Shivamoga : ಕರ್ನಾಟಕ ರಾಜ್ಯ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ(K.S.Eshwarappa) ಅವರು ಕಳೆದ ವಾರ ಮಂಗಳೂರಿನಲ್ಲಿ ನೀಡಿದ್ದ ಆಜಾನ್ ವಿರುಧ್ಧದ ಹೇಳಿಕೆಯನ್ನು ಖಂಡಿಸಿ ಮುಸ್ಲಿಂ ಸಮುದಾಯದವರು (eshwarappa new controversy) ಭಾನುವಾರ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮುಸ್ಲಿಂ ಸಮುದಾಯದ ಸದಸ್ಯರು ಆಜಾನ್ ಪಠಿಸಿದ್ದಾರೆ.
ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ನೀಡಿದ ಹೇಳಿಕೆ ಒಪ್ಪುವಂತದ್ದಲ್ಲ ಎಂದು ಹೇಳುವ ಮೂಲಕ ಪ್ರತಿಭಟನಾಕಾರರು ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಿದೆ. ವೀಡಿಯೋದಲ್ಲಿ ಯುವಕನೊಬ್ಬ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಿಂತು ಆಜಾನ್(Azan) ಪಠಿಸುತ್ತಿರುವುದು ಕಂಡುಬಂದಿದೆ.
ಆಜಾನ್ ಪಠಿಸಿ, ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದೇ ರೀತಿ ವಿಧಾನಸೌಧದ ಮುಂದೆಯೂ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಈಶ್ವರಪ್ಪ ನಮ್ಮ ತಂದೆ-ತಾಯಿ ವಿರುದ್ಧ ಮಾತನಾಡಿದರೆ ಬಿಡಬಹುದು. ಆದರೆ ಅಲ್ಲಾ ಮತ್ತು ಆಜಾನ್ ಬಗ್ಗೆ ಕಮೆಂಟ್ ಮಾಡಿದ್ದಾರೆ.
ನಾವು ವಿಧಾನಸೌಧದ ಮುಂದೆಯೂ ಆಜಾನ್ ಹೇಳುತ್ತೇವೆ. ನಾವು ಹೇಡಿಗಳಲ್ಲ. ಎಲ್ಲಾ ಮುಸ್ಲಿಂ ಸಮುದಾಯಗಳು ಒಂದಾಗಬೇಕು ಎಂದು ಡಿಸಿ ಕಚೇರಿಯ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಈ ನಡುವೆ ಘಟನೆಯ ನಂತರ ಶಿವಮೊಗ್ಗ ಪೊಲೀಸರು ಸೆಕ್ಷನ್ 107 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂತಹ ಚಟುವಟಿಕೆಗಳು ಮರುಕಳಿಸದಂತೆ ಯುವ ಪ್ರತಿಭಟನಾಕಾರರಿಗೆ ಸೂಚಿಸಿದ್ದೇವೆ ಮತ್ತು ಅವರಿಗೆ ಮನವರಿಕೆ ಮಾಡಿ ಕಳುಹಿಸಿದ್ದೇವೆ.
ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ, ಅವರ ಹಿನ್ನೆಲೆಯನ್ನು ಗುರುತಿಸಲು ತನಿಖೆ ನಡೆಯುತ್ತಿದೆ, ಏನಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಿವಮೊಗ್ಗ(eshwarappa new controversy) ಅಧೀಕ್ಷಕರು ಹೇಳಿದ್ದಾರೆ.
ಇನ್ನು ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿದ ರಾಜಕೀಯ ಪಕ್ಷದ ನಾಯಕರ ಪೈಕಿ ಮಾಜಿ ಮುಖ್ಯಮಂತ್ರಿ,
ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ(H.D.Kumarswamy) ಅವರು ಆಜಾನ್ ವಿರುಧ್ಧದ ಹೇಳಿಕೆಗೆ ಈಶ್ವರಪ್ಪ ವಿರುದ್ಧ ಭಾರಿ ವಾಗ್ದಾಳಿ ನಡೆಸಿದರು.

ಇವು ಸೂಕ್ಷ್ಮ ವಿಷಯಗಳು. ಇಂತಹ ಘಟನೆಗಳು ನಡೆಯಲು ಬಿಜೆಪಿಯೇ ಕಾರಣ. ಈಶ್ವರಪ್ಪ ಅಥವಾ ಯಾವುದೇ ಬಿಜೆಪಿ ನಾಯಕರು ತಮ್ಮ ಮಿತಿಯಲ್ಲಿರಬೇಕು.
ನಮ್ಮ ದೇಶ ಶಾಂತಿಯುತವಾಗಿರಬೇಕು. ನಮ್ಮ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ(H.D.Kumarswamy) ಹೇಳಿದರು.
ಕೆ.ಎಸ್ ಈಶ್ವರಪ್ಪ ಅವರು ಆಜಾನ್ ವಿರುದ್ಧ ನೀಡಿದ ಹೇಳಿಕೆ ಹೀಗಿದೆ : ಕೆ.ಎಸ್ ಈಶ್ವರಪ್ಪ ಅವರು ಆಜಾನ್‌ಗಾಗಿ ಬಳಸುವ ಧ್ವನಿವರ್ಧಕಗಳು ಜನರಿಗೆ,
ಮುಖ್ಯವಾಗಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆ ನೀಡುತ್ತವೆ ಎಂದು ಹೇಳಿದ್ದರು. ಆಜಾನ್ ಬಳಸದಿದ್ದರೇ ಅಲ್ಲಾಗೆ ಕೇಳಿಸಲ್ವಾ? ಜನರಿಗೆ ತೊಂದರೆ ನೀಡುತ್ತದೆ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾದರು.