ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ರಾಜ್ಯದ ಜನರಿಗೆ ಇದೀಗ ಕರ್ನಾಟಕ (Electricity consumers shocked by government) ಪ್ರತಿಯೊಬ್ಬರು ಕೂಡ ಹೆಚ್ಚಳ ಆಗಿರುವ ಪೈಸೆಯ ಮೊತ್ತದೊಂದಿಗೆ ಕರೆಂಟ್ ಬಿಲ್ (Current bill) ಕಟ್ಟಲೇಬೇಕು. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಿ ಗ್ರಾಹಕರಿಗೆ ದೊಡ್ಡ ಹೊಡೆತ ಕೊಟ್ಟಿದೆ.
ಏಪ್ರಿಲ್ 1 ರಿಂದಲೇ ಈ ಹೊಸ ಆದೇಶ ಜಾರಿಯಾಗಲಿದ್ದು, ಪ್ರತಿಯೊಬ್ಬರು ಕೂಡ ಹೆಚ್ಚಳ ಆಗಿರುವ ಪೈಸೆಯ ಮೊತ್ತದೊಂದಿಗೆ ಕರೆಂಟ್ ಬಿಲ್ ಕಟ್ಟಲೇಬೇಕು. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ್ ಸಿಬ್ಬಂದಿ (Eskom staff) ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದೆ. ಈಗಾಗಲೇ ದರ ಏರಿಕೆಯ ಆದೇಶ ಕೂಡ ಹೊರಡಿಸಿದೆ.

ರಾಜ್ಯಸರ್ಕಾರದ (State Govt) ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಲಭ್ಯವಿರುವ 200 ಯೂನಿಟ್ ಕರೆಂಟ್ (Unit current) ಬಳಸಿದರೆ ಈ ದರ ಏರಿಕೆ ಅನ್ವಯ ಆಗುವುದಿಲ್ಲ. ಆದರೆ 200 ಯೂನಿಟ್ ಮೀರಿ ವಿದ್ಯುತ್ ಬಳಕೆ ಮಾಡಿದರೆ ದರ ಏರಿಕೆ ಅನ್ವಯವಾಗುತ್ತದೆ. ಗೃಹಜ್ಯೋತಿ ಯೋಜನೆ (Home Light Scheme) ಪಡೆಯದ ಗ್ರಾಹಕರು ಪೂರ್ತಿ ಹಣದ ಜೊತೆಗೆ ಹೆಚ್ಚಳ ಆಗಿರುವ ಪೈಸೆ ಸೇರಿಸಿ ವಿದ್ಯುತ್ ಬಿಲ್ ಕಟ್ಟಬೇಕು.
ವಿದ್ಯುತ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗೃಹಜ್ಯೋತಿ ಯೋಜನೆಯಿಂದ ಸರ್ಕಾರಕ್ಕೆ ನಷ್ಟ ಆಗಿದೆ ಎಂದು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ಮಾತನಾಡಿರುವ ಸಚಿವ ಶರಣಪ್ರಕಾಶ್ ಪಾಟೀಲ್ (Sharan Prakash Patil), ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದ ನಷ್ಟ ಆಗಿಲ್ಲ. ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿ ವಿಪಕ್ಷಗಳ ಟೀಕೆಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಶಾಕ್ : ನಂದಿನಿ ಹಾಲಿನ ದರ ಏರಿಕೆ,ಪ್ರತಿ ಲೀಟರ್ ಗೆ ರೂ.5 ಹೆಚ್ಚಳ ಸಾದ್ಯತೆ
ಕಳೆದ ಕೆಲ ದಿನಗಳ ಹಿಂದೆ ನಮ್ಮ ಮೆಟ್ರೋ ದರ ಏರಿಕೆ, ಕೆಎಸ್ಆರ್ಟಿಸಿ (KSRTC) ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು. (Electricity consumers shocked by government) ಪ್ರತಿಯೊಬ್ಬರು ಕೂಡ ಹೆಚ್ಚಳ ಆಗಿರುವ ಪೈಸೆಯ ಮೊತ್ತದೊಂದಿಗೆ ಕರೆಂಟ್ ಬಿಲ್ ಕಟ್ಟಲೇಬೇಕುಕೆಲವು ದಿನಗಳ ಹಿಂದಷ್ಟೇ ಆಟೋ ದರ ಏರಿಕೆಗೂ ಸರ್ಕಾರ ಸಮ್ಮತಿ ನೀಡಿತ್ತು. ಇದೀಗ ವಿದ್ಯುತ್ ದರ ಹೆಚ್ಚಳ ಮಾಡಿರೋದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.