚನ ಸ್ವೀಕರಿಸಿದ್ದು, ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್(Devendra Fadnavis) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿಂಧೆ ಅವರು ಇಂದು ರಾಜ್ಯದ ಜನತೆಗೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ, ಅವರ ನೆರೆಹೊರೆಯವರು ಅವರ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಏಕನಾಥ್, ಅಂದಿನಿಂದಲೂ ಒಬ್ಬ ರಕ್ಷಕ ಎಂದು ಹೇಳಿಕೊಂಡಿದ್ದಾರೆ.
ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಏಕನಾಥ್ ಸಿಂಧೆ ಅವರು ಈ ಹಿಂದೆ ವಠಾದಲ್ಲಿ ವಾಸಿಸುತ್ತಿದ್ದರು. ವಿನಮ್ರ ಹಿನ್ನೆಲೆಯಿಂದ ಬಂದವರು ಮತ್ತು 35 ವರ್ಷಗಳಿಂದ ಥಾಣೆ ವಠಾರದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು. 1989 ರಲ್ಲಿ ನಡೆದ ಬಾಂಬೆ ಗಲಭೆಯ ಸಮಯದಲ್ಲಿ ಏಕನಾಥ್ ಶಿಂಧೆ ಮಹಿಳೆ ಮತ್ತು ಆಕೆಯ ಮಗುವಿಗೆ ಸಹಾಯ ಮಾಡಿದ ಘಟನೆಯನ್ನು ನೆರೆಹೊರೆಯವರಲ್ಲಿ ಒಬ್ಬರು ನೆನಪಿಸಿಕೊಂಡು ವಿವರಿಸಿದ್ದಾರೆ.
ಈ ಪ್ರದೇಶದಲ್ಲಿ ಗಲಭೆಯ ಸಮಯದಲ್ಲಿ ಯಾವುದೇ ಸಾರಿಗೆ ವಿಧಾನಗಳು ಆಗ ಲಭ್ಯವಿಲ್ಲದ ಕಾರಣ, ಶಿಂಧೆ ಅವರು ಮಗು ಮತ್ತು ತಾಯಿಯನ್ನು ಕರೆದೊಯ್ಯಲು ತಮ್ಮ ಆಟೋ ರಿಕ್ಷಾವನ್ನು ಓಡಿಸಿ ಬೇರೆಡೆ ಸ್ಥಳಾಂತರಿಸಿದರು. ರಾತ್ರಿಯಲ್ಲಿ ಶಿಂಧೆ ತಮ್ಮ ವಠಾದಿಂದ ಆಸ್ಪತ್ರೆಯವರೆಗೆ ಆಟೋ ರಿಕ್ಷಾವನ್ನು ತಾವೇ ಓಡಿಸಿ ಸಹಾಯ ಮಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.
ಶಿಂಧೆಯವರ ನಿಷ್ಠೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ ನೆರೆಹೊರೆಯವರು, “ಶಿಂಧೆ ಕಷ್ಟಪಟ್ಟು ಬಂದವರು ಮತ್ತು ಅವರು ಯಾವಾಗಲೂ ಜನರಿಗೆ ಸಹಾಯ ಮಾಡುತ್ತಾರೆ. ಅವರು ತೋರಿಸುವ ಸಮರ್ಪಣೆ ಮತ್ತು ನಿಷ್ಠೆಯ ಮಟ್ಟವು ಶ್ಲಾಘನೀಯವಾಗಿದೆ. ಫಡ್ನವಿಸ್ ಮತ್ತು ಶಿಂಧೆ ಅವರು ರಾಜಭವನದಲ್ಲಿ ರಾಜ್ಯಪಾಲ ಬಿಎಸ್ ಕೊಶ್ಯಾರಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ತೆರಳಿದ ಬೆನ್ನಲ್ಲೇ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಹೊರಬಿದ್ದಿದೆ.
ಸುಪ್ರೀಂ ಕೋರ್ಟ್ ಬಹುಮತ ಪ್ರದರ್ಶಿಸಿ ಎಂದು ಆದೇಶ ನೀಡಿದ ಬೆನ್ನಲ್ಲೇ ಉದ್ಧವ್ ಠಾಕ್ರೆ(Uddhav Thackrey) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ(Resignation) ನೀಡಿದರು. ಆ ಬಳಿಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಬಿಜೆಪಿ ನಾಯಕ ದೇವೆಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.