• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಯುರೋಪಿಯನ್ ಯೂನಿಯನ್ ಎಚ್ಚರಿಕೆ: ರಷ್ಯಾ ಜೊತೆಗಿನ ಉತ್ತಮ ಬಾಂಧವ್ಯದಿಂದ ಭಾರತ–ಯುರೋಪ್ ವ್ಯಾಪಾರ ಒಪ್ಪಂದಕ್ಕೆ ಅಡ್ಡಿ

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ರಾಜಕೀಯ, ವಿಜಯ ಟೈಮ್ಸ್‌, ಷೇರುಪೇಟೆ
ಯುರೋಪಿಯನ್ ಯೂನಿಯನ್ ಎಚ್ಚರಿಕೆ: ರಷ್ಯಾ ಜೊತೆಗಿನ ಉತ್ತಮ ಬಾಂಧವ್ಯದಿಂದ ಭಾರತ–ಯುರೋಪ್ ವ್ಯಾಪಾರ ಒಪ್ಪಂದಕ್ಕೆ ಅಡ್ಡಿ
0
SHARES
34
VIEWS
Share on FacebookShare on Twitter
  • ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರೆ ವ್ಯಾಪಾರ ಒಪ್ಪಂದಕ್ಕೆ ಅಡ್ಡಿ ಎಂದ ಯೂರೋಪ್
  • ಭಾರತದ ತೈಲ ಖರೀದಿಗೆ ಯುರೋಪ್‌ ಹೊಸ ಸವಾಲು
  • ಅಮೆರಿಕ ಸುಂಕ, ಯುರೋಪ್ ಒತ್ತಡ – ಭಾರತಕ್ಕೆ ದ್ವಂದ್ವ ಸ್ಥಿತಿ (Europe poses new challenge to Indias oil purchases)

Brussels: ಯುರೋಪಿಯನ್ ಯೂನಿಯನ್ (EU) ತನ್ನ ಹೊಸ ಭಾರತ–ಯುರೋಪ್ ತಂತ್ರಜ್ಞಾನದ ಘೋಷಣೆಯ ವೇಳೆ,

ಭಾರತವು ರಷ್ಯಾದ ತೈಲ ಖರೀದಿ ಮತ್ತು ಮಸ್ಕೋವೊಂದಿಗಿನ ಸೈನಿಕ ಅಭ್ಯಾಸಗಳಲ್ಲಿ ಭಾಗವಹಿಸುತ್ತಿರುವುದು ವ್ಯಾಪಾರ ಮಾತುಕತೆಗಳಿಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದೆ.

ಇನ್ನು ಈ ಕುರಿತಾಗಿ EU ಯ ಅಗ್ರ ದೌತ್ಯಾಧಿಕಾರಿ ಕಾಜಾ ಕಾಲ್ಲಾಸ್ ನಮ್ಮ ಪಾಲುದಾರಿಕೆ ಕೇವಲ ವ್ಯಾಪಾರದ ಬಗ್ಗೆ ಮಾತ್ರವಲ್ಲ, ನಿಯಮ ಆಧಾರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ರಕ್ಷಿಸುವುದರ ಬಗ್ಗೆ ಕೂಡ ಇದೆ.

ಆದರೆ ತೈಲ ಖರೀದಿ ಹಾಗೂ ಸೈನಿಕ ಅಭ್ಯಾಸಗಳಲ್ಲಿ ಭಾಗವಹಿಸುವುದು ನಮ್ಮ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಅಡ್ಡಿಯಾಗುತ್ತದೆ ಎಂದಿದ್ದಾರೆ.

ಅವರು ಭಾರತವು ರಷ್ಯಾದಿಂದ ಸಂಪೂರ್ಣವಾಗಿ ದೂರವಾಗುವುದಿಲ್ಲವೆಂದು ತಿಳಿದಿದ್ದರೂ ಕೂಡ ವಿಷಯಗಳನ್ನು ಚರ್ಚೆ ಮೂಲಕ ಬಗೆಹರಿಸುವ ಪ್ರಯತ್ನ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಭಾರತವು ರಷ್ಯಾ–ಬೆಲಾರಸ್ ಜೊತೆ ನಡೆದ ಝಾಪಾಡ್ (Zapad) ಸೈನಿಕ ಅಭ್ಯಾಸಗಳಲ್ಲಿ ಪಾಲ್ಗೊಂಡಿತ್ತು. ಇದು NATO ಗಡಿಯ ಸಮೀಪ ನಡೆದಿದ್ದರಿಂದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಚಿಂತೆ ಹುಟ್ಟಿಸಿದೆ.

Europe poses new challenge to Indias oil purchases
ಅದೇ ಸಮಯದಲ್ಲಿ, ರಷ್ಯಾ ಮೇಲೆ ಯುರೋಪ್ ನಿರ್ಬಂಧ ಹೇರಿದ ನಂತರ ಭಾರತವು ಪ್ರಮುಖ ತೈಲ ಖರೀದಿದಾರನಾಗಿ ಹೊರಹೊಮ್ಮಿದೆ. ಇದರಿಂದ ಭಾರತಕ್ಕೆ ಸಾವಿರಾರು ಕೋಟಿ ಹಣ ಉಳಿಯುತ್ತಿದ್ದರೆ,

ರಷ್ಯಾಕ್ಕೆ ಉತ್ತಮ ಮಾರುಕಟ್ಟೆ ದೊರಕುತ್ತಿದೆ. ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತ ಮತ್ತು ಚೀನಾದ ಮೇಲೆ ಹೆಚ್ಚಿನ ಸುಂಕ ವಿಧಿಸುವಂತೆ ಯುರೋಪ್ ಮೇಲೆ ಒತ್ತಡ ಹೇರಿದ್ದರು.

ಆದರೆ ಯುರೋಪ್ ಈಗ ಭಾರತ ಜತೆ ವ್ಯಾಪಾರ ಒಪ್ಪಂದಕ್ಕೆ ಮುನ್ನಡೆಯುತ್ತಿರುವುದರಿಂದ ಆ ಸಾಧ್ಯತೆ ಕಡಿಮೆ ಎಂದು EU ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಟ್ರಂಪ್ ಭಾರತದಿಂದ ಆಗುವ ಹೆಚ್ಚಿನ ರಫ್ತುಗಳ ಮೇಲೆ 50% ಸುಂಕ ವಿಧಿಸಿದ್ದರಿಂದ ದೆಹಲಿ–ವಾಷಿಂಗ್ಟನ್ ಸಂಬಂಧಗಳು ಕೂಡ ಸಂಕಷ್ಟದಲ್ಲಿವೆ.

ಇನ್ನು ಈ ಕುರಿತಾಗಿ ಮಾತನಾಡಿರುವ EU ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು, ಈ ವರ್ಷ ಅಂತ್ಯದೊಳಗೆ ವ್ಯಾಪಾರ ಒಪ್ಪಂದ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ EU ವ್ಯಾಪಾರ ಮುಖ್ಯಸ್ಥ ಮಾರೋಸ್ ಸೆಫ್ಕೊವಿಕ್ ಅವರು, ಭಾರತ ಭೇಟಿಯ ನಂತರ “ಇನ್ನಷ್ಟು ಪ್ರಗತಿ ನಿರೀಕ್ಷಿಸಿದ್ದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತ–ಯುರೋಪಿಯನ್ ಒಕ್ಕೂಟಗಳ ವ್ಯಾಪಾರ 90% ಹೆಚ್ಚಾಗಿದೆ.ಯುರೋಪ್ ಭಾರತಕ್ಕೆ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿದ್ದು ಮುಂದಿನ ವರ್ಷ ಆರಂಭದಲ್ಲಿ

ಎರಡೂ ಬದಿಗಳ ಹಿರಿಯ ನಾಯಕರ ಶೃಂಗಸಭೆ ನಡೆಸಲು ತೀರ್ಮಾನಿಸಿವೆ. ಈಗಾಗಲೇ ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಾಗಿ ರಷ್ಯಾದ ತೈಲವನ್ನು ಖರೀದಿಸುತ್ತಿರುವುದು,

ಮತ್ತು ಯುರೋಪ್ ತನ್ನ ಭದ್ರತೆಗಾಗಿ ರಷ್ಯಾ ವಿರುದ್ಧ ಒತ್ತಡ ಹೇರಲು ಪ್ರಯತ್ನಿಸುತ್ತಿರುವುದು ಈ ಎರಡು ವಿರುದ್ಧ ನಿಲುವುಗಳು ವ್ಯಾಪಾರ ಮಾತುಕತೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಇದನ್ನು ಓದಿ : ಅಮೆರಿಕದ ಹೆಚ್ಚುವರಿ ತೆರಿಗೆ ಹೊರೆ: ಬೆಂಗಳೂರಿನ ಸಣ್ಣ ಉದ್ಯಮಗಳಿಗೆ ಕತ್ತರಿ ಬೀಳುವ ಆತಂಕ

ಆದರೆ, ಉಭಯ ಬದಿಗಳು ಸಂಬಂಧವನ್ನು ಕಾಪಾಡಿಕೊಳ್ಳಲು ಆಸಕ್ತಿ ತೋರಿಸುತ್ತಿರುವುದರಿಂದ, ಮುಂದಿನ ವರ್ಷದಲ್ಲಿ ಭಾರತ–ಯುರೋಪ್ ಸಂಬಂಧಗಳು ಯಾವ ದಿಕ್ಕಿಗೆ ತಿರುಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. (Europe poses new challenge to Indias oil purchases)

Tags: Business AgreementDonald TrumpEuropean UnionIndiaKaja KallasPM Narendra Modirussia

Related News

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕುಮಾರಸ್ವಾಮಿ ಪಟ್ಟು: ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ
ರಾಜಕೀಯ

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕುಮಾರಸ್ವಾಮಿ ಪಟ್ಟು: ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ

October 15, 2026
ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ

October 15, 2026
ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

October 15, 2026
ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ

October 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.