Karnataka : ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajipayee) ಅವರ ಜನ್ಮದಿನವನ್ನು ‘ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸುವ ಸಂದರ್ಭದಲ್ಲಿ ರಾಜ್ಯದ 10,000 ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 8 ಮಂದಿಗೆ ಸಾಂಕೇತಿಕವಾಗಿ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಈ ಕಾರ್ಯಕ್ರಮದಲ್ಲಿ, ಉದ್ಯೋಗ ಆಕಾಂಕ್ಷಿಗಳಿಗೆ ಮಾಸಿಕ ₹ 18,000 ರಿಂದ ₹ 45,000 ವರೆಗೆ ವೇತನದೊಂದಿಗೆ ಉದ್ಯೋಗವನ್ನು ಒದಗಿಸಲಾಗಿದೆ.
ನೇಮಕಾತಿಯಲ್ಲಿ ಬಿಎಸ್ಸಿ, ಬಿಕಾಂ, ನರ್ಸಿಂಗ್, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಉತ್ತೀರ್ಣರಾದವರು ಸೇರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕರ್ನಾಟಕ(Karnataka) ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ಉದ್ಯೋಗ ನೀತಿ ಇಲ್ಲ.
ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರಾಜ್ಯವು ಆರ್ & ಡಿ (R&D) ನೀತಿಯನ್ನು ಹೊಂದಿದೆ.
ಇದನ್ನೂ ನೋಡಿ : https://fb.watch/hF2S_uWUZo/ ಏನಾಗಲಿದೆ ಎನ್‌ಪಿಎಸ್? ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟಗಾರರ ಪಟ್ಟು.
ಎಲೆಕ್ಟ್ರಿಕ್ ವೆಹಿಕಲ್ (EV) ವಲಯದಲ್ಲಿ ಆರ್ & ಡಿ ಕೇಂದ್ರಗಳು ರಾಜ್ಯದಲ್ಲಿಯೂ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಕೆಲ ಹೊರರಾಜ್ಯಗಳು EV ವಲಯದಲ್ಲಿ ಹೆಚ್ಚಿನ ಆರ್ & ಡಿ ಕೇಂದ್ರಗಳನ್ನು ಹೊಂದಿವೆ.
ಹೀಗಾಗಿ ಇವಿ ವಲಯದಲ್ಲಿ ರಾಜ್ಯದಲ್ಲಿ ತೊಡಗಿಸಿಕೊಂಡಿರುವ ಆರ್ & ಡಿ ಕೇಂದ್ರಗಳು ಸಹ ಕಡ್ಡಾಯವಾಗಿ ಅವರ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲೇ ಸ್ಥಾಪಿಸಬೇಕೆಂದು ಅವರು ಮನವಿ ಮಾಡಿದರು.
ಇನ್ನು‘ಸ್ತ್ರೀ ಸಾಮರ್ಥ್ಯ’ ಕಾರ್ಯಕ್ರಮದ ಮೂಲಕ 5 ಲಕ್ಷ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.
ಅದೇ ರೀತಿ ‘ಸ್ವಾಮಿ ವಿವೇಕಾನಂದ’(Swami Vivekananda) ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.
ರಾಜ್ಯದಲ್ಲಿ ₹ 8 ಲಕ್ಷ ಕೋಟಿ ಹೂಡಿಕೆ ಮಾಡಲು ಬಹುರಾಷ್ಟ್ರೀಯ ಕಂಪನಿಗಳು ಮುಂದೆ ಬಂದಿವೆ. ಈ ಕೌಶಲ್ಯ ಸೆಟ್ಗಳಿಂದ ಸೃಷ್ಟಿಯಾಗುವ ಅವಕಾಶಗಳನ್ನು ಬಳಸಿಕೊಳ್ಳುವ ಅಗತ್ಯವಿದೆ.
ಇದನ್ನು ಮನಗಂಡು ರಾಜ್ಯ ಸರ್ಕಾರ ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ್ಯ ನೀಡಲು ಆದ್ಯತೆ ನೀಡಿದೆ ಎಂದು ಬೊಮ್ಮಾಯಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವ ಕುಮಾರ್ (S. Selva Kumar), ಕೌಶಲ್ಯಾಭಿವೃದ್ಧಿ ನಿಗಮದ ಎಂಡಿ ಅಶ್ವಿನ್ ಗೌಡ, ಡಿಸಿಟಿಇ ಆಯುಕ್ತ ಪಿ.ಪ್ರದೀಪ್(P. Pradeep), ರಘುಪ್ರಿಯ,
ಇದನ್ನೂ ಓದಿ : https://vijayatimes.com/short-term-course-start/
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಎಸ್ಇಸಿ ಉಪಾಧ್ಯಕ್ಷ ಪ್ರಾಧ್ಯಾಪಕ ಬಿ.ತಿಮ್ಮೇಗೌಡ, ಜಿಟಿಟಿಸಿ MD ರಾಘವೇಂದ್ರ , ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಸೊಸೈಟಿ MD, ಬಸವರಾಜು ಉಪಸ್ಥಿತರಿದ್ದರು.
- ಮಹೇಶ್.ಪಿ.ಎಚ್