ಭಾನುವಾರ, ದೀಪಿಕಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿ ಅದಕ್ಕೆ ‘ಎಸ್ಕೇಪ್ ಟೈಮ್’ ಎಂದು ಲೇಬಲ್ ಹಾಕಿದ್ದಾರೆ. ನಟಿಯು ಮುಂಬೈ ನಿಂದ ಸ್ಪೇನ್ ಗೆ ಪ್ರಾಯಾಣಿಸುವ ಮಧ್ಯದಲ್ಲಿ ತನ್ನ ವಿಮಾನದ ಸ್ನ್ಯಾಪ್‌ಗಳನ್ನು ಹಂಚಿಕೊಂಡಿದ್ದಾರೆ . ಸದ್ಯ ಈಗ ಸ್ಪೇನ್‌ನಲ್ಲಿ ಸಮಯ ಕಳೆಯುತ್ತಿರುವ ದೀಪಿಕಾ, ತನ್ನ ಪ್ರತಿದಿನದ ಹೊಸ ಅನುಭವವನ್ನುಸ್ನ್ಯಾಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಮತ್ತು ಸ್ಪೇನ್ ಅನ್ನು ತನ್ನ ‘ಹೊಸ ಮನೆ’ ಎಂದು ಕರೆದಿದ್ದರೆ. ತಾತ್ಕಾಲಿಕವಾಗಿ ಹೊಸ ಮನೆಯಂತೆ.

ಅವರ ಅಭಿಮಾನಿಗಳ ಸಂತೋಷಕ್ಕೆ, ನಟಿ ನೆನ್ನೆ ಸೆಲ್ಫಿಯೊಂದನ್ನು ಅಪಲೋಡ್ ಮಾಡಿ ‘ಸೋಮಾರಿ ಭಾನುವಾರ’ ಎಂದು ಟ್ಯಾಗ್ ಮಾಡಿದ್ದಾರೆ. ದೀಪಿಕಾ, ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾನ್ ಜನವರಿ 25, 2023 ರಂದು ಬಿಡುಗಡೆಯಾಗಲಿದೆ. ನಟಿಯ ಹೊರತಾಗಿ, ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಪೇನ್‌ಗೆ ತೆರಳಿದ್ದಾರೆ ಹಾಗೂ ಜಾನ್ ತನ್ನ ಪತ್ನಿ ಪ್ರಿಯಾ ರುಂಚಲ್‌ನೊಂದಿಗೆ ಸ್ಪೇನ್‌ಗೆ ತೆರಳಿದ್ದಾರೆ.