Karnataka : ಗುಜರಾತ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆಯು (Election 2023 bommai) ಬಿಜೆಪಿಗೆ ಪೂರ್ಣ ಬಹುಮತವನ್ನು ಸೂಚಿಸಿದೆ,
ಮತ್ತು ಇದು ಕರ್ನಾಟಕದ ಮೇಲೂ ಭಾರಿ ಪರಿಣಾಮ ಬೀರಲಿದೆ ಎಂದು ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಜನರು ಹೆಚ್ಚು ಬಿಜೆಪಿ ಪರವಾಗಿರುವುದರಿಂದ ಇದು ಕರ್ನಾಟಕದ (election 2023 bommai) ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಫಲಿತಾಂಶವು ನಮ್ಮ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ನಾವು ನಮ್ಮ ಮತಗಳಲ್ಲಿ ಕನಿಷ್ಠ 3-5 ಶೇಕಡಾವನ್ನು ಹೆಚ್ಚಿಸಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿರುವ ಕುರಿತು ANI ಸಂಸ್ಥೆ ವರದಿ ಮಾಡಿದೆ. https://vijayatimes.com/shiv-sena-smeared-karnataka-buses/
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ನಡುವೆ ಕರ್ನಾಟಕ ರಾಜ್ಯದ ಬೆಳಗಾವಿಗೆ ಮಹಾರಾಷ್ಟ್ರದ (Maharashtra) ಸಚಿವರ ಭೇಟಿ ರದ್ದಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, “ಇದರಲ್ಲಿ ಯಾವುದೇ ರಾಜಕೀಯ ಬೇಧವಿಲ್ಲ, ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ಇದನ್ನೂ ನೋಡಿ : https://fb.watch/hg33UkRXfj/ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗಬೇಕು,ರಿಷಬ್ ಶೆಟ್ಟಿ
ಈ ವಿವಾದದ ಬಗ್ಗೆ ಎರಡೂ ಕಡೆಯಿಂದ ಪ್ರತಿಕ್ರಿಯೆಗಳು ಬರುತ್ತವೆ. ಆದ್ರೆ, ಉಭಯ ರಾಜ್ಯಗಳ ನಡುವಿನ ಸೌಹಾರ್ದ ಸಂಬಂಧಕ್ಕೆ ಧಕ್ಕೆಯಾಗಬಾರದು ಎಂದು ನಾನು ಅವರಿಗೆ ಹೇಳಿದ್ದೇನೆ.
ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ನಡೆಸಲಿದೆ ಮತ್ತು ಈ ಕಾನೂನು ಹೋರಾಟದಲ್ಲಿ ನಾವು ಜಯಗಳಿಸಲಿದ್ದೇವೆ. ಕಾರಣ ನಮ್ಮ ಬಳಿ ಸೂಕ್ತ ದಾಖಲೆಗಳು ಇವೆ,

ನಾವು ಗೆಲ್ಲುವ ವಿಶ್ವಾಸವಿದೆ. ಈ ನಿಲುವು ಸಾಂವಿಧಾನಿಕವಾಗಿ ಮಾನ್ಯವಾಗಿದೆ, ಇದಕ್ಕೆ ಯಾವುದೇ ರಾಜಕೀಯ ದೃಷ್ಟಿಕೋನವಿಲ್ಲ ಅಥವಾ ಯಾವುದೇ ಹೊಸ ವಿವಾದವನ್ನು ಹುಟ್ಟುಹಾಕಲು ನಾವು ಉದ್ದೇಶಿಸಿಲ್ಲ, ನಮ್ಮ ಗಡಿ ಮತ್ತು ಜನರನ್ನು ರಕ್ಷಿಸಲು ಸರ್ಕಾರ ಸದಾ ಬದ್ಧವಾಗಿದೆ.