ಲಾರ್ಡ್ಸ್ : ಯವ ವೇಗಿ ಮಹಮದ್ ಸಿರಾಜ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ 150 ರನ್ ಗಳಿಂದ ಸೋಲನುಭವಿಸಿದೆ.
ಲಾರ್ಡ್ಸ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತೀಯರು ಕೆ.ಎಲ್. ರಾಹುಲ್ ಅವರ ಶತಕದ ಮತ್ತು ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 364 ರನ್ ಗಳಿಗೆ ಸರ್ವಫತನ ಕಂಡು ಕೊಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಜೇಮ್ಸ್ ಅಂಡರ್ಸನ್ 5, ರಾಬಿನ್ ಸನ್ 2, ಮಾರ್ಕ ವುಡ್ 2 ಹಾಗೂ ಮೋಯಿನ್ ಅಲಿ 1 ವಿಕೆಟ್ ಕಬಳಿಸಿದರು. ಇದಕ್ಕುತ್ತರವಾಗಿ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ 391 ರನ್ ಗಳಿಸಿ 27 ರನ್ ಗಳ ಅಲ್ಪ ಮುನ್ನಡೆ ಸಾಧಿಸಿತು. ಭಾರತ ಪರ ಮಹಮದ್ ಸಿರಾಜ್ 4 , ಇಶಾಂತ್ ಶರ್ಮಾ 3, ಹಾಗೂ ಮಹಮದ್ ಶಮಿ 2 ವಿಕೆಟ್ ಪಡೆದುಕೊಂಡರು.
27 ರನ್ ಅಲ್ಪ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತೀಯರು ಅಜಿಂಕ್ಯಾ ರಹಾನೆ ಮತ್ತು ಮೊಹಮ್ಮದ್ ಶಮಿ ಅವರ ಅರ್ಧಶತಕದ ನೆರವಿನಿಂದ 298 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಇದರೊಂದಿಗೆ ಇಂಗ್ಲೆಂಡ್ಗೆ 271 ರನ್ ಗಳ ಗುರಿ ನೀಡಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಮಾರ್ಕ ವುಡ್ 3, ರಾಬಿನ್ ಸನ್ 2, ಮೋಯಿನ್ ಆಲಿ 2, ಮತ್ತು ಸ್ಯಾಮ್ ಕರನ್ 1 ವಿಕೆಟ್ ಪಡೆದುಕೊಂಡರು.
ದ್ವಿತೀಯ ಇನ್ನಿಂಗ್ಸ್ ನಲ್ಲಿ 271 ರನ್ ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಸಿರಾಜ್ ಮಾರಕ ದಾಳಿಗೆ ಸಿಲುಕಿ 120 ರನ್ ಗಳಿಗೆ ಸರ್ವಪಥನ ಕಂಡು ಕೊಂಡಿತು. ಇಂಗ್ಲೆಂಡ್ ಪರ ನಾಯಕ ರೂಟ್ ಮತ್ತು ಮತ್ತು ಬಟ್ಲರ್ 20 ರ ಗಡಿ ದಾಟಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್ಮನ್ ಗಳು ಕೂಡ 20ರ ಗಡಿ ಕೂಡ ದಾಟದೇ ಪ್ರವಾಸಿಗರ ಮುಂದೆ ಶರಣಾದರು. ಬಾರತದ ಪರ ಮೊಹಮದ್ ಸಿರಾಜ್, ಬುಮ್ರಾ 3, ಇಶಾಂತ್ ಶರ್ಮಾ 2 ಹಾಗೂ ಶಮಿ 1 ವಿಕೆಟ್ ಪಡೆದುಕೊಂಡರು.
ಈ ಪಂದ್ಯವನ್ನು ಗೆಲ್ಲುವುದರೊಂದಿಗೆ 5 ಸರಣಿಯ ಪಂದ್ಯದಲ್ಲಿ 1-0 ಯಿಂದ ಭಾರತ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಿರ್ವಹಣೆ ಮಾಡಿದ ಕೆ.ಎಲ್. ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.