Bengaluru: ಉಚಿತ ವಿದ್ಯುತ್ ಯೋಜನೆಯು ಕಾಂಗ್ರೆಸ್ ಸರ್ಕಾರ ಬಂದ ನಂತರ (Escom online service suspended) ಜಾರಿಗೊಳಿಸಿದ್ದು, ಬಿಲ್ ದರ ಹೆಚ್ಚಳವಾಗಿರುವುದಲ್ಲದೆ, ಲೋಡ್
ಶೆಡ್ಡಿಂಗ್ ಸಮಸ್ಯೆ ಉಂಟಾಗಿದೆ. ಈಗಾಗಲೇ ರಾಜ್ಯದಾದ್ಯಂತ ಪವರ್ ಕಟ್ನಿಂದ ಜನರು ಆಕ್ರೋಶಗೊಂಡಿದ್ದು, ಇದರ ನಡುವೆಯು ಈ ಎರಡು ದಿನ ರಾಜ್ಯದಲ್ಲಿ ಎಸ್ಕಾಂ ಆನ್ಲೈನ್ ಸೇವೆ ಸಿಗುವುದಿಲ್ಲ.
ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ನವೆಂಬರ್ 24 ಮತ್ತು ನವೆಂಬರ್ 26 ರಂದು ಎಸ್ಕಾಂ ಆನ್ಲೈನ್ ಸೇವೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್
ಪೋಟರ್ಲ್ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ ಈ ಎರಡು ದಿನದಂದು ಎಸ್ಕಾಂ ಆನ್ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ.
ನ.24 ರಂದು ಮಧ್ಯಾಹ್ನ 12 ಗಂಟೆಯಿಂದ ನ.26 ರಂದು ಬೆಳಗ್ಗೆ 11.59 ಗಂಟೆವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದ್ದು, ಈ ಬಗ್ಗೆ ಬೆಸ್ಕಾಂ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,
ಸಾರ್ವಜನಿಕರು ಸಹಕಾರ (Escom online service suspended) ನೀಡುವಂತೆ ಕೋರಿದೆ.
ವಿವಿಧ ಪೋರ್ಟಲ್ಗಳಲ್ಲಿರುವ ಡೇಟಾಗಳನ್ನು ನೂತನ ಪೋರ್ಟಲ್ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಅದರಂತೆ,
ಈ ಎರಡು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಲಭ್ಯವಿರುವುದಿಲ್ಲ. ಇದರಿಂದಾಗಿ ಬೆಸ್ಕಾಂ, ಚೆಸ್ಕ್ ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ವ್ಯಾಪ್ತಿಯ
ಜನರಿಗೆ ಸಮಸ್ಯೆಯಾಗಲಿದೆ.
ಇದನ್ನು ಓದಿ: “ನಾನು ನೀಡಿದ ಲಿಸ್ಟ್ನಲ್ಲಿದ್ದವರ ಕೆಲಸ ಮಾತ್ರ ಆಗ್ಬೇಕು” ಸಿಎಂ ಪುತ್ರನ ದರ್ಬಾರ್ ; ಕಳಚಿತು ಸಮಾಜವಾದದ ಮುಖವಾಡ
- ಭವ್ಯಶ್ರೀ ಆರ್.ಜೆ