ಹಾಸನ : ಹಾಸನ ಜಿಲ್ಲೆಯ ಬೇಲೂರು-ಸಕಲೇಶಪುರ(Sakaleshpura) ತಾಲೂಕಿನ ಗ್ರಾಮ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಈ ಸಮಸ್ಯೆ ಇದೀಗ ಮುನ್ನೆಲೆಗೆ ಬಂದಿದೆ.
ಹಾಸನ ಜಿಲ್ಲೆಯ ಆಲೂರು, ಬೇಲೂರು ಹಾಗೂ ಸಕಲೇಶಪುರ ತಾಲೂಕಿನ ಪ್ರದೇಶಗಳಲ್ಲಿ ಕಾಡಾನೆ ಸಮಸ್ಯೆಗಳು ಉಲ್ಬಣವಾಗಿರುವ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ(K.Gopalaiah) ಧ್ವನಿ ಎತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು , ಬೇಲೂರು ತಾಲೂಕಿನ ಅರೇಹಳ್ಳಿಯ ಬಿಕ್ಕೋಡು ಗ್ರಾಮ ಹಾಗೂ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಸಮಸ್ಯೆಗಳು ಹೆಚ್ಚುತ್ತಿರುವುದು ವರದಿಯಾಗಿದೆ.
ಡಿ.13 ಇಂದು ಹಾಸನ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಹಮ್ಮಿಕೊಂಡಿರುವ ಜನಸಂಕಲ್ಪಯಾತ್ರೆ(Jan Sankalp yatra) ನಡೆಯುತ್ತಿರುವ ಹಿನ್ನೆಲೆ ಈ ಸಮಸ್ಯೆಯನ್ನು ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ನೋಡಿ : https://fb.watch/hmOLu7-sy5/ ಪೊಲೀಸರಿಗೆ ರೂಲ್ಸ್ ಇಲ್ವಾ?ಪ್ರಶ್ನಿಸಿದ್ರೆ ಜೀಪು ಹತ್ತಿಸ್ತಾರೆ. Police break rules!
ಜನಸಂಕಲ್ಪಯಾತ್ರೆ ಕುರಿತು ಮಾತನಾಡುವ ವೇಳೆ ಈ ವಿಷಯವನ್ನು ಮುನ್ನೆಲೆಗೆ ತಂದ ಗೋಪಾಲಯ್ಯ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತೇವೆ.
ಶಾಶ್ವತ ಪರಿಹಾರಕ್ಕೆ ಯೋಜಿತ ಕ್ರಮ ಕೈಗೊಳ್ಳಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ಸಮಸ್ಯೆಗಳು ಹೆಚ್ಚಾಗಿರುವುದರ ಬಗ್ಗೆ ಸಕಲೇಶಪುರ ಪ್ಲಾಂಟರ್ ಕ್ಲಬ್(Planter Club) ಗುಂಪು ಮಾಹಿತಿ ನೀಡಿದೆ.
ಅವರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳ ಗಂಭೀರತೆ ಬಗ್ಗೆ ಸಿಎಂ(CM) ಅವರ ಗಮನಕ್ಕೆ ತರಲಾಗುವುದು ಮತ್ತು ಶಾಶ್ವತ ಪರಿಹಾರ ಘೋಷಿಸುವುದರ ಕುರಿತು ಚರ್ಚಿಸಲಿದ್ದೇನೆ.
ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ದಶಕಗಳಿಂದಲೂ ಇರುವ ಸಮಸ್ಯೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ, ಇದೇ ರೀತಿ ಕಾಡಾನೆ ಸಮಸ್ಯೆಯೂ ಕೂಡ ಒಂದಾಗಿದೆ.
ಕಾಡಾನೆ ಸಮಸ್ಯೆಯನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಬೇಕು ಎಂಬುದು ಕಷ್ಟಸಾಧ್ಯ!
ಇನ್ನು ಕಳೆದ ನವೆಂಬರ್ 1ರಂದು ಕಾಡಾನೆ ದಾಳಿಗೆ ಬಲಿಯಾದ ಹೆಬ್ಬನಹಳ್ಲಿ ಗ್ರಾಮದ ಯುವ ರೈತ ಮನು ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇನೆ ಎಂದು ಸಚಿವ ಕೆ.ಗೋಪಾಲಯ್ಯ ಜನಸಂಕಲ್ಪಯಾತ್ರೆಯಲ್ಲಿ ತಿಳಿಸಿದ್ದಾರೆ.
ಕಾಡಾನೆ ಹಾವಳಿ ತಡೆಗೆ ಪರಿಹಾರ ಒದಗಿಸುವ ಕುರಿತು ಡಿ.13 ರಂದು ಇಂದು ನಡೆಯುವ ಜನ ಸಂಕಲ್ಪಯಾತ್ರೆ ಕಾರ್ಯಕ್ರಮದಲ್ಲಿ ಪರಿಹಾರ ಘೋಷಣೆ ಮಾಡುವ ನಿರೀಕ್ಷೆ ಹೆಚ್ಚಿದೆ.
2 ಗಂಡಾನೆಗೆ ರೇಡಿಯೋ ಕಾಲರ್ ಹಾಕುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಈ ವಿಷಯದ ಜೊತೆಗೆ ಕಾಫಿ ಬೆಳೆಗಾರರ ಬಗ್ಗೆ ಮಾತನಾಡಿದ ಗೋಪಾಲಯ್ಯ, ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಭೂ ಪ್ರದೇಶಗಳನ್ನು 20-30 ವರ್ಷ ಲೀಸ್ಗೆ ಕೊಡುವ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.
ಈ ಬಾರಿಯ ಬೆಳಗಾವಿ(Belagavi) ಚಳಿಗಾಲದ ಅಧಿವೇಶನದಲ್ಲಿ ಈ ಬಿಲ್ ಪಾಸ್ ಮಾಡಲಾಗುವುದು.
ಇದನ್ನೂ ಓದಿ : https://vijayatimes.com/siddaramaiah-tweet-state-bjp/
ಈ ಮೂಲಕ ಹಲವು ದಶಕಗಳಿಂದ ಸಮಸ್ಯೆಗಳನ್ನು ಎದುರಿಸಿಕೊಂಡು ಬಂದಿರುವ ಕಾಫಿ ಬೆಳೆಗಾರರಿಗೆ ಹೊಸ ವರ್ಷದ ಕೊಡುಗೆ ನೀಡಲಾಗುವುದು. ಈ ಸಂಬಂಧ ಕಂದಾಯ ಸಚಿವರಾದ(Revenue Minister) ಆರ್.ಅಶೋಕ್(R. Ashoka) ಅವರೊಡನೆ ಮಾತುಕತೆ ನಡೆಸಲಾಗಿದೆ.
ಇದರಿಂದ ಅರಣ್ಯ ಇಲಾಖೆಯಿಂದ ಕಾಫಿ ಬೆಳೆಗಾರರಿಗೆ ಉಂಟಾಗುತ್ತಿರುವ ನಷ್ಟ ತಪ್ಪುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.