Cooking in an electric cooker? This can lead to serious health problems.
Electric Cooker Side Effects: ದಿನಗಳು ಉರುಳುತ್ತಿರುವಂತೆ ನಮ್ಮ ಜೀವನಶೈಲಿಯಲ್ಲಿಯೂ ಬಹಳಷ್ಟು ಬದಲಾವಣೆಗಳಾಗುತ್ತಿದೆ. ಆದರೆ ಎಲೆಕ್ಟ್ರಿಕ್ ಕುಕ್ಕರ್ (Electric Cooker)ನಲ್ಲಿ ಆಹಾರ ಬೇಯಿಸೋದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದು, ಇದರಲ್ಲಿ ಆಹಾರ ಬೇಯಿಸಿದಾಗ ಅದರಲ್ಲಿರುವ ಪೋಷಕಾಂಶಗಳೆಲ್ಲಾ ನಾಶವಾಗಿ ಹೋಗುತ್ತವೆ. ಜೊತೆಗೆ ಕೆಲ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ ಎಂಬ ಆತಂಕಕಾರಿ ಅಂಶ ಸಂಶೋಧನೆಯಿಂದ ತಿಳಿದು ಬಂದಿದೆ.
ಎಲೆಕ್ಟ್ರಿಕ್ ರೈಸ್ ಕುಕ್ಕರ್ ತಯಾರಿಕೆಯಲ್ಲಿ ಅಲ್ಯೂಮಿನಿಯಂ (Aluminium) ಅನ್ನು ಹೆಚ್ಚಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಅಲ್ಯುಮೀನಿಯಂ ಪಾತ್ರೆಯಲ್ಲಿ ಆಹಾರ ತಯಾರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಹುಳಿ ಅಂಶ ಇರುವ ಆಹಾರವನ್ನು ಬೇಯಿಸುವುದು ಮತ್ತು ಸಂಗ್ರಹಿಸುವುದು ಅಪಾಯಕಾರಿಯಾಗಿದ್ದು, ನಿರಂತರವಾಗಿ ಆಹಾರ ತಯಾರಿಸಿದ್ರೆ ಹೊಟ್ಟೆ ಸಮಸ್ಯೆ (Stomach Problem), ಹೃದಯ ಸಂಬಂಧಿ ಸಮಸ್ಯೆ, ಸಂಧಿವಾತ, ಮಧುಮೇಹ, ಗ್ಯಾಸ್ ಸಮಸ್ಯೆ, ಅಧಿಕ ತೂಕ, ಸೊಂಟ ನೋವು ಹೀಗೆ ಹಲವು ಸಮಸ್ಯೆಗಳು ಬರುವ ಸಾಧ್ಯತೆ ಇದೆ
ಅಷ್ಟು ಮಾತ್ರವಲ್ಲದೆ ಎಲೆಕ್ಟ್ರಿಕ್ ರೈಸ್ ಕುಕ್ಕರ್ ನಲ್ಲಿ ಬೇಯಿಸಿದ ಅನ್ನವನ್ನು ತಿನ್ನುವುದರಿಂದ ಚಿಕ್ಕ ವಯಸ್ಸಿನಲ್ಲಿ ಕಾಲು ನೋವು, ಕೀಲು ನೋವು, ಬೆನ್ನು ನೋವಿನಂತಹ ಸಮಸ್ಯೆಗಳು ಬರುತ್ತವೆ ಎಂದು ಎಚ್ಚರಿಸಲಾಗಿದೆ. ಇನ್ನು ಇದರ ಅತಿಯಾದ ಬಳಕೆಯಿಂದ ಕ್ಯಾನ್ಸರ್ (Cancer) ಬರುವ ಸಾಧ್ಯತೆಯಿದೆ. ಹಾಗಾಗಿ ಎಲೆಕ್ಟ್ರಿಕ್ ಕುಕ್ಕರ್ ನಲ್ಲಿ ಆಹಾರ ಬೇಯಿಸುವುದಕ್ಕಿಂತ ಮಣ್ಣಿನ ಪಾತ್ರೆ, ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವುದು ಉತ್ತಮ.