“ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತದೆ” ಎನ್ನುವುದು ಗಾದೆ. ಈ ಜಗತ್ತಿನಲ್ಲಿ ಹಣಕ್ಕಿರುವಷ್ಟು ಬೆಲೆ ಬೇರೆ ಯಾವ ವಸ್ತುವಿಗೂ ಇಲ್ಲ.
ಬದುಕುವುದಕ್ಕೆ ದುಡ್ಡು ಬೇಕೇ ಬೇಕು, ದುಡ್ಡು ಸಂಪಾದಿಸಲು ಕೆಲಸ ಮಾಡಬೇಕು. ಯಾವುದೇ ಉದ್ಯೋಗವಿರಲಿ, ಒಟ್ಟಿನಲ್ಲಿ ನೌಕರರಿಗೆ ಸಂಬಳ ನಿಮ್ಮ ಖಾತೆಗೆ ಬಂದಿದೆ ಎಂಬ ಮೆಸೇಜ್(salary credited) ಬಂದ ಕೂಡಲೇ ಬಹಳ ಖುಷಿಯಾಗುತ್ತದೆ.
ಅಂಥದ್ರಲ್ಲಿ ಇಲ್ಲಿ ಒಬ್ಬ ವ್ಯಕ್ತಿಗೆ ಒಂದು ಬಾರಿಯಲ್ಲ, ಎರಡು ಬಾರಿಯಲ್ಲ, ಬರೋಬ್ಬರಿ 286 ಬಾರಿ ಸ್ಯಾಲರಿ ಕ್ರೆಡಿಟೆಡ್(credited) ಅಂತ ಮೆಸೇಜ್(Message) ಬಂದಿದೆ!
ಹೌದು, ಚಿಲಿ(Chili) ದೇಶದ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕ ಸಂಸ್ಥೆ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ತಿಂಗಳಿನ ಅಂತ್ಯದಲ್ಲಿ ಎಲ್ಲರಿಗೂ ಸಂಬಳ ಬರುವಂತೆ ತನಗೆ 43 ಸಾವಿರ ರೂಪಾಯಿ ಬರಬೇಕಿತ್ತು.
ಆದ್ರೆ, ಒಂದು ಬಾರಿಗೆ ಸಂಬಳ ಬಂದಿದೆ ಎಂಬುದರ ಬದಲು ಆಕಸ್ಮಿಕವಾಗಿ 286 ಬಾರಿ ಸಂಬಳ ಪಾವತಿಸಲಾಗಿದೆ(Employee gets unexpected salary). ಎಂದರೆ ಬರೋಬ್ಬರಿ 1.3 ಕೋಟಿ ರೂ.ಗಳನ್ನು ಕಂಪನಿ ಈತನಿಗೆ ಪಾವತಿಸಿದೆ.
ನಂತರ ಹಣಕಾಸಿನ ವ್ಯತ್ಯಯವಾದಾಗ ದಾಖಲೆಗಳನ್ನು ಪರಿಶೀಲಿಸಲಾಯಿತು, ಅದರಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬೆಚ್ಚಿ ಬಿದ್ದ ಸಂಸ್ಥೆಯ ಮುಖ್ಯಸ್ಥರು, ಉದ್ಯೋಗಿಗೆ ಹಣ ಹಿಂದಿರುಗಿಸುವಂತೆ ಮನವಿ ಮಾಡಿದ್ದರು.
ಆ ನೌಕರ ಕೂಡ ಬ್ಯಾಂಕ್‌ಗೆ ಭೇಟಿ ನೀಡಿ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದ. ಆದರೆ ಸ್ವಲ್ಪ ಸಮಯದ ನಂತರ ಕಂಪನಿ ನೀಡಿದ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ. ಜೊತೆಗೆ, ಜೂನ್ 2 ರಂದು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಹಣದೊಂದಿಗೆ ನಾಪತ್ತೆಯಾಗಿದ್ದಾನೆ.
https://vijayatimes.com/why-chocolates-are-dangerous-for-dogs/
ತಾನೇ ಮಾಡಿದ ಯಡವಟ್ಟಿಗೆ ಪೇಚಾಡುತ್ತಿರುವ ಕಂಪನಿ, ಇದೀಗ ಹಣವನ್ನು ವಸೂಲಿ ಮಾಡಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.
- ಪವಿತ್ರ ಸಚಿನ್