ಅಲ್ಪಾವಧಿಯಲ್ಲಿ ಸುರಕ್ಷಿತ ಲಾಭ, ದೀರ್ಘಾವಧಿಯಲ್ಲಿ (Equity Investment Vs Small Savings Scheme) ಸಂಪತ್ತು ಸೃಷ್ಟಿ – ಹೂಡಿಕೆದಾರರಿಗೆ ಮಹತ್ವದ ಮಾಹಿತಿ
ಮಾರುಕಟ್ಟೆ ಅಸ್ಥಿರತೆಯ ನಡುವೆ ಸ್ಥಿರ ಆದಾಯ ನೀಡಿದ ಸಣ್ಣ ಉಳಿತಾಯ ಯೋಜನೆಗಳು
ಷೇರು ಮಾರುಕಟ್ಟೆಗೆ ಶಾಕ್: ಕೆಲವೊಮ್ಮೆ ಸಣ್ಣ ಉಳಿತಾಯ ಯೋಜನೆಗಳೇ ಬೆಸ್ಟ್
ಜಾಗತಿಕ ಆರ್ಥಿಕ ಅಸ್ಥಿರತೆ, ಬಡ್ಡಿದರಗಳ ಅನಿಶ್ಚಿತತೆ ಮತ್ತು ಷೇರು ಮಾರುಕಟ್ಟೆಯ ನಿರಂತರ (Equity Investment Vs Small Savings Scheme) ಏರಿಳಿತಗಳ ನಡುವೆ ಹೂಡಿಕೆದಾರರು ತಮ್ಮ ಹಣವನ್ನು ಎಲ್ಲಿ ಹೂಡಬೇಕು ಎಂಬ ಪ್ರಶ್ನೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಇಕ್ವಿಟಿ ಮತ್ತು ಮ್ಯೂಚುವಲ್ ಫಂಡ್‌ಗಳು (Mutual Funds) ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ನೀಡುತ್ತವೆ ಎಂಬ ನಂಬಿಕೆ ಇದ್ದರೂ, ಕಳೆದ ಎರಡು ವರ್ಷಗಳ ಅವಧಿಯ ಚಿತ್ರಣ ಅದಕ್ಕಿಂತ ಭಿನ್ನವಾಗಿದೆ.
2024ರಿಂದ 2026ರವರೆಗೆ ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಅನೇಕ ಹೂಡಿಕೆದಾರರು ನಿರೀಕ್ಷಿತ ಆದಾಯ ಪಡೆಯಲು ವಿಫಲರಾಗಿದ್ದು, ಸರ್ಕಾರದ ಬೆಂಬಲಿತ ಸಣ್ಣ ಉಳಿತಾಯ ಯೋಜನೆಗಳು ಉತ್ತಮ ಪ್ರದರ್ಶನ ನೀಡಿವೆ.

ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು ಈ ಅವಧಿಯಲ್ಲಿ ಹೂಡಿಕೆದಾರರಿಗೆ ಸುರಕ್ಷಿತ ಹಾಗೂ ಸ್ಥಿರ ಆದಾಯದ ಮೂಲವಾಗಿ ಪರಿಣಮಿಸಿವೆ.
ವಿಶೇಷವಾಗಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ವಾರ್ಷಿಕ ಶೇ. 8.2 ರಷ್ಟು ಬಡ್ಡಿದರವನ್ನು ನೀಡುವ ಮೂಲಕ ಅತ್ಯುತ್ತಮ ಲಾಭದಾಯಕ ಯೋಜನೆಗಳಾಗಿ ಹೊರಹೊಮ್ಮಿವೆ.
ಜೊತೆಗೆ ರಾಷ್ಟ್ರೀಯ ಉಳಿತಾಯ ಪತ್ರ (NSC) ಶೇ. 7.7 ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಶೇ. 7.1 ರಷ್ಟು ಆದಾಯ ನೀಡುತ್ತಿವೆ. ಪೋಸ್ಟ್ ಆಫೀಸ್ (Post Office) ಮಾಸಿಕ ಆದಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ ಹಾಗೂ ಐದು ವರ್ಷಗಳ ಠೇವಣಿ ಯೋಜನೆಗಳೂ ಹೂಡಿಕೆದಾರರಿಗೆ ಸ್ಥಿರ ಆದಾಯ ಒದಗಿಸಿವೆ.
ಇನ್ನೊಂದೆಡೆ, ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ (Equity Investment Vs Small Savings Scheme) ನಿಫ್ಟಿ 100 ಮತ್ತು ನಿಫ್ಟಿ ನೆಕ್ಸ್ಟ್ 50 ನಿರೀಕ್ಷಿತ ಮಟ್ಟದ ಆದಾಯ ನೀಡಲು ವಿಫಲವಾಗಿವೆ.
ನಿಫ್ಟಿ 100 ಕಳೆದ ಎರಡು ವರ್ಷಗಳಲ್ಲಿ ವಾರ್ಷಿಕ ಸರಾಸರಿ ಮೈನಸ್ 0.15 ಶೇಕಡಾ ಆದಾಯ ದಾಖಲಿಸಿದ್ದು, ಹೂಡಿಕೆದಾರರಿಗೆ ನಿರಾಸೆ ಮೂಡಿಸಿದೆ. ಮಿಡ್‌ಕ್ಯಾಪ್ ಮತ್ತು
ಸ್ಮಾಲ್‌ಕ್ಯಾಪ್ ವಿಭಾಗಗಳು ಸ್ವಲ್ಪ ಮಟ್ಟಿನ ಬೆಳವಣಿಗೆ ಕಂಡಿದ್ದರೂ, ಅವುಗಳ ಲಾಭದ ಪ್ರಮಾಣವೂ ಸರ್ಕಾರದ ಉಳಿತಾಯ ಯೋಜನೆಗಳಿಗಿಂತ ಕಡಿಮೆಯೇ ಉಳಿದಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ, ಹೂಡಿಕೆದಾರರ ಎಚ್ಚರಿಕೆ ಮತ್ತು ಕಂಪನಿಗಳ ಸಾಧಾರಣ ಆದಾಯ ವೃದ್ಧಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿಯೂ ಪರಿಸ್ಥಿತಿ ಹೆಚ್ಚು ಭಿನ್ನವಾಗಿರಲಿಲ್ಲ. ಲಾರ್ಜ್‌ಕ್ಯಾಪ್ (Largecap) , ಫ್ಲೆಕ್ಸಿಕ್ಯಾಪ್ ಹಾಗೂ ತೆರಿಗೆ ಉಳಿತಾಯ (ELSS) ಫಂಡ್‌ಗಳು ಅಲ್ಪ ಪ್ರಮಾಣದ ಆದಾಯವನ್ನಷ್ಟೇ ನೀಡಿವೆ.
ಮಿಡ್‌ಕ್ಯಾಪ್ ಫಂಡ್‌ಗಳು ತುಸು ಉತ್ತಮ ಪ್ರದರ್ಶನ ನೀಡಿದರೂ, ಸರ್ಕಾರದ ಗ್ಯಾರಂಟಿ ಯೋಜನೆಗಳ ಶೇ. 8.2 ರಷ್ಟು ಸ್ಥಿರ ಆದಾಯವನ್ನು ಮೀರಿಸಲು ಸಾಧ್ಯವಾಗಿಲ್ಲ.
ಇದರ ಪರಿಣಾಮವಾಗಿ ಕಡಿಮೆ ಅಪಾಯವನ್ನು ಬಯಸುವ ಹೂಡಿಕೆದಾರರು ಸಣ್ಣ ಉಳಿತಾಯ ಯೋಜನೆಗಳತ್ತ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಸುರಕ್ಷತೆ ಮತ್ತು ಖಚಿತ ಆದಾಯ ಎಂಬ ಅಂಶಗಳು ಈ ಯೋಜನೆಗಳ ಪ್ರಮುಖ ಆಕರ್ಷಣೆಯಾಗಿವೆ.
ಆದರೆ, ಈ ಎರಡು ವರ್ಷದ ಅಂಕಿ-ಅಂಶಗಳ ಆಧಾರದ ಮೇಲೆ ಇಕ್ವಿಟಿ ಹೂಡಿಕೆಗಳ ಮಹತ್ವವನ್ನು ಕಡಿಮೆ ಅಂದಾಜು ಮಾಡುವುದು ಸರಿಯಲ್ಲ ಎಂದು ತಜ್ಞರು
ಅಭಿಪ್ರಾಯಪಡುತ್ತಾರೆ. ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಹೆಚ್ಚಿನ ಸಂಪತ್ತು ಸೃಷ್ಟಿಸಿ ಕೊಟ್ಟಿರುವ ಇತಿಹಾಸ ಹೊಂದಿದೆ.
ಕಳೆದ ಹತ್ತು ವರ್ಷಗಳಲ್ಲಿ ನಿಫ್ಟಿ 100 ಸರಾಸರಿ ಶೇ. 12 ರಷ್ಟು ವಾರ್ಷಿಕ ಆದಾಯ ನೀಡಿದ್ದರೆ, ನಿಫ್ಟಿ ಮಿಡ್‌ಕ್ಯಾಪ್ 150 ಸುಮಾರು ಶೇ. 18 ರಷ್ಟು ಲಾಭ ತಂದುಕೊಟ್ಟಿದೆ.
ಹೀಗಾಗಿ ಅಲ್ಪಾವಧಿಯಲ್ಲಿ ಸುರಕ್ಷಿತ ಆದಾಯ ಬಯಸುವವರಿಗೆ ಸಣ್ಣ ಉಳಿತಾಯ ಯೋಜನೆಗಳು ಉತ್ತಮ ಆಯ್ಕೆಯಾಗಿದ್ದರೂ, ದೀರ್ಘಾವಧಿಯ ಸಂಪತ್ತು ನಿರ್ಮಾಣದ
ಗುರಿ ಹೊಂದಿರುವವರು ಇಕ್ವಿಟಿ ಹೂಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಾರದು ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ.
ಇದನ್ನು ಓದಿ : https://vijayatimes.com/200-liters-of-diesel-per-day/