Bengaluru: ಒಂದು ವೇಳೆ ಭಗವಂತ ಬಂದರೂ ಎರಡ್ಮೂರು ವರ್ಷದಲ್ಲಿ ಬೆಂಗಳೂರನ್ನು (Bangalore) ಸರಿಪಡಿಸಲು ಸಾಧ್ಯವಿಲ್ಲ. ಭವಿಷ್ಯದ ಬೆಂಗಳೂರಿಗಾಗಿ (Future Bengaluru) ಈಗಿನಿಂದಲೇ ಉತ್ತಮ ಯೋಜನೆ (Good plan) ರೂಪಿಸಿದರೆ ಮಾತ್ರ ಸರಿಪಡಿಸಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Deputy Chief Minister D.K.Sivakumar) ಹೇಳಿದ್ದಾರೆ.ಬಿಬಿಎಂಪಿ ಕೇಂದ್ರ ಕಚೇರಿ (BBMP Head Office) ಆವರಣದ ಡಾ। ರಾಜಕುಮಾರ್ ಗಾಜಿನ ಮನೆಯಲ್ಲಿ (Dr. Rajkumar glass house) ಆಯೋಜಿಸಿರುವ ಮೂರು ದಿನಗಳ ನಮ್ಮ ರಸ್ತೆ ಕಾರ್ಯಾಗಾರಕ್ಕೆ (Road workshop) ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ರಸ್ತೆಗಳು (Bangalore roads) ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯ ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ (Sidewalk), ಹಸಿರು ವಲಯ (Green zone) ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ ಎಂದರು.

ಇನ್ನು ನಗರದಲ್ಲಿ ಏಕ ರೂಪ ವ್ಯವಸ್ಥೆ (Single form system) ಇರಬೇಕು ಎಂಬ ಕಾರಣಕ್ಕೆ ರಸ್ತೆ ಕೈಪಿಡಿ ರಚನೆಗೆ (Road Manual) ಸೂಚಿಸಲಾಗಿತ್ತು. ಅದರಂತೆ ಇದೀಗ ರೂಪಿಸಲಾಗಿದ್ದು, ಈ ಕೈಪಿಡಿ ರಸ್ತೆ ಬದಿ ಸಸಿಗಳನ್ನು (Roadside plants) ಎಲ್ಲಿ ನೆಡಬೇಕು, ಕಂಬಗಳು ಎಲ್ಲಿರಬೇಕು, ಮುಖ್ಯರಸ್ತೆ ಹೇಗಿರಬೇಕು, ವಾರ್ಡ್ ರಸ್ತೆಗಳು (Ward Roads) ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು (Sidewalk) ಹೇಗೆ ನಿರ್ಮಾಣ ಮಾಡಬೇಕು. ಬಸ್ ನಿಲ್ದಾಣಗಳ ವಿನ್ಯಾಸ (Design of bus stops), ಮೆಟ್ರೋ ಪಿಲ್ಲರ್ಗಳು (Metro Pillars), ವೃತ್ತಗಳ ಸೌಂದರ್ಯೀಕರಣದ (Beautification of Circles) ಬಗ್ಗೆ ಹೊಸ ಆಲೋಚನೆಗಳನ್ನು ಇಲ್ಲಿ ನೋಡಬಹುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಸಂಚಾರ ದಟ್ಟಣೆ (Traffic congestion in the city) ಕಡಿಮೆ ಮಾಡುವ ಉದ್ದೇಶದಿಂದ ಸುರಂಗ ರಸ್ತೆ ನಿರ್ಮಾಣಕ್ಕೆ (Construction of tunnel road) ಮುಂದಾಗಿದ್ದೇವೆ. ಆದರೆ, ತಾಂತ್ರಿಕ ಸಮಸ್ಯೆಯಿಂದ (Technical problem) ಈ ವರೆಗೆ ಟೆಂಡರ್ (Tender) ಆಹ್ವಾನಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಭೂಸ್ವಾಧೀನ ಸಮಸ್ಯೆ (Land acquisition problem), ಹಣಕಾಸಿನ ಸಮಸ್ಯೆ (Financial problem) ಹಾಗೂ ತಾಂತ್ರಿಕ ಸಮಸ್ಯೆಗಳು (Technical issues) ಅಡ್ಡಿಯಾಗುತ್ತಿವೆ . ಅಲ್ಲದೆ ನಗರದಲ್ಲಿ ನೇತಾಡುವ ರೀತಿಯಲ್ಲಿ ಹಾಕಿರುವ ಎಲ್ಲಾ ಕೇಬಲ್ಗಳನ್ನು (Cables) ಕಿತ್ತು ಹಾಕಬೇಕು. ಕಡ್ಡಾಯವಾಗಿ ರಸ್ತೆ ಪಕ್ಕದಲ್ಲಿ ಅಳವಡಿಕೆ ಮಾಡಿರುವ ಡಕ್ ಮೂಲಕ ಕೇಬಲ್ ಸಾಗಿಸಬೇಕು. ಏನಾದರೂ ಬದಲಿ ವ್ಯವಸ್ಥೆ (Replacement system) ಮಾಡಿಕೊಳ್ಳುತ್ತಾರೆ ಎಂದು ಇಷ್ಟು ದಿನ ಕಾದು ನೋಡಿದೆ. ಯಾವುದೇ ಬದಲಾವಣೆ ಆಗಿಲ್ಲ, ಕೇಬಲ್ಗಳನ್ನು ಕತ್ತರಿಸಿ ಎಂದು ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್ (DK Sivakumar) ಸೂಚಿಸಿದ್ದಾರೆ.ನಮ್ಮ ರಸ್ತೆ ಕೈಪಿಡಿ’ಯನ್ನು ಉಪ ಮುಖ್ಯಮಂತ್ರಿ (Deputy Chief Minister) ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದರು. ಕೈಪಿಡಿಯಲ್ಲಿ ರಸ್ತೆಯ ವಿನ್ಯಾಸ (Manual road design), ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಚಿತ್ರ ಸಮೇತ ವಿವರಿಸಲಾಗಿದೆ. ಈ ಕೈಪಿಯು ಬಿಬಿಎಂಪಿಯ (BBMP) 12,878.78 ಕಿ.ಮೀ. ಉದ್ದ ರಸ್ತೆಗಳಲ್ಲಿ (Long roads) ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದರ ಪ್ರಮಾಣಿತ ಕಾರ್ಯ ವಿಧಾನ (Standard operating procedure) (SOP) ಅಲ್ಲಿ ತಿಳಿಸಲಾಗಿದೆ. ಇನ್ನು ಡಿಕೆ ಶಿವಕುಮಾರ್ (DK Sivakumar) ಅವರ ಈ ಹೇಳಿಕೆಗೆ ಹಲವಾರು ಮಂದಿ ಸರ್ಕಾರ (Govt) ನಿಮ್ಮದು ನೀವೆ ಹೀಗೆ ಹೇಳಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.