ಇವಿಎಂ ಯಂತ್ರಗಳ ಸಾಗಾಟದಲ್ಲಿ ಶಿಷ್ಟಾಚಾರ ಲೋಪವಾಗಿದೆ ಎಂದು ಅಧಿಕಾರಿಯೊಬ್ಬರು ಒಪ್ಪಿಕೊಂಡಿರುವುದುರ ಬಗ್ಗೆ ಸಮಾಜವಾದಿ ಪಕ್ಷ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ವಾರಣಾಸಿಯಲ್ಲಿ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಲಾರಿಯಲ್ಲಿ ಇವಿಎಂ ಸಾಗಾಟ ಮಾಡಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಈಗ ಅಧಿಕಾರಿಯೊಬ್ಬರು ಇವಿಎಂ ಯಂತ್ರಗಳ ಸಾಗಾಟದ ಶಿಷ್ಟಾಚಾರದಲ್ಲಿ ಲೋಪವಾಗಿದೆ. ಇದರಲ್ಲಿ ನಮ್ಮ ತಪ್ಪಿದೆ ಎಂದು ಒಪ್ಪಿಕೊಂಡಿದ್ದಾರೆ.

ಅಧಿಕಾರಿಯ ಈ ಹೇಳಿಕೆಯನ್ನು ಸಮಾಜವದಿ ಪಕ್ಷ ಟ್ವೀಟ್ ಮಾಡಿದ್ದು, ಇದೊಂದು ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಮತ್ತೊಂದೆಡೆ ಪತ್ರಕರ್ತರೊಡನೆ ಮಾತನಾಡಿದ ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಇವಿಎಂಗಳ ಸಾಗಾಟದಲ್ಲಿ ತಪ್ಪಾಗಿದೆ. ಆ ಯಂತ್ರಗಳು ಯಾವುದೇ ಕಾರಣಕ್ಕೂ ಬಳಸಿಲ್ಲ! ತರಬೇತಿ ಉದ್ದೇಶಕ್ಕಾಗಿ ಅದನ್ನು ಬಳಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಮತದಾನಕ್ಕೆ ಬಳಸುವ ಇವಿಎಂಗಳನ್ನು ಬಳಸಿಕೊಳ್ಳುವುದು ಅಸಾಧ್ಯ!
ಸುಖಾಸುಮ್ಮನೆ ಮಾತನಾಡುವವರು ಈ ರೀತಿಯಲ್ಲೇ ಹೇಳುತ್ತಾರೆ. ಈ ಬಗ್ಗೆ ನಾನು ನಿಮಗೆ ಹೆಚ್ಚಿನ ಖಾತರಿ ಪಡಿಸುತ್ತೇನೆ. ನಾನಾ ಜಿಲ್ಲೆಗಳ ಇವಿಎಂ ಯಂತ್ರಗಳಲ್ಲಿ ಉಲ್ಲಂಘನೆಯಾಗಿರುವ ಮಾಹಿತಿ ದೊರೆತಿದೆ. ಯಾರ ಆದೇಶದ ಮೇಲೆ ಇದು ನಡೆಯುತ್ತಿದೆ. ಸಿಎಂ ಯೋಗಿ ಅದಿತ್ಯನಾಥ್ ಕಛೇರಿಯಿಂದ ಯಾವುದಾದರೂ ಒತ್ತಡಕ್ಕೆ ಒಳಗಾಗಿದ್ದಾರೆಯೇ? ಈ ಬಗ್ಗೆ ಚುನಾವಣಾ ಆಯೋಗವು ಸ್ಪಷ್ಟಪಡಿಸಿಬೇಕು ಎಂದು ಸಮಾಜವಾದಿ ಪಕ್ಷ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡುವ ಮೂಲಕ ಪ್ರಶ್ನಿಸಿದೆ.