Dharwad: ವಿದ್ಯುತ್ ಬಿಲ್ ಪಾವತಿ ಮಾಡದ ಸರ್ಕಾರಿ ಕಚೇರಿಗಳಿಗೆ ಎಸ್ಕಾಂಗಳು (Eskoms) ಕರೆಂಟ್ ಶಾಕ್ ನೀಡಿದ್ದು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿವೆ. ಇದರಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳಾಗದೇ ಜನಸಾಮಾನ್ಯರು ಹೈರಾಣಾಗಿದ್ದಾರೆ. ಅನುದಾನದ ಕೊರತೆಯಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ರಾಜ್ಯದ ಬೆಸ್ಕಾಂ (Bescom), ಮೆಸ್ಕಾಂ (Mescom), ಹೆಸ್ಕಾಂ (Hescom), ಜೆಸ್ಕಾಂ (Jescom), ಸೆಸ್ಕಾಂಗಳಿಗೆ (Sescoms) 7467 ಕೋಟಿ ರೂ.ಗಳ (2024 ನವೆಂಬರ್) ವರೆಗಿನ ವಿದ್ಯುತ್ ಬಿಲ್ ಅನ್ನು ಸರ್ಕಾರಿ ಕಚೇರಿಗಳು ಬಾಕಿ ಉಳಿಸಿಕೊಂಡಿವೆ. ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ಎಸ್ಕಾಂಗಳು ಬಾಕಿ ಮೊತ್ತವನ್ನು ಸಂಗ್ರಹಿಸಲು ಮುಂದಾಗಿವೆ. ಹೀಗಾಗಿ ಉಪನೋಂದಣಿ ಕಚೇರಿ (Sub-Registrar Office), ತಾಲೂಕು ಆಡಳಿತ ಕಚೇರಿ (Taluk Administrative Office), ನಗರ ಪಾಲಿಕೆ ಕಚೇರಿ (City Corporation Office), ಗ್ರಾಮ ಪಂಚಾಯಿತಿಗಳಿಗೆ (Gram Panchayats) ನೀಡಿರುವ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸುತ್ತಿವೆ. ಇದರಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅನುದಾನ ಕೊರತೆ : ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಪಾವತಿಗೆ (Electricity bill payment) ರಾಜ್ಯ ಸರ್ಕಾರ (State Govt) ಪ್ರತಿ ತ್ರೈಮಾಸಿಕವಾಗಿ ಬಿಡುಗಡೆ ಮಾಡುವ ಅನುದಾನ ಸಾಲುತ್ತಿಲ್ಲ. ಶೇ.30ರಷ್ಟು ಅನುದಾನ ಕೊರತೆಯುಂಟಾಗುತ್ತಿದೆ. ಹೀಗಾಗಿ ಸರ್ಕಾರಿ ಕಚೇರಿಗಳ (Government offices) ಬಾಕಿ ಮೊತ್ತ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಸರ್ಕಾರಿ ಕಚೇರಿಗಳ ಮೇಲೆ ಸೌರಫಲಕಗಳನ್ನು ಅಳವಡಿಸುವ ಯೋಜನೆಯು ಕುಂಟಿತಗೊಂಡಿದ್ದು, ವಿದ್ಯುತ್ ಬಿಲ್ ಮೊತ್ತವನ್ನು ಹೆಚ್ಚಿಸಿದೆ.
ವಿಪಕ್ಷಗಳಿಂದ ಟೀಕೆ : ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ (Current Bill) ಕಟ್ಟಲೂ ದುಡ್ಡಿಲ್ಲದಷ್ಟು ಪಾಪರ್ ಆಗಿದೆ ರಾಜ್ಯ ಸರ್ಕಾರ. ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ವಿವಿಧ ಎಸ್ಕಾಂಗಳಿಗೆ ₹7,467 ಕೋಟಿ ರೂಪಾಯಿ ವಿದ್ಯುತ್ ಬಿಳಿ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಿ ಕಚೇರಿಗಳ ಕರೆಂಟ್ ಬಿಲ್ ಕಟ್ಟಲೂ ಸಹ ಹಣವಿಲ್ಲದಂತಹ ಶೋಚನೀಯ ಸ್ಥಿತಿಗೆ ಕರ್ನಾಟಕದ ಹಣಕಾಸು (Finance of Karnataka) ಪರಿಸ್ಥಿತಿಯನ್ನು ಹಾಳುಗೆಡವಿದೆ ಈ ನಾಯಾಲಕ್ ಕಾಂಗ್ರೆಸ್ ಸರ್ಕಾರ (Congress Govt). ವಿದ್ಯುತ್ ಸಂಪರ್ಕ ಇಲ್ಲದೆ ಹಲವಾರು ಕಡೆಗಳಲ್ಲಿ ಮೊಬೈಲ್ ಟಾರ್ಚು ಬಳಸಿ ಸಿಬ್ಬಂದಿಗಳು ಕೆಲಸ ಮಾಡುವ ಪರಿಸ್ಥಿತಿ ಇದ್ದರೆ, ಅನೇಕ ಕಡೆ ಕಂಪ್ಯೂಟರ್ (Computer) ಇಲ್ಲದೆ ಅನ್ ಲೈನ್ ಸೇವೆ (Online service) ನೀಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಿಎಂ ಸಿದ್ದರಾಮಯ್ಯನವರೇ (CM Siddaramaiah), ವಿಪಕ್ಷಗಳು ಟೀಕೆ ಮಾಡಿದ ಕೂಡಲೇ ರಾಜ್ಯದ ಹಣಕಾಸು ಪರಿಸ್ಥಿತಿ ಸುಭದ್ರವಾಗಿದೆ ಎಂದು ತಿಪ್ಪೆ ಸರಿಸುವ ಕೆಲಸ ಮಾಡುತ್ತೀರಲ್ಲ, ಎಲ್ಲವೂ ಸರಿ ಇದ್ದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಕರೆಂಟ್ ಬಿಲ್ ಪಾವತಿ ಮಾಡಲೂ ಸಾಧ್ಯವಾಗದಷ್ಟು ಅನುದಾನದ ಕೊರತೆ ಯಾಕೆ ಎದುರಾಗಿದೆ? ಸರ್ಕಾರಿ ಕಚೇರಿಗಳು ಎಸ್ಕಾಂಗಳಿಗೆ ₹7,467 ಕೋಟಿ ರೂಪಾಯಿ ವಿದ್ಯುತ್ ಬಿಳಿ ಬಾಕಿ ಏಕೆ ಉಳಿಸಿಕೊಂಡಿದೆ? ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಅಂಚಿನಲ್ಲಿರುವ ತಾವು ಈ ರೀತಿ ದುರಾಡಳಿತದಿಂದ ತಮ್ಮ ಹೆಸರಿಗೆ ತಾವೇ ಯಾಕೆ ಮಸಿ ಬಳಿದುಕೊಳ್ಳುತ್ತಿದ್ದೀರಿ? ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ ಸತ್ಯಾಂಶವನ್ನು ಜನರ ಮುಂದಿಡಿ. ತಮ್ಮ ಪ್ರತಿಷ್ಠೆಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನ (Economic situation of the state) ಇನ್ನಷ್ಟು ಹಾಳುಗೆಡುವ ಬದಲು ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ ಎಂದಿವೆ.