ನವದೆಹಲಿ, ಮಾ. 17: ದೀರ್ಘಕಾಲೀನ ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಂಸ್ಥೆಯನ್ನು ಬಂಡವಾಳ ಸ್ನೇಹಿಯಾಗಿ ಮಾಡಲು ಸರ್ಕಾರ ಈಗಾಗಲೇ 2021 ರ ಬಜೆಟ್‌ನಲ್ಲಿ 20,000 ಕೋಟಿ ಹಣವನ್ನು ಎಫ್ ವೈ(ಫೈನಾನ್ಶಿಯಲ್ ಈಯರ್/ಆರ್ಥಿಕ ವರ್ಷ) 22 ರಲ್ಲಿ ನಿಗದಿಪಡಿಸಿದೆ.
“ಪರ್ಯಾಯ ಹೂಡಿಕೆ ನಿಧಿಯನ್ನು ಹೊಂದಲು ಈ ಪ್ರಯತ್ನಗಳನ್ನು ಕೈಗೆತ್ತಿಕೊಳ್ಳಲಾಯಿತು, ಆದರೆ ವಿವಿಧ ಕಾರಣಗಳಿಗಾಗಿ, ದೀರ್ಘಕಾಲೀನ ಸಮಸ್ಯೆಯನ್ನು ತಪ್ಪಿಸಲು ಹೆಚ್ಚಿನ ಹಣಕಾಸು ನಿಧಿಯ ಅಭಿವೃದ್ಧಿಯನ್ನು ಕೈಗೊಳ್ಳುತ್ತಿದ್ದೇವೆ” ಎಂದು ಸೀತಾರಾಮನ್ ಉಲ್ಲೇಖಿಸಿದ್ದಾರೆ.
ಕ್ಯಾಬಿನೆಟ್ ಈ ಮಸೂದೆಯನ್ನು ತೆರವುಗೊಳಿಸಿದೆ, ಅದರ ಮೂಲಕ ನಾವು ಸಂಸ್ಥೆ ಮತ್ತು ಸಾಂಸ್ಥಿಕ ವ್ಯವಸ್ಥೆಯನ್ನು ಹೊಂದಿದ್ದೇವೆ, ಇದು ದೀರ್ಘಾವಧಿಯ ಹಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ “ಎಂದು ಹಣಕಾಸು ಸಚಿವರು ಹೇಳಿದರು.
ಉದ್ದೇಶಿತ ಡಿ ಎಫ್ ಐ(ಡೆವೆಲಪ್ಮೆಂಟ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಶನ್) ಶೇಕಡಾ 50 ರಷ್ಟು ಅಧಿಕೃತವಲ್ಲದ ನಿರ್ದೇಶಕರನ್ನು ಹೊಂದಿರುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಮತ್ತು ಡಿ ಎಫ್ ಐ ಹತ್ತು ವರ್ಷಗಳ ಕಾಲ ಕೆಲವು ತೆರಿಗೆ ಪ್ರಯೋಜನಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಹಣಕಾಸು ಅಭಿವೃದ್ಧಿ ಸಂಸ್ಥೆಗೆ ಕೆಲವು ಭದ್ರತೆಗಳನ್ನು ನೀಡಲು ಯೋಜನೆ ಮಾಡುತ್ತಿದೆ. ಈ ಮೂಲಕ ಹಣದ ವೆಚ್ಚವು ಕಡಿಮೆಯಾಗುತ್ತದೆ. “ಇವೆಲ್ಲವೂ ಡಿ ಎಫ್ ಐ ಆರಂಭಿಕ ಬಂಡವಾಳವನ್ನು ಹತೋಟಿಗೆ ತರಲು ಸಹಾಯ ಮಾಡುತ್ತದೆ ಭಾರತದ ಬಾಂಡ್ ಮಾರ್ಕೇಟ್ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಹಣಕಾಸು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ಡಿ ಎಫ್ ಐ ಶೇ. 100 ರಷ್ಟು ಸರ್ಕಾರಿ ಮಾಲೀಕತ್ವದೊಂದಿಗೆ ಪ್ರಾರಂಭವಾಗಲಿದೆ ಮತ್ತು ಕ್ರಮೇಣ ಅದು ಶೇ. 26ಕ್ಕೆ ಇಳಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.