English English Kannada Kannada

ಯುಎಸ್ ಓಪನ್ ಗೆದ್ದ ಎಮ್ಮಾ ರಡುಕಾನು

ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದಿದ್ದ ಶ್ರೇಯಾಂಕ ರಹಿತ ಆಟಗಾರ್ತಿ ಬ್ರಿಟನ್‌ನ ೧೮ ವರ್ಷದ ಎಮ್ಮಾ ರಡುಕಾನು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ
Share on facebook
Share on google
Share on twitter
Share on linkedin
Share on print

 ನ್ಯೂಯಾರ್ಕ್, ಸೆಪ್ಟೆಂಬರ್ 12: ಈ ಬಾರಿಯ ಮಹಿಳೆಯರ ಸಿಂಗಲ್ಸ್ ಯುಎಸ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಎಮ್ಮಾ ರಡುಕಾನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 44 ವರ್ಷಗಳ ನಂತರ ಬ್ರಿಟನ್‌ನ ಆಟಗಾರ್ತಿಯೊಬ್ಬರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಂತಾಗಿದೆ.

ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದಿದ್ದ ಶ್ರೇಯಾಂಕ ರಹಿತ ಆಟಗಾರ್ತಿ ಬ್ರಿಟನ್‌ನ ೧೮ ವರ್ಷದ ಎಮ್ಮಾ ರಡುಕಾನು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಎಮ್ಮಾ ವೃತ್ತಿಪರ ಟೆನಿಸ್‌ನಲ್ಲಿ ಅರ್ಹತಾ ಸುತ್ತಿನಿಂದ ಪ್ರವೇಶ ಪಡೆದು ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಎಮ್ಮಾ ರಡುಕಾನುಗೆ ಕೆನಡಾದ ಆಟಗಾರ್ತಿ ಲೇಲಾ ಫೆರ್ನಾಂಡೀಸ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ರಡುಕಾನು 6-4, 6-3 ಅಂತರದಿಂದ ನೇರ ಸೆಟ್‌ಗಳ ಗೆಲುವು ಸಾಧಿಸಿದ್ದರು. ಇನ್ನು ಈ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುವ ಮೂಲಕ 2004ರಲ್ಲಿ ಮರಿಯಾ ಶರಪೋವಾ ವಿಂಬಲ್ಡನ್ ಗೆದ್ದ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ರಡುಕಾನು ಪಾತ್ರರಾಗಿದ್ದಾರೆ.

Submit Your Article